Breaking News

ಗದಗ, ಹಾಸನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

Spread the love

ಗದಗ, ಹಾಸನ: ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ರಾಜ್ಯದ  ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.

ಗದಗ  ಬೆಟಗೇರಿಯ ಕೆಲವೆಡೆ ಮಳೆಯಿಂದ  ಅವಾಂತರವಾಗಿದ್ದು ಗಾಳಿಗೆ ಅಂಗಡಿಗಳ ಬೋರ್ಡ್‌ ಹಾರಿ ಹೋಗಿದೆ.

ಮುಳಗುಂದ ನಾಕಾ ಬಳಿ ಮಳೆ ಗಾಳಿ‌ ರಭಸಕ್ಕೆ ಮರ ಧರೆಗೆ ಬಿದ್ದಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಕೆಲವೆಡೆ ಅನೇಕ ಅವಾಂತರ ಸೃಷ್ಟಿಯಾಗಿದೆ.

ಹಾಸನ‌ ನಗರ ಸೇರಿ ಹಲವೆಡೆ ಸಿಡಿಲು, ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಬಿರುಗಾಳಿಯ ರಭಸಕ್ಕೆ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಹಾಸನ ನಗರದ ಗೌರಿಕೊಪ್ಪಲು, ವಿದ್ಯಾನಗರದಲ್ಲಿ ರಸ್ತೆ ಬದಿ‌ ನಿಲ್ಲಿಸಿದ್ದ ವಾಹನಗಳ‌ ಮೇಲೆ‌ ಮರಗಳು ಬಿದ್ದು ಜಖಂಗೊಂಡಿವೆ.


Spread the love

About Laxminews 24x7

Check Also

ಗದಗ: ರಥೋತ್ಸವದ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ದಾರಿ ಬಿಡುವಂತೆ ಹೇಳಿದ್ದಕ್ಕೆ ಹಲ್ಲೆ? ಸಲೀಂ ಗ್ಯಾಂಗ್ ಅರೆಸ್ಟ್!

Spread the loveಗದಗ ರಥೋತ್ಸವ ವೇಳೆ ಕಾರು ಅಡ್ಡ ನಿಲ್ಲಿಸಿ ಕಿರಿಕ್, ತೆಗೆಯೋಕೆ ಹೇಳಿದ್ದಕ್ಕೆ ಹಲ್ಲೆ ಭಕ್ತರ ಮೇಲೆ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ