Breaking News

ಅಪರಾಧ

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

ಬೆಂಗಳೂರು: ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ  ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆ ಅವರ ಶಾಸಕ ಸ್ಥಾನ ರದ್ದಾಗಿದೆ. ಬುಧವಾರ ಶಾಸಕರು ಸೇರಿದಂತೆ 16 ಮಂದಿಯನ್ನು ದೋಷಿ ಎಂದು ತೀರ್ಪು ಪ್ರಕಟಿಸಿದ್ದ ಕೋರ್ಟ್‌  ಇಂದು (ಶುಕ್ರವಾರ) ಶಿಕ್ಷೆಯ ಅವಧಿ ಪ್ರಕಟಿಸಿದೆ. ಶಿಕ್ಷೆಗೆ ಗುರಿಯಾದ ಹಿನ್ನೆಲೆ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4) ರ ಪ್ರಕಾರ ತಕ್ಷಣದಿಂದಲೇ …

Read More »

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಬೆಂಗಳೂರು: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ  ಶವ ಪತ್ತೆಯಾಗಿರುವ ಘಟನೆ ನೆಲಮಂಗಲ  ತಾಲೂಕಿನ ಮೋಟಗಾನಹಳ್ಳಿ  ಗ್ರಾಮದಲ್ಲಿ ನಡೆದಿದೆ. ಜೀವಿತಾ (35) ಮೃತ ಗೃಹಿಣಿ. ಮನೆಯ ಕೋಣೆಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಜೀವಿತಾ ಶವ ಪತ್ತೆಯಾಗಿದೆ. ಆರು ವರ್ಷಗಳ ಹಿಂದೆ ವಿನಯ್ ಕುಮಾರ್ ಎಂಬವರ ಜೊತೆಗೆ ಜೀವಿತಾ ಮದುವೆಯಾಗಿದ್ದರು. ವಿನಯ್ ಕುಮಾರ್‌ಗೆ ಮೊದಲ ಹೆಂಡತಿ ಇಲ್ಲದ ಕಾರಣ ಕುಟುಂಬಸ್ಥರು ಎರಡನೇ ಮದುವೆ ಮಾಡಿದ್ದರು. ಇಬ್ಬರ ಸಂಬಂಧಕ್ಕೆ ಒಂದೂವರೆ ವರ್ಷದ …

Read More »

ಎಂಟು ವರ್ಷ ಪತಿಯೊಂದಿಗೆ ಸಂಸಾರ ನಡೆಸಿ ಪ್ರಿಯಕರನ ಜೊತೆ ಮದುವೆಯಾದ ಖತರ್ನಾಕ್ ಪತ್ನಿ

ಹಾಸನ: ಎಂಟು ವರ್ಷ ಪತಿಯೊಂದಿಗೆ ಸಂಸಾರ ನಡೆಸಿ ಇದೀಗ ಪ್ರಿಯಕರನ ಜೊತೆ ಪತ್ನಿ ಮದುವೆಯಾಗಿರುವ ಘಟನೆ ಹಾಸನ  ತಾಲ್ಲೂಕಿನ ಮುಕುಂದೂರು ಗ್ರಾಮದಲ್ಲಿ ನಡೆದಿದೆ. ಪತಿಯನ್ನು ಮುಕುಂದೂರು ಗ್ರಾಮದ ಪ್ರಕಾಶ್ ಹಾಗೂ ಪತ್ನಿಯನ್ನು ಅರಕಲಗೂಡು  ತಾಲ್ಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಎಂದು ಗುರುತಿಸಲಾಗಿದ್ದು, ಪ್ರಿಯಕನ ಜೊತೆ ಮದುವೆಯಾದ ಗೃಹಿಣಿ ಎಂದು ತಿಳಿದುಬಂದಿದೆ. ಕಳೆದ ಎಂಟು ವರ್ಷಗಳ ಹಿಂದೆ ಅಂದರೆ 2017ರ ಮಾ.30ರಂದು ಪ್ರಕಾಶ್ ಅವರು ಸ್ವಂತ ಅತ್ತೆ ಮಗಳಾದ ಹರ್ಷಿತಾಳನ್ನು ಮದುವೆಯಾಗಿದ್ದರು. …

Read More »

ಬೆಳಗಾವಿ:ಬಾಯ್ ಪ್ರೇಂಡ್ ಜೊತೆಗೆ ಸೇರಿ ಪತಿಯ ಭೀಕರ ಹತ್ಯೆ ಮಾಡಿಸಿದ ಪತ್ನಿ

ಬೆಳಗಾವಿಯ ಟಿಳಕವಾಡಿ ಪೊಲೀಸರಿಂದ ರೋಚಕ ಪ್ರಕರಣ ಬಯಲು ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣವರ (40) ಕೊಲೆ ಮೂರು ಸ್ಟ್ರಿಪ್ ನಿದ್ರೆ ಮಾತ್ರೆ ತಂಪು ಪಾನೀಯದಲ್ಲಿ ಹಾಕಿದ್ದ ಹಂತಕ ಕುಸಿದು ಬೀಳ್ತಿದ್ದಂತೆ ತುಂಬಿದ ಸಿಲಿಂಡರ್ ಥೆರಪಿಸ್ಟ್ ತಲೆ ಮೇಲೆ ಹಾಕಿ ಕೊಲೆ ಪ್ರಕರಣದಡಿ ಅವಿನಾಶ ಪತ್ನಿ ಲಕ್ಷ್ಮಿ ಸೂಪಣ್ಣವರ, ಬಾಯ್ ಪ್ರೇಂಡ್ ಕೈಲಾಶ್ ಅಚ್ಚಿತಾಲ್ ಬಂಧನ ಟಿಳಕವಾಡಿ ಪೊಲೀಸರಿಂದ ಇಬ್ಬರನ್ನು ಬಂಧಿಸಿ ಜೈಲಿಗೆ ರವಾನೆ ಥೆರಪಿಸ್ಟ್ ಕೊಲೆಗೆ ಕಾರಣವಾಯಿತು …

Read More »

ಮದುವೆಗೆ ನಿರಾಕರಿಸಿದ್ದಕ್ಕೆ ವ್ಯಕ್ತಿಯಿಂದ HIV ಪಾಸಿಟಿವ್‌ ರಕ್ತ ಇಂಜೆಕ್ಟ್‌ – ಆಘಾತಗೊಂಡು ಯುವತಿ ಆತ್ಮಹತ್ಯೆ

ಹೈದರಾಬಾದ್:‌ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್‌ ರಕ್ತ  ಇಂಜೆಕ್ಟ್‌ ಮಾಡಿದ್ದ. ಘಟನೆಯಿಂದ ಭೀತಿಗೆ ಒಳಗಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾರ್ಚ್ 11 ರಂದು ಈ ಘಟನೆ ನಡೆದಿತ್ತು. ಆರೋಪಿ ಮನೋಹರ್ ಎಂಬಾತ ಯುವತಿಗೆ ಮನೆಯಲ್ಲಿ ಬಲವಂತವಾಗಿ ತನ್ನ ಹೆಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್‌ ಮಾಡಿದ್ದ. ಆರೋಪಿ ಜೊತೆ ಯುವತಿ ಮದುವೆ ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ್ದ. ಆರೋಪಿ ಮನೋಹರ್‌ ಮತ್ತು ಯುವತಿ ಸಂಬಂಧಿಕರು. ಆತನ …

Read More »

ಬೆಳಗ್ಗೆ ವಾಕಿಂಗ್‌ ಹೊರಟಿದ್ದ ವಕೀಲನಿಗೆ ಗುಂಡಿಕ್ಕಿ ಹತ್ಯೆ

ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಕೀಲನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಿರಿಯ ವಕೀಲ ರಾಜೀವ್‌ ಸಿಂಗ್‌ (45) ಹತ್ಯೆಗೀಡಾದ ವ್ಯಕ್ತಿ. ಶೂಟೌಟ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಂಡಿನ ದಾಳಿ ನಡೆಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ರಾಜೀವ್‌ ಸಿಂಗ್‌ ಎಂದಿನಂತೆ ಬೆಳಗ್ಗೆ ವಾಕಿಂಗ್‌ ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ವಕೀಲನ ಮೇಲೆ ಏಕಾಏಕಿ ಗುಂಡಿನ …

Read More »

ಡಾಕ್ಟರ್ ಪತಿಯನ್ನು ಹತ್ಯೆ ಮಾಡಿ ನಾಟಕ: ಪತ್ನಿ ಆ್ಯಂಡ್ ಲವರ್‌ನನ್ನು ಬಂಧಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ: ಪತಿಯನ್ನು ಹತ್ಯೆ ಮಾಡಿ, ಅಸಹಜ ಸಾವು ಎಂದು ಬಿಂಬಿಸಲು ಸಂಚು ರೂಪಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಅನಗೋಳದ ಬಾಬಲೇ ಗಲ್ಲಿಯ ನಿವಾಸಿಯಾಗಿದ್ದ 40 ವರ್ಷದ ಅವಿನಾಶ ಅಶೋಕ ಸುಪ್ಪನ್ನವರ ಹತ್ಯೆಗೀಡಾದ ವ್ಯಕ್ತಿ. ವೃತ್ತಿಯಲ್ಲಿ ಆಯುರ್ವೇದ ಥೆರಪಿಸ್ಟ್‌ ಆಗಿದ್ದ ಅವಿನಾಶ ಅವರು, ಕಳೆದ ಮಾರ್ಚ್ 5 ರಂದು ತಮ್ಮ’ಅಂಕುಶ ಆಯುರ್ವೇದಿಕ ಕೇರ್ ಸೆಂಟರ್‌ನ ಬೆಡ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ತಲೆಯ ಹಿಂಭಾಗಕ್ಕೆ …

Read More »

ಚಾಕುವಿನಿಂದ ಇರಿದು ಹೆಂಡತಿಯಿಂದಲೇ ಗಂಡನ ಕೊಲೆ

ಬೆಂಗಳೂರು: ಚಾಕುವಿನಿಂದ ಇರಿದು ಹೆಂಡತಿಯೇ ಗಂಡನ ಕೊಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದ  ಮಲ್ಲತ್ತಹಳ್ಳಿಯಲ್ಲಿ ನಡೆದಿದೆ. ತೌಹಿಬ್ ಪಾಷ ಕೊಲೆಯಾದ ಪತಿ. ಪತ್ನಿ ಸೋಹಾನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಗಲಾಟೆ ನಡೆದು ಕೊಲೆ ಮಾಡಿದ್ದಾರೆ. ಪತ್ನಿ, ಆಕೆಯ ತಾಯಿ, ಮತ್ತು ತಂದೆ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ತೌಹಿಬ್ ಪಾಷ ಕುಟುಂಬಸ್ಥರು ಆರೋಪಿಸಿದ್ದಾರೆ. …

Read More »

ನರ್ಸ್​​​​ ಆಗುತ್ತಿದ್ದಂತೆಯೇ ಬದಲಾಯ್ತು ಲೈಫ್ ಸ್ಟೈಲ್: ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು, ಪತಿ ದುರಂತ ಸಾವು

ತುಮಕೂರು: ವಿಚ್ಛೇದನ ಬಯಸಿದ ಪತ್ನಿಗೆ ಪತಿ ಮಚ್ಚಿನೇಟು ಕೊಟ್ಟು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು  ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಟೆಯಲ್ಲಿ ನಡೆದಿದೆ. ದಂಪತಿ ನಡುವೆ ನಿನ್ನೆ (ಏಪ್ರಿಲ್ 06) ಗಲಾಟೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತಿಯ ಮಚ್ಚಿನೇಟಿನಿಂದ ಗಾಯಗೊಂಡಿರುವ ಪತ್ನಿ ನಾಗಮಣಿ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಪತಿ ಮಾರುತಿ, ಇಂದು (ಏಪ್ರಿಲ್ 07) ಬೆಳಗ್ಗೆ ಕೊರಟಗೆರೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. …

Read More »

ಗೋಗಳ್ಳರ ಭಾರಿ ಹೈಡ್ರಾಮಾ; ಸಾರ್ವಜನಿಕರು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರಣಿ ಎಸ್ಕೇಪ್

ಭಟ್ಕಳ: ತಾಲೂಕಿನ ತಲಗೇರಿಯ ವಿವೇಕಾನಂದ ನಗರದಲ್ಲಿ ಶನಿವಾರ ತಡರಾತ್ರಿ ಗೋಗಳ್ಳರ ಭಾರಿ ಹೈಡ್ರಾಮಾವೇ ನಡೆದಿದೆ. ಹಸು ಕದಿಯಲು ಬಂದಿದ್ದ ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ವಾಹನ ಹಾಗೂ ಮೊಬೈಲ್ ಫೋನ್‌ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಸುಮಾರು 3:45 ರ ಹೊತ್ತಿಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ವಿವೇಕಾನಂದ ನಗರದ ಗ್ರಾಮಸ್ಥರು ಅವರನ್ನು ಸುತ್ತುವರೆದಿದ್ದಾರೆ. ಈ ವೇಳೆ ಸಿಕ್ಕಿಬೀಳುವ ಭಯದಿಂದ ಆರೋಪಿಗಳು …

Read More »