Breaking News

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್‌ – ಹಿಂದೂ ಯುವತಿ ಮೇಲೆ ಅತ್ಯಾಚಾರ ಆರೋಪ

Spread the love

ಹುಬ್ಬಳ್ಳಿ:‌ ಜಿಮ್‌ ಟ್ರೈನರ್‌ ಸಮೀರ್ ಮುಲ್ಲಾ ಲವ್‌ ಜಿಹಾದ್‌ ಪ್ರಕರಣ  ರಾಜ್ಯಾದ್ಯಂತ ಸದ್ದು ಮಾಡುತ್ತಿರುವಾಗಲೇ ಅಂತಹದ್ದೇ ಮತ್ತೊಂದು ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಮೀರ್‌ ಪ್ರಕರಣದ ಬಳಿಕ ಧೈರ್ಯದಿಂದ ಹೊರ ಬಂದ ಸಂತ್ರಸ್ತ ಯುವತಿ ಹಿಂದೂಪರ ಸಂಘಟನೆಗಳ ನೆರವಿನಿಂದ ಕೇಶ್ವಾಪುರ ಠಾಣೆಯಲ್ಲಿ ದಾಖಲಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಮುಫೀಸ್ ಮಿಯಾನ್ನವರ್ ಎಂಬಾತನ ವಿರುದ್ಧ ಅತ್ಯಾಚಾರ ಪ್ರಕರಣ  ದಾಖಲಾಗಿದೆ. ಯುವತಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಸಂತ್ರಸ್ತೆ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮುಸ್ಲಿಂ ಯುವಕ ) ಮುಫೀಸ್ ಮಿಯಾನ್ನವರ್ ಹಿಂದೂ ಮರಾಠ ಯುವತಿಯೊಂದಿಗೆ ಪ್ರೀತಿಸುವ ನಾಟಕವಾಗಿ ಲೈಂಗಿ ದೌರ್ಜನ್ಯ ಎಸಗಿದ್ದನಂತೆ. ಬಳಿಕ ಧಾರವಾಡದಲ್ಲಿ ರಿಜಿಸ್ಟರ್‌ ಮ್ಯಾರೇಜ್‌ ಆಗಲು ತಯಾರಿ ಕೂಡ ನಡೆಸಿದ್ದ. ಕಳೆದ ಆಗಸ್ಟ್‌ನಲ್ಲಿ ಮದುವೆ ನೋಂದಣಿ ಮಾಡಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ವಿಷಯ ತಿಳಿದ ಯುವತಿ ಕುಟುಂಬಸ್ಥರು ಮದುವೆ ನಿಲ್ಲಿಸಿದ್ದರು.

ಇದಾದ ಬಳಿಕ ಮುಫೀಸ್‌ ಯುವತಿಗೆ ಬ್ಲ್ಯಾಕ್‌ ಮೇಲ್‌ ಮಾಡೋಕೆ ಶುರು ಮಾಡಿದ್ದಾನೆ. ತನ್ನ ಖಾಸಗಿ ವಿಡಿಯೋ ವೈರಲ್‌ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಯುವತಿ ಮನೆಯಲ್ಲಿ ಒಂಟಿಯಾಗಿದ್ದಾಗ, ಮನೆಗೇ ನುಗ್ಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಷಯ ಯಾರಿಗಾದ್ರೂ ತಿಳಿಸಿದ್ರೆ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎದಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟು ದಿನ ಜೀವ ಭಯದಿಂದ ದೂರು ನೀಡಲು ಹಿಂದೇಟು ಹಾಕಿದ್ದ ಯುವತಿ, ಸಮೀರ್‌ ಮುಲ್ಲಾ ಪ್ರಕರಣದ ಬಳಿಕ, ಹಿಂದೂ ಸಂಘಟನೆಗಳ ನೆರವು ಪಡೆದು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಪವಿತ್ರ ರಂಜಾನ್ ಹಬ್ಬದಂದು ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು – 3 ಸಾವಿರ ಮಠಕ್ಕೆ ತೆರಳಿ ನಮನ

Spread the love ಹುಬ್ಬಳ್ಳಿ: ಪವಿತ್ರ ರಂಜಾನ್ ಹಬ್ಬವನ್ನು ವಾಣಿಜ್ಯ ನಗರದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ವಿವಾದಿತ ಈದ್ಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ