Breaking News
Home / Uncategorized / ಸಾರ್ವಜನಿಕ ಆಸ್ಪತ್ರೆ ಗೋಕಾಕ ಇಂದು ಕೊರೋನಾ ಸೋಂಕಿತ ಗರ್ಭಿಣಿಯರು ಡಿಸ್ಚಾರ್ಜ್; ಹೊರಗೆ ನಿಂತು ಗುಲಾಬಿ ನೀಡಿದ ಕಳುಹಿಸಲಾಯಿತು.

ಸಾರ್ವಜನಿಕ ಆಸ್ಪತ್ರೆ ಗೋಕಾಕ ಇಂದು ಕೊರೋನಾ ಸೋಂಕಿತ ಗರ್ಭಿಣಿಯರು ಡಿಸ್ಚಾರ್ಜ್; ಹೊರಗೆ ನಿಂತು ಗುಲಾಬಿ ನೀಡಿದ ಕಳುಹಿಸಲಾಯಿತು.

Spread the love

 

 

ಗೋಕಾಕದಲ್ಲಿ ಇವತ್ತು ಕೋವಿಡ್ ಸೆಂಟರಗೆ ಬೆಳಗಾವಿ ಲೋಕಾಯುಕ್ತ ಡಿಎಸ್ಪಿ ಬೇಟಿ ನೀಡಿ ಸ್ಥಳಿಯ ಆರೋಗ್ಯ ವೈದ್ಯಾಧಿಕಾರಿಯನ್ನು ಸೊಂಕಿತರ ಬಗ್ಗೆ ವಿಚಾರಿಸಿ ಅವರಿಗೆ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳಲು‌ ತಿಳಿಸಿದರು‌.

ಇದೆ ಸಂದರ್ಭದಲ್ಲಿ 7 ಜನ ಗುಣಮುಖರಾದ ಗರ್ಭಿಣಿ ಸೊಂಕಿತರಿಗೆ ಅಧಿಕಾರಿಗಳು ಹೂವು ಗುಚ್ಚ ನೀಡಿ ಸಂತೋಷದಿಂದ ಚಪ್ಪಾಳೆ ಮೂಲಕ ಬಿಡುಗಡೆಗೊಳಿಸಿ ಹದಿನಾಲ್ಕು ದಿನ ಹೊಮ ಕ್ವಾರೈಂಟನ್ ಇರಲು ಹೇಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿ ಇರಲು ಹೇಳಿ ತೊಂದರೆಯಾದಲ್ಲಿ ತಕ್ಷಣ ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಲು ಹೇಳಿದರು.

ಈ ವೇಳೆಯಲ್ಲಿ ಗೋಕಾಕ ವೈದ್ಯಾಧಿಕಾರಿ ಡಾ: ಜಗದೀಶ ಜಿಂಗಿಯವರು ಬೆಳಗಾವಿಯಲ್ಲಿ ಮೃತ ಕೊರಾನಾ ಸೊಂಕಿತರ ಕುಟುಂಬದವರು ಅಂಬುಲೇನ್ಸಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ವಿಷಾದಿಸುತ್ತ ನಾಲ್ಕು ತಿಂಗಳುಗಳಿಂದ ವೈದ್ಯರೆಲ್ಲರು ಹಗಲಿರುಳು ದುಡಿಯುತಿದ್ದೇವೆ, ನಮಗೆ ರೋಗಿಗಳು ಮುಖ್ಯರಾಗಿರುತ್ತಾರೆ,ಅವರನ್ನು ಬದುಕಿಸುವ ಕೆಲಸ ನಮ್ಮದಾಗಿರುತ್ತದೆ ಅದಕ್ಕಾಗಿ ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳವಂತಾ ಕೆಲಸ ಮಾಡಬಾರದೆಂದು ನಮಗೆ ಸಹಕಾರ ನೀಡಲು ವಿನಂತಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ವೈದ್ಯರಾದ ಡಾ: ಆ್ಯಂಟಿನ್, ನಗರಸಭೆ ಆಯುಕ್ತರಾದ ಶಿವಾನಂದ ಹೀರೆಮಠ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಡಾ: ಜಗದೀಶ ಜಿಂಗಿ, ತಾಲೂಕಾ ವೈದ್ಯಾದಿಕಾರಿಗಳು,
ಗೋಕಾಕ.

 


Spread the love

About Laxminews 24x7

Check Also

ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ. ಪ್ರಮೋದ್ ಮುತಾಲಿಕ್

Spread the love ಹುಣಸೂರು: ಜಿಹಾದಿ ಸಂಸ್ಕೃತಿ ಇರುವ ಕಡೆಗಳಲ್ಲಿ ಹಿಂದೂ ಯುವಕರ ಕೊಲೆ. ಆತ್ಮಹತ್ಯೆಗೆ ಪ್ರಚೋದನೆ ನಡೆಯುತ್ತಲೇ ಇರುತ್ತದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ