Breaking News

ಪೆಟ್ರೋಲ್‌ಗೆ 20% ಮಿತಿಗಿಂತ ಹೆಚ್ಚಿನ ಎಥೆನಾಲ್‌ ಬೆರಕೆ – IOCL ದೇವನಗೊಂದಿ ಟರ್ಮಿನಲ್‌ಗೆ ನೋಟಿಸ್‌

Spread the love

ಬೆಂಗಳೂರು: IOCL (Indian Oil Corporation Ltd) ದೇವನಗೊಂದಿ ಟರ್ಮಿನಲ್‌ನಲ್ಲಿ ಪೆಟ್ರೋಲ್‌ಗೆ ನಿಗದಿತ 20% ಗಿಂತ ಹೆಚ್ಚಿನ ಎಥೆನಾಲ್‌ ಬೆರೆಸುತ್ತಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಶೋಕಾಸ್ ನೋಟಿಸ್‌ ಜಾರಿ ಮಾಡಿದೆ.

ಕಾನೂನು ಮಾಪನಶಾಸ್ತ್ರ ಇಲಾಖೆಯು ಎಥೆನಾಲ್ ಬೆರೆಕೆ ನಡೆಯುವ ಒಎಂಸಿ ಟರ್ಮಿನಲ್‌ಗಳ ತಪಾಸಣೆ ನಡೆಸಿತ್ತು. ಈ ವೇಳೆ, ಬೆಂಗಳೂರಿನ ದೇವನಗೊಂದಿ ಐಒಸಿಎಲ್ ಟರ್ಮಿನಲ್‌ನಲ್ಲಿ ಪ್ರತಿ 3,000 ಲೀಟರ್‌ಗೆ 14 ಲೀಟರ್ ಎಥೆನಾಲ್ ಹೆಚ್ಚುವರಿಯಾಗಿ ಹೋಗುತ್ತಿರುವುದು ಹಾಗೂ 4 ರಿಂದ 6 ಲೀಟರ್ ಪೆಟ್ರೋಲ್ ಕಡಿಮೆ ಹೋಗುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಕಾನೂನು ಮಾಪನಶಾಸ್ತ್ರ ಕಾಯ್ದೆ 2009ರ ಅಡಿಯಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಸರ್ಕಾರದ ಪರಿಶೀಲಿತ ಮಾಪಕದೊಂದಿಗೆ ಪರಿಶೀಲನೆಗೆ ಮಾಡಿದಾಗ ಅಕ್ರಮ ಸಾಬೀತಾಗಿದೆ ಎಂದು ಆರೋಪಿಸಲಾಗಿದೆ. 7 ದಿನದೊಳಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಂತೆ ಮೈಸೂರು ಹಾಗೂ ಬೆಂಗಳೂರು ವಿಭಾಗದ ಕಾನೂನು ಮಾಪನ ಶಾಸ್ತ್ರ ಇಲಾಖೆ ನೋಟಿಸ್‌ ಜಾರಿ ಮಾಡಿದೆ.


Spread the love

About Laxminews 24x7

Check Also

ಜೈಲಲ್ಲಿದ್ದಾಗಲೇ ವೈದ್ಯೆಯೊಂದಿಗೆ ಲವ್‌ – ಪೆರೋಲ್‌ ಮೇಲೆ ಬಂದು ಮದುವೆ, ರೇಪ್‌ & ಮರ್ಡರ್‌ ಅಪರಾಧಿ ಕಳ್ಳತನ ಕೇಸಲ್ಲಿ ಮತ್ತೆ ಅಂದರ್

Spread the loveತುಮಕೂರು: ಕೊಲೆ ಮತ್ತು ಅತ್ಯಾಚಾರ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬ ಪೆರೋಲ್‌ ಮೇಲೆ ಹೊರಗೆ ಬಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ