ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಕ್ಕೇರಿ ಘಟಕದಿಂದ ನೂತನ ಬೆಳಗಾವಿ – ಪಂಡರಪುರ ನೇರ ಬಸ್ ಸೌಲಭ್ಯ ಪ್ರಾರಂಭವಾದ ಹಿನ್ನಲೆಯಲ್ಲಿ ಹುಕ್ಕೇರಿ ಪಂಡರಿನಾಥ ಭಕ್ತ ಮಂಡಳಿ ವತಿಯಿಂದ ಹುಕ್ಕೇರಿ ಬಸ್ ನಿಲ್ದಾಣದಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಸತ್ಕರಿಸಿ ಸಾರಿಗೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಹುಕ್ಕೇರಿ ಬಸ್ ನಿಲ್ದಾಣದಲ್ಲಿ ನೂತನ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಗುರುರಾಜ ಕುಲಕರ್ಣಿ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು ಪಂಡರಪುರಕ್ಕೆ ಹೋಗಬೇಕಾದರೆ ನೇರ ಬಸ್ ಇಲ್ಲದೆ ಮಿರಜ ಮಾರ್ಗವಾಗಿ ಹೋಗಬೆಕಾಗಿತ್ತು ಇದರಿಂದ ಪಂಡರಿನಾಥ ಭಕ್ತರ ತೊಂದರೆ ಗಮನಿಸಿ ಹುಕ್ಕೇರಿ ಘಟಕದಿಂದ ನೇರ ಬಸ್ ಸೌಲಭ್ಯ ಪ್ರಾರಂಭಿಸಿದ ಸಾರಿಗೆ ಅಧಿಕಾರಿಗಳಿಗೆ ಭಕ್ತ ಮಂಡಳಿ ವತಿಯಿಂದ ಅಬಿನಂದಿಸಲಾಗುವದು ಎಂದರು
ಭಕ್ತ ಮಂಡಳಿ ಸದಸ್ಯ ಮಾತನಾಡಿ ನಮ್ಮ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳಿಗೆ ಕೃತಜ್ಞತೆ ಹೇಳಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಸಾರಿಗೆ ಘಟಕದ ಅಧಿಕಾರಿಗಳು ,ಸಾರ್ವಜನಿಕರು ಉಪಸ್ಥಿತರಿದ್ದು ಹರ್ಷ ವ್ಯಕ್ತ ಪಡಿಸಿದರು.
Laxmi News 24×7