Breaking News

ಆಯನೂರು ಬಳಿ ಹಿಟ್ & ರನ್‌ಗೆ ಲೈನ್‌ಮ್ಯಾನ್‌ ಬಲಿ

Spread the love

ಶಿವಮೊಗ್ಗ: ಆಯನೂರು  ಬಳಿ ಹಿಟ್ & ರನ್‌ಗೆ  ಮೆಸ್ಕಾಂ ಲೈನ್‌ಮ್ಯಾನ್‌  ಬಲಿಯಾಗಿದ್ದಾರೆ.

ಹಾರನಹಳ್ಳಿ ಮೆಸ್ಕಾಂ ಶಾಖೆಯ ತಿರುಮಲೇಶ್ ರೆಡ್ಡಿ (30) ಮೃತ ದುರ್ದೈವಿ. ಇವರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಮೂಲದವರಾಗಿದ್ದಾರೆ. ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ವಾಪಸ್‌ ಆಗುವಾಗ ಈ ಅಪಘಾತ ನಡೆದಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ.

ಮೈಸವಳ್ಳಿ- ವೀರಣ್ಣನಬೆನವಳ್ಳಿಯಲ್ಲಿ ವಿದ್ಯುತ್ ದುರಸ್ತಿಗೆ ಅವರು ತೆರಳಿದ್ದರು. ಅಲ್ಲಿಂದ ವಾಪಸ್‌ ಆಗುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ವಾಹನ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಆಶಾ ಕಾರ್ಯಕರ್ತೆಯರ ಸೇವೆ ಕಡೆಗಣಿಸುವ ಉದ್ದೇಶವಿಲ್ಲ: ಯು.ಟಿ ಖಾದರ್ ಸ್ಪಷ್ಟನೆ

Spread the loveಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಆರೋಗ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ