Breaking News

ಆಶಾ ಕಾರ್ಯಕರ್ತೆಯರು ಮೊಂಡುತನ ಬಿಟ್ಟು ಕಾಲಾವಕಾಶ ಕೊಡಿ, ಲಿಖಿತ ಭರವಸೆ ಕೊಡಲು ಆಗಲ್ಲ: ಹೆಚ್.ಸಿ ಬಾಲಕೃಷ್ಣ

Spread the love

ರಾಮನಗರ: ಆಶಾ ಕಾರ್ಯಕರ್ತೆಯರಿಗೆ  ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ. ಒಬ್ಬರಿಗೆ ಲಿಖಿತ ಭರವಸೆ ನೀಡಿದರೆ, ಮುಂದೆ ಎಲ್ಲರೂ ಅದೇ ರೀತಿ ಹೋರಾಟ ಆರಂಭಿಸುತ್ತಾರೆ.  ಹೀಗೆ ಎಲ್ಲರಿಗೂ ಲಿಖಿತ ಭರವಸೆ ಕೊಟ್ಟು ಸರ್ಕಾರ ನಡೆಸಲು ಸಾಧ್ಯವೇ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ  ಪ್ರಶ್ನಿಸಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಈಗಾಗಲೇ ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ನಿಮ್ಮ ಹೋರಾಟಕ್ಕೆ ಬೆಲೆ ಇದೆ, ಮುಷ್ಕರ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

ಆಶಾ ಕಾರ್ಯಕರ್ತೆಯರ ಬೇಡಿಕೆ ನ್ಯಾಯಯುತವಾಗಿಯೇ ಇದೆ, ಆದರೆ, ಅದನ್ನು ಈಡೇರಿಸಲು ಸಮಯ ಬೇಕು. ಎಲ್ಲವನ್ನೂ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮೊಂಡತನದ ಹೋರಾಟವನ್ನು ಬಿಟ್ಟು ಸಿಎಂ ಮೇಲೆ ವಿಶ್ವಾಸವಿಟ್ಟು ಕಾಲಾವಕಾಶ ನೀಡಬೇಕು. ಕೇಂದ್ರದಲ್ಲೂ ಅನೇಕ ಸಮಸ್ಯೆಗಳಿವೆ, ಅಲ್ಲಿ ಬರೆದುಕೊಡುತ್ತಾರಾ? ಗುಜರಾತ್‌ನಲ್ಲಿ 2,400 ರೂ. ನೀಡುತ್ತಿದ್ದಾರೆ, ರಾಜ್ಯಕ್ಕೂ ಅದನ್ನೇ ಅನುಸರಿಸಬೇಕು. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಶೇ. 60ರಷ್ಟು ತೆರಿಗೆ ಹಣ ಪಡೆಯುತ್ತಿದೆ. ಆ ಹಣವನ್ನು ವಾಪಸ್ ನೀಡಬೇಕಲ್ಲವೇ? ಕೇಂದ್ರದವರೂ ತಮ್ಮ ಪಾಲಿನ ಹಣವನ್ನು ಕೊಡಬೇಕು ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಜೈಲಲ್ಲಿದ್ದಾಗಲೇ ವೈದ್ಯೆಯೊಂದಿಗೆ ಲವ್‌ – ಪೆರೋಲ್‌ ಮೇಲೆ ಬಂದು ಮದುವೆ, ರೇಪ್‌ & ಮರ್ಡರ್‌ ಅಪರಾಧಿ ಕಳ್ಳತನ ಕೇಸಲ್ಲಿ ಮತ್ತೆ ಅಂದರ್

Spread the loveತುಮಕೂರು: ಕೊಲೆ ಮತ್ತು ಅತ್ಯಾಚಾರ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬ ಪೆರೋಲ್‌ ಮೇಲೆ ಹೊರಗೆ ಬಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ