Breaking News

ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬಾಲಕಿ ಹೇಳಿಕೆ ಮೇಲೆ ಮಲ್ಲಿಕಾರ್ಜುನ ಮುತ್ಯಾನ ಭವಿಷ್ಯ ನಿರ್ಧಾರ

Spread the love

ಯಾದಗಿರಿ: ಮಹಲ್ ರೋಜಾದ‌ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್​ಗೆ ಸಂಬಂಧಿಸಿದಂತೆ ಕೇಸ್ ಕೈ ಬಿಡುವಂತೆ ಆಗ್ರಹಿಸಿ ಭಕ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಎಫ್​ಐಆರ್ ರದ್ದು ಕೋರಿ ಮಲ್ಲಿಕಾರ್ಜುನ ಮುತ್ಯಾ ಕಲಬುರಗಿ ಹೈಕೋರ್ಟ್ ಮೇಟ್ಟಿಲೇರಿದ್ದಾರೆ. ಈ ಮಧ್ಯೆ ಸಂತ್ರಸ್ತ ಬಾಲಕಿ ನೀಡಿದ ಹೇಳಿಕೆ‌ಯನ್ನು ಜಡ್ಜ್ ದಾಖಲಿಸಿಕೊಂಡಿದ್ದಾರೆ. ಆ ಮೂಲಕ ಸಂತ್ರಸ್ತ ಬಾಲಕಿಯ ಹೇಳಿಕೆ ಮೇಲೆ ಮಲ್ಲಿಕಾರ್ಜುನ ಮುತ್ಯಾನ ಭವಿಷ್ಯ ನಿರ್ಧಾರವಾಗಲಿದೆ.

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ಹಿನ್ನಲೆ ಇಂದು ಶಹಾಪುರ ಜೆಎಂಸಿ ಕೋರ್ಟ್ ನ್ಯಾಯಾಧೀಶರ ಮುಂದೆ ಸಂತ್ರಸ್ತ ಹೇಳಿಕೆ ದಾಖಲಿಸಲಾಗಿದೆ. ಬಳಿಕ ಬಾಲಕಿ ಹೇಳಿಕೆಯ ದಾಖಲು ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗೆ ಸಲ್ಲಿಸಲಾಗುತ್ತದೆ. ಹೀಗಾಗಿ ಸಂತ್ರಸ್ತ ಬಾಲಕಿ ಹೇಳಿಕೆ ಮೇಲೆ ಮಲ್ಲಿಕಾರ್ಜುನ ಮುತ್ಯಾ ಭವಿಷ್ಯ ನಿಂತಿದೆ.

ಇನ್ನು ತಮ್ಮ ವಿರುದ್ಧದ ಪೋಕ್ಸೋ ಕೇಸ್​ ರದ್ದು ಕೋರಿ, ಮಲ್ಲಿಕಾರ್ಜುನ ಮುತ್ಯಾ ಕೂಡ ಇತ್ತೀಚೆಗೆ ಕಲಬುರಗಿ ಹೈಕೋರ್ಟ್ ಮೋರೆ ಹೋಗಿದ್ದರು. ಪ್ರಕರಣದ ವಿಚಾರಣೆಯನ್ನ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿತ್ತು. ಮಲ್ಲಿಕಾರ್ಜುನ ಮುತ್ಯಾ ತೆರೆಮರೆಯಲ್ಲೇ ಇದ್ದು, ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ಮೂಲಕ ತಾವು ಎಲ್ಲಿಗೆ ಹೋಗಿದ್ದೇನೆ ಎನ್ನುವುದನ್ನು ಮಾಹಿತಿ ನೀಡಿದ್ದರು.

ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ಹರಿಬಿಟ್ಟ ಬೆನ್ನಲ್ಲೇ ಸಂತ್ರಸ್ತೆ ಬಾಲಕಿಯ ಪೋಷಕರು ಕೂಡ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಕಿಡಿಗೇಡಿಗಳು ವಿಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ ಅಪ್ಪಾ ಅವರದ್ದೂ ಯಾವುದೇ ತಪ್ಪಿಲ್ಲ, ಅವರು ದೇವರ ಸಮಾನ ಎಂದು ಹೇಳಿದ್ದರು.

ಇನ್ನು ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ಭಕ್ತ ಸಮೂಹ ನಿಂತಿದೆ. ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಹೋರಾಟ ಸಮಿತಿ ಹಾಗೂ ಮಠದ ಭಕ್ತರ ನೇತೃತ್ವದಲ್ಲಿ ಇಂದು ಕಲಬುರಗಿಯಲ್ಲಿ ಬೃಹತ್ ಮೆರವಣಿಗೆ ಮಾಡಲಾಗಿದೆ. ಮಲ್ಲಿಕಾರ್ಜುನ ಮುತ್ಯಾ ಭಾವಚಿತ್ರ ಹಿಡಿದು ಅವರ ಜೊತೆಯಲ್ಲಿ ನಾವು ನಿಲ್ಲುತ್ತೇವೆ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಹೋರಾಟಕ್ಕೆ ಸಾಥ್ ನೀಡಿದ ವಿವಿಧ ಮಠಾಧೀಶರಿಂದ ಪೋಕ್ಸೋ ಕೇಸ್​ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ:ಬಾಯ್ ಪ್ರೇಂಡ್ ಜೊತೆಗೆ ಸೇರಿ ಪತಿಯ ಭೀಕರ ಹತ್ಯೆ ಮಾಡಿಸಿದ ಪತ್ನಿ

Spread the loveಬೆಳಗಾವಿಯ ಟಿಳಕವಾಡಿ ಪೊಲೀಸರಿಂದ ರೋಚಕ ಪ್ರಕರಣ ಬಯಲು ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣವರ (40) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ