Breaking News

ಮುರಗೋಡ ದುರ್ಗಾದೇವಿ ಜಾತ್ರಾ ಮಹೋತ್ಸವ ಆರಂಭ

Spread the love

ಮುರಗೋಡ: ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮಾ.30ರವರೆಗೆ ಜರುಗಲಿದೆ. ದುರ್ಗಾದೇವಿಯ ದ್ವಾರ ಬಾಗಿಲು ಪೂಜೆ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.

ಮಾ.25ರಂದು ಬಸವೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗುವುದು. ಮಾ.26ರಂದು ವಿವಿಧ ಕಲಾ ಹಾಗೂ ಭಜನಾ ತಂಡದಿಂದ ಭಜನೆ ಜಾಗರಣೆ ಕಾರ್ಯಕ್ರಮ ಜರುಗಲಿದೆ. ಮಾ.27ರಂದು ಬೆಳಗ್ಗೆ ದುರ್ಗಾದೇವಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಸಲ್ಲಿಸಲಾಗುವುದು. ಸಂಜೆ 5 ಗಂಟೆಗೆ ವಿವಿಧ ವಾದ್ಯ ಮೇಳ, ಸುಮಂಗಲೆಯರ ಕುಂಭ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದುರ್ಗಾದೇವಿ ಪಲ್ಲಕಿ ಉತ್ಸವ ಹಾಗೂ ಭಂಡಾರ ಜಾತ್ರೆ ಜರುಗಲಿದೆ. ರಾತ್ರಿ 8ಗಂಟೆಗೆ ಅಗ್ನಿ ಹಾಯುವುದು ಹಾಗೂ ಪ್ರಸಾದ ನಡೆಯಲಿದೆ. ಮಾ.28ರಂದು ಸಂಜೆ 7ಗಂಟೆಗೆ ಸಾಂಸತಿಕ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಾ.29ರಂದು ಬೆಳಗ್ಗೆ ದುರ್ಗಾದೇವಿಗೆ ಕುಂಕುಮಾರ್ಚನೆ, ಅಭಿಷೇಕ ಹಾಗೂ ನೈವೇದ್ಯ ಜರುಗಲಿದೆ. ರಾತ್ರಿ 8ಗಂಟೆಗೆ ಸೀಮೆಗೆ ಕಳಿಸುವ ಕಾರ್ಯಕ್ರಮದಲ್ಲಿ ಪಲ್ಲಕ್ಕಿ ಸೊಗಲಕ್ಕೆ ಕೂಂಡೊಯ್ಯಲಾಗುವುದು. ಮಾ.30ರಂದು ಪಲ್ಲಕ್ಕಿ ಸ್ವಗ್ರಾಮಕ್ಕೆ ಸ್ವಾಗತಿಸಿ ಧಾರ್ಮಿಕ ಕೈಂಕರ್ಯ ನೆರವೇರಿಸಿ ದೇವಿ ಪಲ್ಲಕ್ಕಿ ಹಾಗೂ ದೇವಸ್ಥಾನ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.


Spread the love

About Laxminews 24x7

Check Also

ಪಿಕೆಪಿಎಸ್ ದಲ್ಲಿ ಸೇವೆ ಸಲ್ಲಿಸಿದ ಬಸಪ್ಪಾ ಶಿದ್ನಾಳ ನಿಧನ

Spread the loveಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಹಿರಿಯರು ಶಿದ್ನಾಳ ಮನೆತನದ ಬಸಪ್ಪಾ ಬಾಳಪ್ಪ ಶಿದ್ನಾಳ ಶುಕ್ರವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ