Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರೊಂದಿಗೆ ಚರ್ಚಿಸುತ್ತಿರುವ ರೈತ ಸಂಘದ ಮುಖಂಡರು.

ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರೊಂದಿಗೆ ಚರ್ಚಿಸುತ್ತಿರುವ ರೈತ ಸಂಘದ ಮುಖಂಡರು.

Spread the love

ಗೋಕಾಕ: ಕಳೆದ ಎರಡು ವರ್ಷಗಳಿಂದ ನೆರೆ, ಅತಿವೃಷ್ಟಿ ಹಾಗೂ ಕೊರೋನಾ ಮಹಾಮಾರಿಯಿಂದ ಆರ್ಥಿಕವಾಗಿ ತತ್ತರಿಸಿರುವ ರೈತರಿಗೆ ಈಗ ಸಾಲ ತುಂಬುವಂತೆ ನೋಟಿಸು ನೀಡುತ್ತಿರುವ ಬ್ಯಾಂಕ್‍ನವರು ತಮ್ಮ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಒತ್ತಾಯಿಸಿದ್ದಾರೆ.
ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಸಾಲ ತುಂಬಲು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನವರು ರೈತರಿಗೆ ನೀಡುತ್ತಿರುವ ನೋಟಿಸ್‍ನ್ನು ತಹಶೀಲ್ದಾರರ ಗಮನಕ್ಕೆ ತಂದು ಅವರೊಂದಿಗೆ ಚರ್ಚಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2 ವರ್ಷಗಳಿಂದ ರೈತರು ತುಂಬಾ ನಷ್ಟದಲ್ಲಿ ಇದ್ದಾರೆ. ಅವರಿಗೆ ನೋಟಿಸ್ ನೀಡುವುದರಿಂದ ರೈತರು ಮರ್ಯಾದೆಗೆ ಹೆದರಿ ಏನಾದರೂ ಅನಾಹುತಗಳು ಮಾಡಿಕೊಂಡರೇ ಅದಕ್ಕೆ ಬ್ಯಾಂಕಿನವರೇ ಜವಾಬ್ದಾರರು ಎಂದು ತಿಳಿಸಿದರು.
ನೆರೆ ಬಂದೋಗಿ 2 ವರ್ಷಗಳು ಕಳೆದರೂ ಕೂಡಾ ಇನ್ನೂ ಸಾಕಷ್ಟು ಜನರಿಗೆ ಪರಿಹಾರ ದೊರಕಿರುವದಿಲ್ಲ, ಅವರಿಗೆ ಕೂಡಲೇ ಪರಿಹಾರವನ್ನು ನೀಡಬೇಕು. ಸಂತ್ರಸ್ತರಿಗೂ ಕೂಡಾ ಸಾಲ ತುಂಬಲು ಕಾಲಾವಕಾಶವನ್ನು ನೀಡಬೇಕು. ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಹಾಗೂ ರೈತರಿಗೆ ಹೆಚ್ಚಿನ ತೊಂದರೆಯನ್ನು ಕೊಡದೇ ಸಹಕಾರ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ರೈತ ಮುಖಂಡರಾದ ಶಂಕರ ಮದಿಹಳ್ಳಿ, ಕುಮಾರ ತಿಗಡಿ, ಭೀಮಶಿ ಹುಲಕುಂದ, ರಾಯಪ್ಪ ಗೌಡಪ್ಪನವರ, ಲಕ್ಷ್ಮಣ ಹಳ್ಳೂರ, ಮುದಕಪ್ಪ ಬನಾಜ, ಮಂಜುನಾಥ ಝಲ್ಲಿ ಸೇರಿದಂತೆ ಅನೇಕರು ಇದ್ದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ