Breaking News
Home / ಅಂತರಾಷ್ಟ್ರೀಯ / ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು……

ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು……

Spread the love

ಸಿಡ್ನಿ: ವಿಡಿಯೋಗಳನ್ನು ಡೌನ್‍ಲೋಡ್ ಮಾಡುವುದೇ ಕಷ್ಟ. ಅದರಲ್ಲೂ ಎಚ್‍ಡಿ ಗುಣಮಟ್ಟದ ವಿಡಿಯೋ ಮತ್ತಷ್ಟು ಕಷ್ಟ. ಆದರೆ ಇನ್ನು ಮುಂದೆ ಒಂದು ಸೆಕೆಂಡಿಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಆದರೂ ಅಚ್ಚರಿ ಇಲ್ಲ.

ಆಸ್ಟ್ರೇಲಿಯಾದ ಸಂಶೋಧಕರು ಪ್ರತಿ ಸೆಕೆಂಡಿಗೆ 44.2 ಟೆರಾಬೈಟ್ ಡೇಟಾ ಡೌನ್‍ಲೋಡ್ ಮಾಡುವ ಸಾಮಥ್ರ್ಯ ಇರುವ ವಿಶ್ವ ದಾಖಲೆಯ ಇಂಟರ್ನೆಟ್ ವೇಗವನ್ನು ಸಂಶೋಧಿಸಿದ್ದಾರೆ. ಈ ವೇಗದ ಬ್ರಾಡ್‍ಬ್ಯಾಂಡ್ ಸೌಲಭ್ಯ ಲಭ್ಯವಾದರೆ ಬಳಕೆದಾರರಿಗೆ ಒಂದೇ ಸೆಕೆಂಡಿನಲ್ಲಿ 1 ಸಾವಿರ ಎಚ್‍ಡಿ ಸಿನಿಮಾವನ್ನು ಡೌನ್‍ಲೋಡ್ ಮಾಡಬಹುದು.

ಮೊನಾಶ್, ಸ್ವಿನ್‍ಬರ್ನ್ ಮತ್ತು ಆರೆಂಐಟಿ ವಿಶ್ವವಿದ್ಯಾಲಯಗಳ ತಂಡವು ಮೆಲ್ಬರ್ನ್ ನಲ್ಲಿ ಈ ಸಂಶೋಧನೆ ಮಾಡಿದೆ. ಈ ತಂಡವು ಸಂವಹನ ಮೂಲಸೌಕರ್ಯದಾದ್ಯಂತ ಡೇಟಾವನ್ನು ವರ್ಗಾಯಿಸಲು ನೂರಾರು ಅತಿಗೆಂಪು ಲೇಸರ್ ಗಳನ್ನು ಒಳಗೊಂಡಿರುವ `ಮೈಕ್ರೋ-ಕಾಂಬ್’ ಆಪ್ಟಿಕಲ್ ಚಿಪ್ ಅನ್ನು ಬಳಸಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

ಪ್ರಸ್ತುತ ಸಿಂಗಾಪುರದಲ್ಲಿ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಇದೆ. ಆದರೆ ಅಲ್ಲಿ ಸರಾಸರಿ ಡೌನ್‍ಲೋಡ್ ವೇಗ ಸೆಕೆಂಡಿಗೆ 197.3 ಎಂಬಿಪಿಎಸ್ (ಮೆಗಾ ಬೈಟ್ ಪರ್ ಸೆಕೆಂಡ್) ಇದೆ.

ಆಸ್ಟ್ರೇಲಿಯಾದಲ್ಲಿ ಸದ್ಯ ಸಂಶೋಧನೆ ಮಾಡಿದ ಇಂಟೆರ್ನೆಟ್ ವೇಗವು ಸರಾಸರಿ ಪ್ರತಿ ಸೆಕೆಂಡ್‍ಗೆ 43.4 ಟಿಬಿ ಆಗಿದೆ. ಆಸ್ಟ್ರೇಲಿಯಾದ ಸಂಶೋಧನೆಗೆ ಹೋಲಿಸಿದರೆ ಸಿಂಗಾಪುರದಲ್ಲಿ ಇಂಟರ್ನೆಟ್ ವೇಗವು 10 ಲಕ್ಷ (1 ಮಿಲಿಯನ್) ಪಟ್ಟು ನಿಧಾನವಾಗಿದೆ.

“ಈ ತಂತ್ರಜ್ಞಾನವನ್ನು ವಾಣಿಜ್ಯ ಕ್ಷೇತ್ರಕ್ಕೆ ತಲುಪಿಸಲು ಕೆಲ ಸವಾಲುಗಳಿವೆ. ಇದರ ‘ಮೈಕ್ರೊ-ಕಾಂಬ್’ ನಿಜವಾಗಿಯೂ ವ್ಯಾಪಕವಾದ ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳಲ್ಲಿ ಉಪಯುಕ್ತವಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ನಮಗೆ ಸಿಕ್ಕಂತ ಲ್ಯಾಬ್ ವ್ಯವಸ್ಥೆಗೆ ಹುಡುಕಾಟ ನಡೆಸಿದ್ದೇವೆ. ಅದು ಸಾಧ್ಯವಾದರೆ ಮುಂದಿನ ಸುಮಾರು ಐದು ವರ್ಷಗಳಲ್ಲಿ ಇಷ್ಟು ವೇಗದ ಇಂಟರ್ನೆಟ್ ಸೇವೆಯು ವಾಣಿಜ್ಯ ಕ್ಷೇತ್ರಕ್ಕೂ ಲಭ್ಯವಾಗಲಿದೆ” ಎಂದು ಮೊನಾಶ್ ವಿಶ್ವವಿದ್ಯಾಲಯದ ಡಾ.ಬಿಲ್ ಕೊರ್ಕೊರನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಲಾಕ್‍ಡೌನ್ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಯದಲ್ಲಿ ಜನರು ಸಮಯ ಕಳೆಯಲು, ಮನರಂಜನೆಗಾಗಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಪರಿಣಾಮ ಇಂಟರ್ನೆಟ್ ಸರ್ವರ್ ಮೇಲೆ ಒತ್ತಡವನ್ನುಂಟು ಮಾಡಿದೆ.

ಬಳಕೆ ಹೆಚ್ಚಾದ ಪರಿಣಾಮ ವಿಶ್ವದಲ್ಲಿ ಸರ್ವರ್ ಮೇಲೆ ಒತ್ತಡ ಹೆಚ್ಚಿದ್ದರಿಂದ ವಿಡಿಯೋ ಗುಣಮಟ್ಟವನ್ನು ಕಡಿಮೆ ಮಾಡಲಾಗಿತ್ತು. ವಾಟ್ಸಪ್ ಕೂಡ ಸ್ಟೇಟಸ್ ವಿಡಿಯೋ ಮಿತಿಯನ್ನು 30 ಸೆಕೆಂಡ್‍ನಿಂದ 15 ಸೆಕೆಂಡ್‍ಗೆ ಇಳಿಸಿತ್ತು. ಅಷ್ಟೇ ಅಲ್ಲದೆ ನೆಟ್‍ಫ್ಲಿಕ್ಸ್ ಮತ್ತು ಯೂಟ್ಯೂಬ್ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಮೈಕ್ರೋ-ಕಾಂಬ್ ಸಾಧನವನ್ನು ಕಾರ್ಯಗತಗೊಳಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ