Breaking News

ಹಳ್ಳಿಯಲ್ಲಿ ವಾಸಿಸಲು ಇಷ್ಟವಿಲ್ಲವೆಂದು ನವ ವಿವಾಹಿತೆ ಆತ್ಮಹತ್ಯೆ..!

Spread the love

ಕಲಬುರಗಿ: ಪ್ರೀತಿಸಿ ಮದುವೆಯಾದ ನವ ವಿವಾಹಿತೆ ಎರಡೇ ತಿಂಗಳಲ್ಲಿ ನೇಣಿಗೆ ಶರಣಾದ ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಅನುಸುಯಾ ಅವಿನಾಶ್ ಆಕಡೆ (26) ಮೃತ ದುರ್ದೈವಿ.

ಅನುಸುಯಾ ತನ್ನ ಅತ್ತೆ ಮಗ ಅವಿನಾಶ್ ನನ್ನ ಪ್ರೀತಿಸಿ ಮದುವೆಯಾಗಿದ್ದಳು. ಎರಡು ತಿಂಗಳ ಹಿಂದೆ ಅನುಸುಯಾ-ಅವಿನಾಶ್ ಮದುವೆ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ನೇರವೇರಿತ್ತು. ಮದುವೆಯಾದ ಬಳಿಕ ಗಂಡನ ಜೊತೆ ಹಳ್ಳಿಯಲ್ಲಿ ಇರುವುದಕ್ಕೆ ಅನುಸುಯಾ ಬೇಸರ ಮಾಡಿಕೊಂಡಿದ್ದಳು.

ಅನುಸುಯಾಳ ಮೂವರು ಸಹೋದರಿಯರು ಗಂಡನ ಜೊತೆ ಬೆಂಗಳೂರು, ಮುಂಬೈನಲ್ಲಿ ವಾಸವಾಗಿದ್ದರು. ತನ್ನ ಸಹೋದರಿಯರು ಕ್ಯಾಪಿಟಲ್‌ ಸಿಟಿಯಲ್ಲಿ ವಾಸ, ತಾನು ಚಿಕ್ಕ ಸಿಟಿಯ ಹಳ್ಳಿಯಲ್ಲಿ ವಾಸ ಮಾಡ್ತಿರುವುದಾಗಿ ಅನುಸುಯಾ ನೊಂದಿದ್ದಳು.

ಇದೇ ನೋವಿನಲ್ಲಿ ಅನುಸುಯಾ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಎಲ್‌ಪಿಜಿ ಸಿಲಿಂಡರ್‌ಗೆ ರಾತ್ರಿಯಿಡೀ ಕ್ಯೂ ಕೂತ ಜನ

Spread the loveಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದ ಜಗತ್ತಿನಲ್ಲಿ ʻಎನರ್ಜಿ ಎಮರ್ಜೆನ್ಸಿʼ  ಸೃಷ್ಟಿ ಆಗಿಬಿಡುತ್ತಾ ಅನ್ನೋ ಕಳವಳ ಹೆಚ್ಚಾಗ್ತಿದೆ. ಕೊರೊನಾ ಬಳಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ