Breaking News

ಯುಟಿ ಖಾದರ್ ಇಲ್ಲದಿದ್ರೂ ಕ್ಷೇತ್ರ, ಇಲಾಖೆ ನಡೆಯುತ್ತೆ, ನಿಮ್ಗೆ ಸಂಬಳ ಯಾಕೆ? – ರಾಜೀನಾಮೆ ಕೊಡಿ: ರವಿಕುಮಾರ್ ವ್ಯಂಗ್ಯ

Spread the love

ಬೆಂಗಳೂರು: ಯುಟಿ ಖಾದರ್  ಅವರೇ ನೀವು ಇಲ್ಲದಿದ್ದರೂ ನಿಮ್ಮ ಕ್ಷೇತ್ರ, ಇಲಾಖೆ ನಡೆಯುತ್ತೆ, ನಿಮ್ಗೆ ಸಂಬಳ ಯಾಕೆ? ರಾಜೀನಾಮೆ ಕೊಡಿ ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್  ವ್ಯಂಗ್ಯವಾಡಿದ್ದಾರೆ.

ಆಶಾ ಕಾರ್ಯಕರ್ತೆಯರು  ಇಲ್ಲದಿದ್ದರೂ ನಡೆಯುತ್ತೆ ಎಂಬ ಹೇಳಿಕೆಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು 11 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ರೆ ಸಿಎಂ, ಸಚಿವರು, ಕಾರ್ಮಿಕ ಇಲಾಖೆ, ಮಹಿಳಾ ಇಲಾಖೆ, ಧನಾತ್ಮಕವಾಗಿ ಅವರ ಜೊತೆ ಮಾತುಕತೆ ಮಾಡಿಲ್ಲ. ಯು.ಟಿ.ಖಾದರ್ ಆಶಾ ಕಾರ್ಯಕರ್ತೆಯರು ಇಲ್ಲದೆ ಕೆಲಸ ಆಗ್ತಿದೆ. ಸಮಸ್ಯೆಯೇ ಆಗಿಲ್ಲ ಅಂತ ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರು ಹೋರಾಟ ಕೈ ಬಿಟ್ಟು ಹೋಗಿ ಅಂತಿದ್ದಾರೆ. ಯು.ಟಿ.ಖಾದರ್ ಅವರೇ ನಿಮ್ಮ ಕ್ಷೇತ್ರದಲ್ಲಿ ನೀವು ಇಲ್ಲ ಅಂದ್ರಿ, ನಿಮ್ಮ ಕ್ಷೇತ್ರ, ನಿಮ್ಮ ಇಲಾಖೆ ನಡೆಯುತ್ತದೆ. ನೀವು ರಾಜೀನಾಮೆ ಕೊಟ್ಟುಬಿಡಿ. ನಿಮಗೆ ಟಿಎ, ಡಿಎ, ಸಂಬಳ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಸಿಎಂ ಅವರು ಆಶಾ ಕಾರ್ಯಕರ್ತೆಯರು ಸರ್ಕಾರವನ್ನ ಬೆದರಿಸಬೇಡಿ ಅಂತಾರೆ. ಆಶಾ ಕಾರ್ಯಕರ್ತೆಯರು ತಮ್ಮ ಆಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರು ನಿಮ್ಮನ್ನ ಹೆದರಿಸೋಕೆ ಸಾಧ್ಯನಾ? ಡಿಕೆ ಶಿವಕುಮಾರ್ ಅವರನ್ನು ಹೆದರಿಸೋಕೆ ಸಾಧ್ಯನಾ? ಸಿದ್ದರಾಮಯ್ಯ ಹಿಂದೆ 10 ಸಾವಿರ ರೂ. ಕೊಡ್ತೀನಿ ಅಂದಿದ್ದರು. ಆದ್ರೆ ಈ ಸರ್ಕಾರ ಇನ್ನು ಕೊಟ್ಟಿಲ್ಲ. ಹೋರಾಟ ಮಾಡಿದ್ರೆ ಬ್ಲ್ಯಾಕ್‌ಮೇಲ್ ಮಾಡ್ತೀರಾ ಅಂತೀರಾ ಅಂತ ಸಿಎಂ ಹೇಳಿಕೆ ಖಂಡಿಸಿದ್ದಾರೆ.

ಸಚಿವ ನರೇಂದ್ರ ಸ್ವಾಮಿ ಕಂಠೀಹಾರ ಕೊಡೋಕೆ ಆಗುತ್ತೆ ಅಂತಾರೆ. ಈಗಾಗಲೇ ಈ ಸರ್ಕಾರ ಮುಳ್ಳಿನ ಹಾರ ಕೊಟ್ಟಿದೆ. ಕೂಡಲೇ ಇವೆಲ್ಲ ಬಿಟ್ಟು ಗೌರವದಿಂದ, ಮಾನವೀಯತೆಯಿಂದ ಈ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಗೌರವ ಧನ ಕೊಡಬೇಕು. ಇಲ್ಲದೆ ಹೋದ್ರೆ ಬೆಳಗಾವಿ ಅಧಿವೇಶನದಲ್ಲಿ ದೊಡ್ಡ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.


Spread the love

About Laxminews 24x7

Check Also

ಆಶಾ ಕಾರ್ಯಕರ್ತೆಯರ ಸೇವೆ ಕಡೆಗಣಿಸುವ ಉದ್ದೇಶವಿಲ್ಲ: ಯು.ಟಿ ಖಾದರ್ ಸ್ಪಷ್ಟನೆ

Spread the loveಶಿವಮೊಗ್ಗ: ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಆರೋಗ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ