ಬೆಂಗಳೂರು: ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಯಾವತ್ತು ಸರ್ವಪಕ್ಷದ ನಿಯೋಗಕ್ಕೆ ಕರೆದುಕೊಂಡು ಹೋದ ಉದಾಹರಣೆ ಇಲ್ಲ ಅಂತ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಬರ ಪರಿಹಾರ ಕೇಳಲು ಸರ್ವಪಕ್ಷ ನಿಯೋಗ ಹೋಗೊದಕ್ಕೆ ವಿಪಕ್ಷಗಳು ಸಹಕಾರ ಕೊಡ್ತಿಲ್ಲ ಎಂಬ ಡಿಸಿಎಂ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಎರಡು ತಿಂಗಳಿಂದ ನೋಡ್ತಾ ಇದ್ದೀನಿ ರಾಜ್ಯ ಸರ್ಕಾರ ಕೇವಲ ಪತ್ರ ವ್ಯವಹಾರ …
Read More »Daily Archives: ನವೆಂಬರ್ 7, 2026
ಗಂಡ, ಇಬ್ರು ಮುತ್ತಿನಂಥ ಮಕ್ಕಳಿದ್ರೂ ʻಪರಸಂಗʼ – ವಿವಾಹಿತೆ ಜೊತೆ ಯುವಕ ಆತ್ಮಹತ್ಯೆ; ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ
ಮಂಡ್ಯ: ರೈಲಿಗೆ ತಲೆ ಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಹೊರವಲಯದ ವಿಸಿ ಫಾರಂ ರೈಲ್ವೆ ಗೇಟ್ ಬಳಿ ನಡೆದಿದೆ. ಸಹನ (25), ರಾಹುಲ್ (23) ಮೃತ ದುರ್ದೈವಿಗಳು. ಬೆಂಗಳೂರು ಮೂಲದ ಸಹನಾ ರಾಹುಲ್ ಇಂದು ಬೆಳಗ್ಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ರೈಲ್ವೆ ಪೊಲೀಸರು ಮೃತದೇಹಗಳನ್ನು ಮಂಡ್ಯದ ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಬಳಿಕ ಮೃತರ ಸಂಬಂಧಕರಿಗೆ ಮಾಹಿತಿ ನೀಡಿದ್ದಾರೆ. …
Read More »ಪಾಕ್ನ ವಿವಾದಿತ ಧರ್ಮಗುರು ಅನುಯಾಯಿ ಸಮಾಧಿ ಮೇಲೆ ಕಲ್ಮ ವಿರೋಧಿ ಬರಹ – ಚಿಕ್ಕಮಗಳೂರಲ್ಲಿ ಬೂದಿ ಮುಚ್ಚಿದ ಕೆಂಡ
ಚಿಕ್ಕಮಗಳೂರು: ಇಲ್ಲಿನ ಇಂದಾವರದಲ್ಲಿರುವ ಪಾಕಿಸ್ತಾನ ಮೂಲದ ಧರ್ಮಗುರು ರಿಯಾಜ್ ಅಹ್ಮದ್ ಗೋಹರ್ ಶಾಹಿ ಅನುಯಾಯಿಯ ಸಮಾಧಿಗೆ ಹಸಿರು ಚಾದರ ಹೊದಿಸಿ, ಕಲ್ಮ ವಿರೋಧಿ ಬರಹ ಬರೆಯಲಾಗಿದೆ. ಇದರಿಂದ ಚಿಕ್ಕಮಗಳೂರಲ್ಲಿ ಮುಸ್ಲಿಂ ಸಮುದಾಯದೊಳಗೆ ತೀವ್ರ ಆಕ್ರೋಶ ಸ್ಫೋಟಗೊಂಡಿದ್ದು, ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ರಿಜ್ವಾನ್ ಎಂಬವರು ಸಾವನ್ನಪ್ಪಿದ್ದರು. ಒಂದು ವರ್ಷದ ಬಳಿಕ ರಿಜ್ವಾನ್ ಸಮಾಧಿ ಮೇಲೆ ಕುಟುಂಬಸ್ಥರು ಹಸಿರು ಚಾದರ ಹೊದಿಸಿ, ಗೋರಿ ನಿರ್ಮಿಸಲು ಮುಂದಾಗಿದ್ದಾರೆ. ಗೋರಿಯ …
Read More »ಅ.16ರಿಂದ 31ರವರೆಗೆ 15 ದಿನದಲ್ಲಿ 7 ಕೊಲೆ – ನರಮೇಧಕ್ಕೆ ಮಗಳು ಸಾಥ್, ತಪ್ಪೊಪ್ಪಿಕೊಂಡ ಹಂತಕ
ಬೆಂಗಳೂರು: ಒಬ್ಬರಲ್ಲ, ಇಬ್ಬರಲ್ಲ.. ಬರೋಬ್ಬರಿ 7 ಜನರನ್ನು ಕೊಲೆ ಮಾಡಿದ ಥ್ರಿಲ್ಲಿಂಗ್ ಕೇಸ್ನಲ್ಲಿ ಕ್ಷಣಕ್ಷಣಕ್ಕೂ ರೋಚಕ ಅಂಶಗಳು ಹೊರಬೀಳುತ್ತಿವೆ. ಕೇವಲ 15 ದಿನದಲ್ಲಿ ಹಂತಕ ಏಳು ಜನರನ್ನು ಕೊಲೆ ಮಾಡಿರುವ ಅಂಶ ಈಗ ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಇಂದುಶೇಖರ್ ಅ.16ರಿಂದ ಅ.31ರವರೆಗೆ ಹಂತ ಹಂತವಾಗಿ ಏಳು ಜನರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ತಾನು ನಡೆಸಿರುವ ನರಮೇಧಕ್ಕೆ ಮಗಳು ಹರ್ಷಿಣಿ ಕೂಡ ಸಾಥ್ ನೀಡಿದ್ದಳು ಎನ್ನುವುದಾಗಿಯೂ …
Read More »ಸಿಎಂ ಡಿ.ಕೆ ಶಿವಕುಮಾರ್ ಈಗ ಬೆಲೆ ಏರಿಕೆ ದೊರೆ: ಅರವಿಂದ ಬೆಲ್ಲದ್
ಧಾರವಾಡ: ರಿಯಲ್ ಎಸ್ಟೇಟ್ ಸಿಎಂ ಎಂದೇ ಹೆಸರು ಮಾಡಿದ ಮುಖ್ಯಮಂತ್ರಿ ಡಿ.ಕೆ ಶಿವಾಕುಮಾರ್ ಅವರಿಗೆ ಬೆಲೆ ಏರಿಕೆ ದೊರೆ ಎಂಬ ಮತ್ತೊಂದು ಗರಿ ಮೂಡಿದೆ ಎಂದು ಶಾಸಕ ಅರವಿಂದ ಬೆಲ್ಲದ್ ವ್ಯಂಗ್ಯವಾಡಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಡಿಕೆಶಿ ಅವರು ಸಿಎಂ ಆದ ಮೇಲೆ ಸಿದ್ದರಾಮಯ್ಯನವರ ಹಾದಿಯಲ್ಲೇ ಬೆಲೆ ಏರಿಕೆ ಮಾಡುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ದರ, ಹಾಲಿನ ದರ, ನೀರಿನ ದರ ಏರಿಸಿದ್ದರು. ಇವತ್ತು ಡಿಕೆಶಿ …
Read More »200 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಬೇಯರ್ ಕಂಪನಿ ಜೊತೆ ಒಪ್ಪಂದಕ್ಕೆ ಸಹಿ
ಬೆಂಗಳೂರು: ಆರೋಗ್ಯ ಸೇವೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಕಂಪನಿಯಾಗಿರುವ ಜರ್ಮನಿ ಮೂಲದ ಬೇಯರ್ ಸೈನ್ಸ್ ಅಂಡ್ ಇನ್ನೋವೇಶನ್ ಬೆಂಗಳೂರಿನ ಸಮೀಪ ತನ್ನ ಅತ್ಯಾಧುನಿಕ ಉತ್ಪಾದನಾ ಸ್ಥಾವರ ಅಭಿವೃದ್ಧಿಗೆ 200 ಕೋಟಿ ರೂ. ಹೂಡಿಕೆ ಮಾಡಲಿದ್ದು, ಈ ಸಂಬಂಧ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಬೇಯರ್ ಕಂಪನಿಯ …
Read More »ಪೆಟ್ರೋಲ್ನಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಎಥೆನಾಲ್ ಮಿಶ್ರಣ, ತೈಲ ಕಂಪನಿಗಳಿಗೆ ಲಾಭ: ರಿಜ್ವಾನ್ ಅರ್ಷದ್
ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದು ವಾಹನಗಳ ದಕ್ಷತೆಗೆ ತೀವ್ರ ಧಕ್ಕೆ ತರುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ನಡೆಸಿದ ಪ್ರಯೋಗಾಲಯ ಪರೀಕ್ಷಾ ವರದಿಗಳನ್ನು(Lab Report) ಬಹಿರಂಗಪಡಿಸಿ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಪೆಟ್ರೋಲ್ನಲ್ಲಿ ಎಥೆನಾಲ್ ಬಳಕೆ …
Read More »ದಾಂಡೇಲಿ ಬಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿತ; ಸಿಬ್ಬಂದಿ ಸಾವು
ಕಾರವಾರ: ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಉದ್ಯೋಗಿಯೊಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಅಳ್ನಾವರ-ಅಂಬೇವಾಡಿ ಸೆಕ್ಷನ್ನ ಎಲ್ಸಿ ನಂ.11 ರಲ್ಲಿ ದಾಂಡೇಲಿ ತಾಲೂಕಿನ ಕರ್ಕಾ – ಬರ್ಚಿ ರೈಲ್ವೆ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ತೆಗೆದು ಹಾಕಿದ್ದ ಮಣ್ಣು ಕುಸಿದಿದೆ. …
Read More »ಕರ್ನಾಟಕಕ್ಕೆ ಮತ್ತೆ ಕಾವೇರಿ ಆಘಾತ – ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸು
ಬೆಂಗಳೂರು: ಬರದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ಎದುರಾಗಿದೆ. ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ದೆಹಲಿಯಲ್ಲಿಂದು ನಡೆಸಿದ ಸಭೆಯ ಬಳಿಕ, ನಿತ್ಯ 3,000 ಕ್ಯೂಸೆಕ್ನಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ಕಳೆದ ಅಕ್ಟೋಬರ್ 23ರಿಂದ ಕರ್ನಾಟಕವು ಕಾವೇರಿ ನದಿ ನೀರು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ …
Read More »ನೀನು ಗಂಡ್ಸೇ ಅಲ್ಲ ಅಂತಾ ಹೆಂಡ್ತಿ ಬೈತಿದ್ರು – ಡೆಡ್ಲಿ ಮರ್ಡರ್ ಆರೋಪಿಯ ರಹಸ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಬೆಂಗಳೂರು: ಹಂತಕ ಇಂದುಶೇಖರ್ ತನ್ನನ್ನ ಪತ್ರಕರ್ತ ಅಂತಾ ಬಿಂಬಿಸಿಕೊಂಡಿದ್ದ. ಆದ್ರೆ ಮನೆಯಲ್ಲಿ ಗಂಡ – ಹೆಂಡತಿ ನಡುವೆ ಜಗಳ ಆಗುತ್ತಲೇ ಇತ್ತು. ನೀನು ಗಂಡ್ಸೇ ಅಲ್ಲಾ ಅಂತಾ ಹೆಂಡ್ತಿ ಬೈಯ್ತಾ ಇದ್ಳು ಎಂದು ಸ್ಥಳೀಯ ನಿವಾಸಿ ಮಾದೇಶ್ ತಿಳಿಸಿದ್ದಾರೆ. ಹೌದು. ಬೆಚ್ಚಿಬೀಳಿಸುವಂತ ಹತ್ಯಾಕಾಂಡ ಬೆಂಗಳೂರಿನಲ್ಲಿ ನಡೆದಿದೆ. ಕ್ಯಾಬ್ ಡ್ರೈವರ್ ಒಂದೇ ಕುಟುಂಬದ 7 ಮಂದಿಯನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮಧ್ಯೆ ಸ್ಥಳೀಯ ನಿವಾಸಿಯೊಬ್ಬರು …
Read More »
Laxmi News 24×7