ಶಿವಮೊಗ್ಗ: ಹಾವು ಕಡಿದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಸಾಗರ ಪಟ್ಟಣದ ಎಸ್.ಎಸ್ ನಗರದಲ್ಲಿ ನಡೆದಿದೆ.
ಎಸ್.ಎಸ್ ನಗರದ ಅಕ್ಷತಾ ಹಾಗೂ ಗಣೇಶ್ ದಂಪತಿ ಪುತ್ರ ಭವಿನ್ (2) ಮೃತ ಮಗು. ಅಕ್ಷತಾ ಮಗುವಿನೊಂದಿಗೆ ಸಾಗರದಲ್ಲಿನ ತವರು ಮನೆಗೆ ಬಂದಿದ್ದರು. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಗುವಿಗೆ ಹಾವು ಕಚ್ಚಿದೆ. ಮಗು ಅಳುವುದನ್ನು ಕಂಡು ಕುಟುಂಬಸ್ಥರು ಬಂದು ನೋಡಿದಾಗ ಹಾವು ಕಚ್ಚಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಪೋಷಕರು ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Laxmi News 24×7