ದಾವಣಗೆರೆ: ಪಂಚಮಸಾಲಿ ಮಠದ ವಿವಾದ ಭಾರೀ ಭುಗಿಲೆದ್ದಿದೆ. ಮಠದ ಟ್ರಸ್ಟಿಗಳ ವಿರುದ್ಧ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಆಕ್ರೋಶ ಹೊರಹಾಕಿದ್ದು, 2008 ರಲ್ಲಿ ಪಂಚಮಸಾಲಿ ಮಠ ಆರಂಭವಾಗಿದೆ. ಕೋಟ್ಯಂತರ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಲೆಕ್ಕ ಕೊಡಿ ಎಂದರೆ ಟ್ರಸ್ಟ್‌ನವರು ಯಾಕೆ ಕೊಡಬೇಕು ಎನ್ನುತ್ತಿದ್ದಾರೆ. ಅದರೆ ತರಾತೂರಿಯಲ್ಲಿ ಈಗ ಲೆಕ್ಕ ಕೊಡಲು ಮುಂದಾಗಿದ್ದಾರೆ. ನೀವು ಪ್ರಾಮಾಣಿಕವಾಗಿದ್ದರೆ ಕೊಟ್ಟೂರು ಅಥವಾ ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡಿ. ನಾವು ಬರುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಟ್ರಸ್ಟಿಗಳು ಇಂದು ಲೆಕ್ಕ ಕೊಡಲು ಮುಂದಾಗಿದ್ದರು. ಇದಕ್ಕೆ ಸ್ವಾಮೀಜಿ ಬೆಂಬಲಿಗರು ವಿರೋಧಿಸಿದ್ದು, ತರಾತುರಿಯಲ್ಲಿ ಲೆಕ್ಕ ಕೊಡುತ್ತಿದ್ದಾರೆ ಎಂದು ಅರೋಪಿಸಿದ್ದಾರೆ. ಲೆಕ್ಕಕೊಡಲು ಮುಂದಾದ ಟ್ರಸ್ಟ್‌ನ ಪ್ರಮುಖರನ್ನು ರಾಜ್ಯ ಸಂಘ ಉಚ್ಚಾಟಿಸಿದೆ. ಲೆಕ್ಕದ ವಿಚಾರವಾಗಿ ಎದ್ದ ಗದ್ದಲ, ವಚನಾನಂದ ಸ್ವಾಮಿಜಿ ಉಚ್ಚಾಟನೆ, ಈಗ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಉಚ್ಚಾಟನೆ ತನಕ ಬಂದು ನಿಂತಿದೆ. ಈ ಹಿನ್ನಲೆ ಟ್ರಸ್ಟ್‌ನವರು ಪೈಸೆ ಪೈಸೆನೂ ಲೆಕ್ಕ ಕೊಡ್ತಿವಿ ಅಂತ ಇಂದು ಮಠದ ಆವರಣದಲ್ಲೇ ಲೆಕ್ಕ ಪತ್ರ ಇಡುವ ಸಮಾವೇಶ ಮಾಡಿದ್ದಾರೆ.
ಇಷ್ಟು ದಿನ ಮೌನವಾಗಿದ್ದ ಕರ್ನಾಟಕ ರಾಜ್ಯ ಲಿಂಗಾಯತ ಪಂಚಮಸಾಲಿ ಸಂಘ ಎಂಟ್ರಿಯಾಗಿದ್ದು ಈ ಪ್ರಕರಣ ಟ್ವಿಸ್ಟ್ ಪಡೆದಿದೆ. ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಸುದ್ದಿಗೋಷ್ಟಿ ನಡೆಸಿ ಮಠದ ವಿಚಾರವನ್ನ ಬೀದಿಗೆ ತಂದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ಸಿ ಉಮಾಪತಿ, ಟ್ರಸ್ಟಿ ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್ ಸೇರಿ ಮೂವರನ್ನ ಟ್ರಸ್ಟ್‌ನಿಂದಲೇ ಉಚ್ಚಾಟನೆ ಮಾಡಿರುವುದಾಗಿ ಘೋಷಣೆ ಮಾಡಿದರು.
ಒಟ್ಟಾರೆ ಪಂಚಮಸಾಲಿ ಮಠದ ವಿವಾದ ಮತ್ತಷ್ಟು ಜಟಿಲವಾಗುತ್ತಿದೆ. ಇಂದು ಲೆಕ್ಕ ಕೊಡುವ ಸಮಾವೇಶದಿಂದ ಎರಡು ಬಣದ ತಿಕ್ಕಾಟ ಮತ್ತಷ್ಟು ತಾರಕಕ್ಕೇ ಏರುವ ಸಾಧ್ಯತೆ ಇದೆ.
Laxmi News 24×7