Breaking News

Daily Archives: ನವೆಂಬರ್ 28, 2026

ಬೆಂಗಳೂರಿನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ – ಪ್ರಿಯಕರನಿಂದಲೇ ದುಷ್ಕೃತ್ಯ

ಬೆಂಗಳೂರು: ನಗರದ ಕಾಟನ್ ಪೇಟೆಯ ಮಸ್ತಾನ್ ದರ್ಗಾ ಬಳಿಯ  ಲಾಡ್ಜ್‌ವೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯನ್ನು ಪ್ರಿಯಕರ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇಬ್ಬರು ಕೂಡ ಕೇರಳದ ಆಡೂರು ಮೂಲದವರಾಗಿದ್ದು, ಗಂಗಾ ಕೊಲೆಯಾದ ವಿದ್ಯಾರ್ಥಿನಿ. ಪ್ರಿಯಕರನನ್ನು ಗೋಕುಲ್ ಕೃಷ್ಣ ಎಂದು ಗುರುತಿಸಲಾಗಿದೆ. ಮೃತ ಗಂಗಾ ಹಾಗೂ ಆರೋಪಿ ಗೋಕುಲ್ ಇಬ್ಬರು ಕಳೆದ ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊಲೆಗೆ ಮುನ್ನ ಆರೋಪಿ ಚಾಕು ಖರೀದಿ ಮಾಡಿದ್ದು, ಇಂದು (ನ.27) ಬೆಳಿಗ್ಗೆ 10 …

Read More »

ಸರ್ಕಾರಿ ಕಚೇರಿಗಳ 103 ಕೋಟಿ ವಿದ್ಯುತ್ ಬಿಲ್ ಬಾಕಿ – ವಸೂಲಿಗಾಗಿ ಅಖಾಡಕ್ಕಿಳಿದ ಸೆಸ್ಕ್, ಸಂಕಷ್ಟದಲ್ಲಿ ಜನಸಾಮಾನ್ಯರು

ಚಾಮರಾಜನಗರ: ಸರ್ಕಾರಕ್ಕೆ ಜನರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸಾಮರ್ಥ್ಯವಿದೆ. ಆದರೆ ಇಲ್ಲಿ ಸರ್ಕಾರಿ ಕಚೇರಿಗಳು  103 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಜನಸಾಮಾನ್ಯರಿಗೆ ತೊಂದರೆ ಎದುರಾಗಿದೆ. ಹೌದು, ಚಾಮರಾಜನಗರ  ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳು ಬರೋಬ್ಬರಿ 103 ಕೋಟಿಗೂ ಅಧಿಕ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಬಿಲ್ ಪಾವತಿಸುವಂತೆ ಪದೇಪದೇ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬಾಕಿ ವಸೂಲಿಗೆ ಸೆಸ್ಕ್ ಅಧಿಕಾರಿಗಳು ಅಖಾಡಕ್ಕಿಳಿದಿದ್ದಾರೆ. …

Read More »

ಚಳಿಗಾಲದಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣ – ಚಾಲಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ KSRTC ಸೂಚನೆ

ಬೆಂಗಳೂರು: ಚಳಿಗಾಲದಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ವಾಹನ ಚಲಾಯಿಸುವಾಗ ಪಾದಾಚಾರಿಗಳು, ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸಲು ಚಾಲಕರಿಗೆ ಕೆಎಸ್‌ಆರ್‌ಟಿ  ಸೂಚಿನೆ ನೀಡಿದೆ. ವಾಹನ ಚಲಾಯಿಸುವಾಗ ರಾತ್ರಿ ಸಮಯದಲ್ಲಿ, ಬೆಳಗಿನ ಜಾವ ಕಡಿಮೆ ಗೋಚರತೆ ಹಾಗೂ ಮಂಜಿನ ಸಮಯದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ಹೊರಡುವ ಮುನ್ನ ವಾಹನದ ಹೆಡ್‌ಲೈಟ್, ಇಂಡಿಕೇಟರ್, ಬ್ರೇಕ್‌ಲೈಟ್ ಮತ್ತು ವೈಪರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ. ಮಂಜು ಅಥವಾ ಕಡಿಮೆ ಗೋಚರತೆಯ …

Read More »

ಸಿಎಂ ಡಿಕೆಶಿ ಮನೆ, ವಿಧಾನಸೌಧಕ್ಕೆ ಬಾಂಬ್‌ ಬೆದರಿಕೆ – ಆರೋಪಿ ಕಾರ್ತಿಕ್‌ ಅರೆಸ್ಟ್‌

ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್  ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಹಾಕಿ ಕರೆ ಮಾಡಿದ್ದ ಆರೋಪಿಯನ್ನ ಪೊಲೀಸ್ರು ಬಂಧಿಸಿದ್ದಾರೆ. ಕಾರ್ತಿಕ್‌ ಬಂಧಿತ ಆರೋಪಿ. ಕಳೆದ 7ನೇ ತಾರೀಖಿನಂದು ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕನ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಕಾರ್ತಿಕ್‌ನನ್ನ ಸದಾಶಿವನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೋಷಕರಿಂದ ದೂರವಾಗಿ ಮನೆಯಿಂದ ಹೊರಗುಳಿದಿದ್ದ ಕಾರ್ತಿಕ್, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದನು ಎನ್ನಲಾಗಿದೆ. ಈ …

Read More »

ಬೆಳಗಾವಿಯಲ್ಲಿ ಆಸ್ತಿಗಾಗಿ ಅತ್ತೆ, ಅಳಿಯನ ಕೊಲೆ – ಸಹೋದರಿಯರ ಮಕ್ಕಳಿಂದ ಕೃತ್ಯ

ಬೆಳಗಾವಿ: ಆಸ್ತಿಗಾಗಿ ಅತ್ತೆ ಮತ್ತು ಅಳಿಯನ ಭೀಕರ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ (Belagavi Double ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ನಡೆದಿದೆ. ಬಸವ್ವ ನಾಯ್ಕರ್(60) ಹಾಗೂ ತಮ್ಮನ ಮಗ ರಮೇಶ್ ನಾಯ್ಕರ್(26) ಕೊಲೆಯಾದ ದುರ್ದೈವಿಗಳು. ರವಿ ಮತ್ತು ಪುಂಡಲೀಕ ಕೊಲೆಗೈದ ಆರೋಪಿಗಳು. ಹತ್ತು ಎಕರೆ ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ-ತಮ್ಮಂದಿರು ಮತ್ತು ಅಕ್ಕ-ತಂಗಿಯರ ನಡುವೆ ಆಗಾಗ ಜಗಳವಾಗುತ್ತಿತ್ತು. ಮೃತ ಬಸವ್ವ ಅವರ ಸಹೋದರಿಯರ ಮಕ್ಕಳಿಂದ ಈ ಕೃತ್ಯ …

Read More »

ಕೆಲವರು ರಾಜಕೀಯ ಮಾಡ್ತಿದ್ದಾರೆ, ಲಿಖಿತ ಭರವಸೆ ಕೊಡಲು ಸಾಧ್ಯವಿಲ್ಲ – ಸಿಎಂ ಡಿಕೆಶಿ ಖಡಕ್‌ ಹೇಳಿಕೆ

ಬೆಂಗಳೂರು: ನಾನು ಈಗಾಗಲೇ ಆಶಾ ಕಾರ್ಯಕರ್ತೆಯರಿಗೆ  ಭರವಸೆ ಕೊಟ್ಟಿದ್ದೇನೆ. ನಮ್ಮನ್ನ ನಂಬಿ ಅಂತಾ ಹೇಳಿದ್ದೇನೆ. ಅದನ್ನು ಬಿಟ್ಟು ಸಹಿ ಮಾಡಿ, ಲಿಖಿತ ಭರವಸೆ ಕೊಡಿ ಅಂದ್ರೆ ಸಾಧ್ಯ ಇಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌  ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಆಶಾ ಕಾರ್ಯಕರ್ತೆಯರ ಬೇಡಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಹಿ ಮಾಡಿ, ಲಿಖಿತ ಭರವಸೆ ಕೊಡಿ ಅಂದ್ರೇ ನಾನು‌ ಕೊಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ನಾನು ಈಗಾಗಲೇ ಭರವಸೆ ಕೊಟ್ಟಿದ್ದೀನಿ, ನಮ್ಮ …

Read More »

ರೇಣುಕಾಸ್ವಾಮಿ ಕೇಸ್ – ಸುಪ್ರೀಂ ಕೋರ್ಟ್‌ನಿಂದ ಐವರು ಆರೋಪಿಗಳಿಗೆ ರಿಲೀಫ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಐವರು ಆರೋಪಿಗಳಿಗೆ ನೀಡಲಾಗಿದ್ದ ಜಾಮೀನು ರದ್ದು ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್  ವಜಾಗೊಳಿಸಿದೆ. ಎ-3 ಪವನ್, ಎ5 ನಂದೀಶ್, ಎ9 ಧನರಾಜ್, ಎ10 ವಿನಯ್ ಹಾಗೂ ರಾಘವೇಂದ್ರಗೆ ನೀಡಲಾಗಿದ್ದ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪ್ರರ್ದಿವಾಲ್ ಹಾಗೂ ವಿನೋದ್ ಚಂದ್ರನ್ ಪೀಠವು, ಒಂದೂವರೆ ವರ್ಷದ ಬಳಿಕ ಅರ್ಜಿ …

Read More »

38 ಕಾಡಾನೆಗಳ ಹಿಂಡು ಬೇಲೂರಿಗೆ ವಾಪಸ್ – ಜನರಲ್ಲಿ ಆತಂಕ

ಹಾಸನ: ಕಾಡಾನೆ ಹಾವಳಿ ಹಾಸನ, ಚಿಕ್ಕಮಗಳೂರು ಜನರ ನಿದ್ದೆಗೆಡಿಸಿದೆ. ಹಾಸನದಿಂದ ಚಿಕ್ಕಮಗಳೂರಿಗೆ ಓಡಿಸಲಾಗಿದ್ದ 38 ಕಾಡಾನೆಗಳನ್ನ ಮತ್ತೆ ಬೇಲೂರು ತಾಲೂಕಿಗೆ ವಾಪಸ್ ಕಳುಹಿಸಲಾಗಿದೆ. ನಿನ್ನೆ ರಾತ್ರಿ ಚಿಕ್ಕಮಗಳೂರು ಸಿಸಿಎಫ್, ಡಿಎಫ್‌ಓ ನೇತೃತ್ವದಲ್ಲಿ ಚಿಕ್ಕಮಗಳೂರು ಭಾಗದಲ್ಲಿದ್ದ ಕಾಡಾನೆಗಳನ್ನ ಬೇಲೂರು ಭಾಗಕ್ಕೆ ಓಡಿಸಲಾಗಿದೆ. ಈ ವೇಳೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ. ವಿರೋಧದ ನಡುವೆಯೂ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಓಡಿಸಿದ್ದಾರೆ. ಬೇಲೂರು …

Read More »

814 ಪಿಯು ಉಪನ್ಯಾಸಕರ ನೇಮಕಕ್ಕೆ KEA ಅಧಿಸೂಚನೆ – ಆನ್‌ಲೈನ್ ಅರ್ಜಿ ಸಲ್ಲಿಸಲು ಡಿ.25 ಕೊನೆ ದಿನ

ಬೆಂಗಳೂರು: ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಡಿ.25 ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಡಿ.26 ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟು ಉಪನ್ಯಾಸಕರ ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದದ 778 ಹಾಗೂ ಕಲ್ಯಾಣ ಕರ್ನಾಟಕ …

Read More »

ಒತ್ತುವರಿ ವಿಚಾರಕ್ಕೆ ಗಲಾಟೆ – ಗುಂಡು ಹಾರಿಸಿ ಯುವಕನ ಕೊಲೆ

ಬೆಂಗಳೂರು: ಒತ್ತುವರಿ ವಿಚಾರಕ್ಕೆ ಶುರುವಾದ ಗಲಾಟೆ ಓರ್ವ ಕೊಲೆಯಲ್ಲಿ ಅಂತ್ಯವಾಗಿದೆ. ಗುಂಡು ಹಾರಿಸಿ ಯುವಕನನ್ನ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಯಲದ ಹೊಸಕೋಟೆ ಸಮೀಪದ ಸೋಲೂರಿನಲ್ಲಿ ನಡೆದಿದೆ. ಲಿಖಿಕ್ ಗೌಡ ( 25 ) ಕೊಲೆಯಾದ ಯುವಕ. ರಮೇಶ್ ಕೊಲೆಗೈದ ಆರೋಪಿ. ಆಗಿದ್ದೇನು? ಆಶ್ರಯ ಯೋಜನೆ ಜಮೀನು ಗುರುತು ಮಾಡುವ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ಸರ್ಕಾರಿ ಜಾಮೀನಿನ ಸುಮಾರು 10 ಗುಂಟೆ ಜಾಗವನ್ನ ಆರೋಪಿ ರಮೇಶ್‌ ಒತ್ತುವರಿ ಮಾಡಿಕೊಂಡಿದ್ದ. …

Read More »