Breaking News
Home / ಜಿಲ್ಲೆ / ಕೂಡ್ಲಿಗಿ,ತಾಲೂಕಿನಾಧ್ಯಂತ ದೇವಸ್ಥಾನಗಳಲ್ಲಿ: ಸಾಮೂಹಿಕ ಶಿವಭಜನೆ, ಸೌಹಾಧ೯ತಾ ಜಾಗರಣೋತ್ಸವ

ಕೂಡ್ಲಿಗಿ,ತಾಲೂಕಿನಾಧ್ಯಂತ ದೇವಸ್ಥಾನಗಳಲ್ಲಿ: ಸಾಮೂಹಿಕ ಶಿವಭಜನೆ, ಸೌಹಾಧ೯ತಾ ಜಾಗರಣೋತ್ಸವ

Spread the love

ಕೂಡ್ಲಿಗಿ,ತಾಲೂಕಿನಾಧ್ಯಂತ ದೇವಸ್ಥಾನಗಳಲ್ಲಿ: ಸಾಮೂಹಿಕ ಶಿವಭಜನೆ, ಸೌಹಾಧ೯ತಾ ಜಾಗರಣೋತ್ಸವಶಿವ ಭಕ್ತರು ಶಿವರಾತ್ರಿ ಜಾಗರಣೆ ಪ್ರಯುಕ್ತ ಬಹುತೇಕರು ಮನೆಯಲ್ಲಿಯೇ ಆರಾಧನೆ ಮತ್ತು ಜಾಗರಣೆ ಮಾಡಿದರೆ ಕೆಲವರು ದೇವಸ್ಥಾನಗಳಲ್ಲಿ ಸಾಮೂಹಿಕ ಶಿವಭಜನೆ ಮಾಡುವುದರೊಂದಿಗೆ ಜಾಗರಣೆ ಆರಾಧನೆ ಮಾಡಿದ್ದಾರೆ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ದೇವಸ್ಥಾನಗಳಲ್ಲಿ ಶಿವನ ಆರಾಧನೆ ಮತ್ತು ಸಾಮೂಹಿಕ ಭಜನೆ ಮಾಡುವುದರ ಮೂಲಕ ಜಾಗರಣೆ ಆಚರಿಸಿದರು.ಪಟ್ಟಣದ ಬಾಪೂಜಿನಗರದ ಶ್ರೀ ಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕೂಡ್ಲಿಗಿ ಹಿರೇ ಮಠ ಚಿದಾನಂದ ಸ್ವಾಮಿಗಳು ಮತ್ತು ಸಿದ್ದಲಿಂಗಸ್ವಾಮಿಗಳ ನೇತೃತ್ವದಲ್ಲಿ ಭಕ್ತಿಗೀತೆಗಳು,ಜಾನಪದ ಗೀತೆಗಳ ಮತ್ತು ಸುಗಮ ಸಂಗೀತ ಗಾಯನ ಕಾಯ೯ಕ್ರಮ.ಶ್ರೀ ಜಾಲಿಮರ ಬಸವೇಶ್ವರ ದೇವಾಸ್ಥಾನದಲ್ಲಿ ಶ್ರೀ ಪೇಟೆಬಸವೇಶ್ವರ ಭಜನಾಮಂಡಳಿ ಹಾಗೂ ಶ್ರೀ ಮಧಗಾಂಭಿಕಿ ಭಜನಾಮಂಡಳಿಯವರಿಂದ ಭಜನಾಕಾಯ೯ಕ್ರಮ.ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಲಿಂಗೇಶ್ವರ ಭಜನಾಮಂಡಳಿ ಮತ್ತು ಮಹಿಳಾ ಭಜನಾ ತಂಡದವರಿಂದ ಭಜನೆ.

ಶ್ರೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ಶ್ರೀ ಮರುಳಸಿದ್ದೇಶ್ವರ ಬೆಟ್ಟದ ಸೇರಿದಂತೆ ಪಟ್ಟಣ ಮತ್ತು ತಾಲೂಕಿನೆಲ್ಲಡೆಗಳ ವಿವಿದ ದೇವಸ್ಥಾನಗಳಲ್ಲಿ ಶಿವಭಕ್ತರು ಜಾತಿ ಸಂಕೋಲನೆಗಳನ್ನು ತೊರೆದು.ವಿವಿದ ಜಾತಿಯ ಭಕ್ತರು ಸೌಹಾಧ೯ತೆಯಿಂದ ಸಾಮೂಹಿಕ ಭಜನೆಯೊಂದಿಗೆ ಜಾಗರಣೆ ಆಚರಣೆ ನೆರವೇರಿಸಿದರು. ಇದಕ್ಕೆ ಪಟ್ಟಣದ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಭಜನಾ ಕಾಯ೯ಕ್ರಮ ಸಾಕ್ಷಿಯಾಯಿತು.ಮಹಾಶಿವರಾತ್ರಿ ದಿನವಾದ ಶುಕ್ರವಾರದಂದು ಸಂಜೆ ಶಿವನಿಗೆ ರುದ್ರಾಭಿಷೇಕ.ಪಂಚಾಮೃತಾಭಿಷೇಕ.ಬಿಲ್ವಾಚ೯ನೆ ಕೈಂಕಯ೯ಗಳನ್ನು ಜರುಗಿಸಲಾಯಿತು.ಬಡೇಲಡಕು ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಸಂಘ.ಶ್ರೀದುಗಾ೯ಂಭಿಕ ಭಜನಾ ಸಂಘ.ಶ್ರೀ ಸತ್ಯಾಂಭಿಕ ಭಜನಾ ಸಂಘ.ನಾಣ್ಯಾಪುರ ಶ್ರೀ ಜಗಲೂರೇಶ್ವರ ಭಜನಾ ಸಂಘ.ಶ್ರೀ ಚಿದಂಭರೇಶ್ವರ ಭಜನಾ ಸಂಘ.ದಶಮಾಪುರ ಶ್ರೀ ಬಸವೇಶ್ವರ ಭಜನಾ ಸಂಘದ ಕಲಾವಿದರು ಶಿವಭಜನೆ ಮತ್ತು ಭಕ್ತಿ ಪ್ರಧಾನ ಹಾಡುಗಳನ್ನು ಹಾಡಿದರು.ಈ ಮೂಲಕ ಶಿವನಾರಾಧನೆ ಸಂಪೂಣ೯ಜಾಗರಣೆ ನೆರವೇರಿಸಲಾಯಿತು.ಬಡೇಲಡಕು ಭಜನಾ ಮಂಡಳಿಯ ಅಂಜಿನಪ್ಪ ಮಾಸ್ಟ್ರು.ಮಾಯಪ್ಪ.ತೊಗಲುಗೊಂಬೆ ಕಲಾವಿದ ತಿಪ್ಪೇಸ್ವಾಮಿ.ಸತ್ಯಪ್ಪ.ಮೌಲಾಲೀ.ಕೂಡ್ಲಿಗಿಯ ಪಾಪಣ್ಣ ಮಾಸ್ಟ್ರು.ಬಳಿಗಾರ ಬಸವರಾಜಣ್ಣ.ವಕೀಲರಾದ ಬಣಕಾರ ಶಿವಕುಮಾರ.ಆದಿ ಶೆಟ್ಟಿ ಮತ್ತು ಗೆಳೆಯರ ಬಳಗ.ಚಲುವಾದಿ ತಿರುಪಾಲಯ್ಯ.ಉಕ್ಕಡದ ಅಂಜಿನಪ್ಪ.ನಾಣ್ಯಾಪುರ ಗ್ರಾಮದ ದಿಬದಳ್ಳಿ ಮಲ್ಲಪ್ಪ.ಪಂಪಣ್ಣ.ಸ್ವಾಮಿ.ಜಗಧೀಶ.ಮೊದಲರ ಉಂಡೆಜ್ಜ.ವಡ್ರಳ್ಳಿ ಕನವಪ್ಪ.ಸೇರಿದಂತೆ ಶ್ರೀ ಚಿದಂಬರೇಶ್ವೆ ದೇವಸ್ಥಾನ ಹಾಗು ಶ್ರೀ ವಿನಾಯಕ ಸೇವಾಸಮಿತಿ ಪದಾಧಿಕಾರಿಗಳು.ಯುವಕ ಯುವತಿಯರು.ಮಹಿಳೆಯರು.ಹಿರಿಯನಾಗರೀಕರು. ವಿವಿದ ವಗ೯ಗಳ.ಸಮುದಾಯಗಳಭಕ್ತರು ಶನಿವಾರದ ಬೆಳಗಿನ ಜಾವದವರೆಗೂ ನಿರತಂರ ಸಾಮೂಹಿಕ ಭಜನೆ ಜಾಗರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಟೆ ಮೆರೆದರು.ಈ ಮೂಲಕ ಅವರೆಲ್ಲರೂ ಸೌಹಾಧ೯ತೆಯ ಜಾಗರಣೋತ್ಸವಕ್ಕೆ ಸಾಕ್ಷಿಯಾದರು


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ