ಖಾನಾಪೂರ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಲ್ ಎಚ್ ಗೌಂಡಿ ಅವರು ಮೊನ್ನೆ ಅಷ್ಟೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಪೂರ್ವ ಭಾವಿ ಶಾಂತತಾ ಸಭೆಯನ್ನು ಆಯೋಜಿಸಿದರು ಈ ಸಭೆಗೆ ರೌಡಿ ಶೀಟರ್ ಗೆ ಶಾಂತತಾ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು ಖಾನಾಪೂರ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೀವ್ರ ಆಕ್ಷೇಪಣೆ ಮತ್ತು ಆಕ್ರೋಶತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಈಶ್ವರ ಘಾಡಿ ಅವರು ವ್ಯಕ್ತಪಡಿಸಿದ್ದಾರೆ ಅವರು ಖಾನಾಪೂರದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಸಂದರ್ಭದಲ್ಲಿ ರಾಜ್ಯದಲ್ಲಿ ಸಂವಿಧಾನವನ್ನು ಗೌರವಿಸುವ ಸರ್ಕಾರ ಇದೆ ನಮ್ಮ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಸಂವಿಧಾನ ಸಂದೇಶವನ್ನು ನೀಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಖಾನಾಪೂರದಲ್ಲೇ ಪೋಲಿಸ್ ಇಲಾಖೆ ಸಂವಿಧಾನದ ಅವಮಾನ ಮಾಡುತ್ತಿದ್ದರೆ ಇದು ಅತ್ಯಂತ ಗಂಭೀರ ಮತ್ತು ಚಿಂತಾಜನಕ ವಿಷಯವಾಗಿದೆ ಇದಕ್ಕೆ ಎಸ್ ಪಿ ಸಾಹೇಬರು ಈ ಎಲ್ಲಾ ಪ್ರಕರಣಗಳ ಬಗ್ಗೆ ಸವಿಸ್ತಾರವಾಗಿ ತನಿಖೆ ನಡೆಸಿ ತಪ್ಪಿತಸ್ಥ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಪ್ರತಿ ಬಾರಿ ರೌಡಿ ಶೀಟರ್ ಗಳನ್ನು ಶಾಂತಿ ಸಮಿತಿ ಸಭೆಗೆ ಯಾಕೆ ಆಹ್ವಾನಿಸಲಾಗುತ್ತದೆ? ಇದಕ್ಕೆ ಉತ್ತರ ನೀಡಬೇಕು ಇದರ ಬಗ್ಗೆ ಖಾನಾಪೂರ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೀಘ್ರದಲ್ಲೇ ಎಸ್ ಪಿ ಸಾಹೇಬರು ಮತ್ತು ಡಿಸಿ ಸಾಹೇಬರಿಗೆ ಹಾಗೂ ಗೃಹ ಸಚಿವ ಪರಮೇಶ್ವರ ಸಾಹೇಬರಿಗೆ ಭೇಟಿ ಮಾಡಿ ಕ್ರಮ ಕೈಗೊಳ್ಳಲು ಬೇಡಿಕೆ ಮಾಡಲಿದ್ದೇವೆ ಎಂದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹುತ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಾವಿತ್ರಿ ಮಾದಾರ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ,ಯುವ ಕಾಂಗ್ರೆಸ್ ಮುಖಂಡ ಸುರೇಶ್ ಜಾಧವ್,ತೋಹೀದ್ ಚಾದಖಾನವರ,ಗುಡ್ಡು ಸಾಬ್ ಆದಮ ಸಾಬ್ ತೇಕಡಿ, ದೀಪಕ್ ಕವಟನಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7