Home / new delhi / ಸೋಮವಾರ ಗೋಕಾಕ ನಗರ ಬಂದ್ ಕರೆ ನೀಡಿದ್ದಾರೆ.

ಸೋಮವಾರ ಗೋಕಾಕ ನಗರ ಬಂದ್ ಕರೆ ನೀಡಿದ್ದಾರೆ.

Spread the love

ಗೋಕಾಕ್: ನಗರದಲ್ಲಿ ರಾಜಸ್ತಾನ ವ್ಯಾಪಾರಿಗಳ ಕಳಪೆ ಗುಣಮಟ್ಟದ ವಸ್ತುಗಳ ಕಡಿಮೆ ಬೆಲೆ ಮಾರಾಟದಿಂದ ಸ್ಥಳೀಯ ವ್ಯಾಪಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ರಾಜಸ್ತಾನ ಹಠಾವೋ..ಗೋಕಾಕ್ ಬಚಾವೋ ಎಂಬ ಅಭಿಯಾನದ ಮೂಲಕ ವ್ಯಾಪಾರಸ್ಥ ಸಂಘದಿಂದ ಸೋಮವಾರ ಗೋಕಾಕ ನಗರ ಬಂದ್ ಕರೆ ನೀಡಿದ್ದಾರೆ.

 

 

ಗೋಕಾಕ್ ನಗರದಲ್ಲಿ ರಾಜಸ್ತಾನಿ ವ್ಯಾಪಾರಿಗಳು ಕಳಪೆ ಗುಣಮಟ್ಟದ ವಸ್ತು, ಸಾಮಗ್ರಿಗಳನ್ನು ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯ ವ್ಯಾಪಾರಸ್ಥರು ತೊಂದರೆಯಾಗಿದೆ. ವ್ಯಾಪಾರದಲ್ಲಿ ಮೊದಲೇ ನಷ್ಟ ಅನುಭವಿಸುತ್ತಿರುವ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದ್ದಾರೆ.

 

ಕಳಪೆ ಗುಣಮಟ್ಟದ ವಸ್ತುಗಳಿಂದ ಜನರ ಆರೋಗ್ಯದ ಪರಿಣಾಮ ಬಿಳಲಿದೆ. ಆದ ಕಾರಣ ರಾಜಸ್ತಾನಿ ವ್ಯಾಪಾರಿಗಳ ಹಠಾವೋ ಗೋಕಾಕ್ ಬಚಾವೋ ಎಂಬ ಅಭಿಯಾನದ ಮೂಲಕದ ಸೋಮವಾರ ಕಿರಾಣಿ, ಟೈಲ್ಸ್, ಪಾನ್ ಶಾಪ್ ಸೇರಿದಂತೆ ಎಲ್ಲ ಅಂಗಡಿಗಳನ್ನು ಬಂದ್ ಮಾಡಿ, ಗೋಕಾಕ್ ಬಂದ್ ಕರೆ ನೀಡಲಾಗಿದೆ. ಎಲ್ಲ ವ್ಯಾಪಾರಸ್ಥರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.

ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಮೋದ ಅಂಗಡಿ, ಉಪಾಧ್ಯಕ್ಷ ಮಹೇಶ್ ಪಾಟೀಲ, ಸದಸ್ಯರಾದ ಎಂ.ಆರ್.ಪಾಟೀಲ, ಗುರುಪ್ರಸಾದ್ , ಸಿ.ಸಿ.ಪಟ್ಟಣಶೆಟ್ಟಿ, ಮುರಳಿ ಮನ್ನಿಕೇರಿ, ಮಹೇಶ ತೇಲಿ, ಮಂಜು ಹೊಸಮನಿ, ಗೋವಿಂದ ಗೊಲ್ಲರ್, ಮಲ್ಲಿಕ್ ಗೋಕಾಕ್ ಸೇರಿದಂತೆ ಇತರರು ಇದ್ದರು.


Spread the love

About Laxminews 24x7

Check Also

ಬತ್ತಿದ ಮಲಪ್ರಭೆ, ಈ ನಾಲ್ಕು ಜಿಲ್ಲೆಗೆ ಜಲಕಂಟಕ

Spread the loveಬೆಳಗಾವಿ, ಮೇ.15: ಬೆಳಗಾವಿ(Belagavi) ಜಿಲ್ಲೆಯ ಕಣಕುಂಬಿ ಗ್ರಾಮದಲ್ಲಿ ಹುಟ್ಟುವ ಮಲಪ್ರಭಾ ನದಿ(Malaprabha River). ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ