Breaking News

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

Spread the love

ಬೆಂಗಳೂರು: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ  ಶವ ಪತ್ತೆಯಾಗಿರುವ ಘಟನೆ ನೆಲಮಂಗಲ  ತಾಲೂಕಿನ ಮೋಟಗಾನಹಳ್ಳಿ  ಗ್ರಾಮದಲ್ಲಿ ನಡೆದಿದೆ.

ಜೀವಿತಾ (35) ಮೃತ ಗೃಹಿಣಿ. ಮನೆಯ ಕೋಣೆಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಜೀವಿತಾ ಶವ ಪತ್ತೆಯಾಗಿದೆ. ಆರು ವರ್ಷಗಳ ಹಿಂದೆ ವಿನಯ್ ಕುಮಾರ್ ಎಂಬವರ ಜೊತೆಗೆ ಜೀವಿತಾ ಮದುವೆಯಾಗಿದ್ದರು. ವಿನಯ್ ಕುಮಾರ್‌ಗೆ ಮೊದಲ ಹೆಂಡತಿ ಇಲ್ಲದ ಕಾರಣ ಕುಟುಂಬಸ್ಥರು ಎರಡನೇ ಮದುವೆ ಮಾಡಿದ್ದರು. ಇಬ್ಬರ ಸಂಬಂಧಕ್ಕೆ ಒಂದೂವರೆ ವರ್ಷದ ಒಂದು ಮಗು ಇದೆ. 

ಜೀವಿತಾ ಕುಟುಂಬಸ್ಥರು ಗಂಡನ ಕಿರುಕುಳ ಆರೋಪ ಹೊರಿಸಿದ್ದಾರೆ. ಪ್ರತಿನಿತ್ಯ ಇಲ್ಲಸಲ್ಲದ ಆರೋಪ ಹೊರಿಸಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಜೀವಿತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

About Laxminews 24x7

Check Also

ಮದುವೆಗೆ ನಿರಾಕರಿಸಿದ್ದಕ್ಕೆ ವ್ಯಕ್ತಿಯಿಂದ HIV ಪಾಸಿಟಿವ್‌ ರಕ್ತ ಇಂಜೆಕ್ಟ್‌ – ಆಘಾತಗೊಂಡು ಯುವತಿ ಆತ್ಮಹತ್ಯೆ

Spread the loveಹೈದರಾಬಾದ್:‌ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್‌ ರಕ್ತ  ಇಂಜೆಕ್ಟ್‌ ಮಾಡಿದ್ದ. ಘಟನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ