ದಯಾಸಾಗರ ಪಾಟೀಲ್ ಪೌಂಡೇಶನ್:ಬಡವರಿಗೆ ದಿನಸಿ ವಸ್ತುಗಳ ವಿತರಣೆ”
ಇಂಡಿ: ಪಟ್ಟಣದ ದಯಾಸಾಗರ ಪಾಟೀಲ್ ಪೌಂಡೇಶನ್ ವತಿಯಿಂದ ತಾಲೂಕಿನ ಎಲ್ಲ ಗ್ರಾಮಗಳ ಬಡವರ ಮನೆಗಳಿಗೆ ತೆರಳಿ ಉಚಿತ ದಿನಸಿ ವಸ್ತುಗಳ ಕೀಟನ್ನು ವಿತರಿಸಲಾಯಿತು…
ಕೊರೋನಾ ಕೋವಿಡ್-19 ವೈರಸ್ ನಿಂದ ಭಾರತ ಲಾಕ್ ಡೌನ್ ಆದಕಾರಣ ಬಡವರಿಗೆ ಕೆಲಸವಿಲ್ಲದೆ ತಿನ್ನಲು ಆಹಾರಕ್ಕಾಗಿ ಪರದಾಟ ನಡೆಸುವಂತಾಗಿದೆ.
ಈ ಹಿನ್ನಲೆಯಲ್ಲಿ ಪಟ್ಟಣದ ಸಮಾಜ ಸೇವಕರಾದ ಹಾಗೂ ಬಿಜೆಪಿ ಮುಖಂಡರಾದ ದಯಾಸಾಗರ ಪಾಟೀಲ’ರವರ ದಯಾಸಾಗರ ಪಾಟೀಲ್ ಪೌಂಡೇಶನ್ ವತಿಯಿಂದ ದಿನ ಬಳಕೆಯ ಆಹಾರ ಪದಾರ್ಥ 2 ಕೆ.ಜಿ ರವೆ, 2 ಕೆ.ಜಿ ಬೆಲ್ಲ, 2 ಕೆ.ಜಿ ಸಕ್ಕರೆ, 2 ಕೆ.ಜಿ ಅವಲಕ್ಕಿ, 5 ಕೆ.ಜಿ ಅಕ್ಕಿ ಸೇರಿದಂತೆ ದಿನಸಿ ವಿತರಣೆ ಮಾಡಲಾಯಿತು…
ಬಿಜೆಪಿ ಯುವ ಮುಖಂಡರಾದ ದಯಾಸಾಗರ ಪಾಟೀಲ್ ಮಾತನಾಡಿ, ಇಂತಹ ಸಂದರ್ಭದಲ್ಲಿ ಬಡವರ ಕಣ್ಣಿರು ಒರೆಸಲು ಸಹಾಯ ಹಸ್ತ ನೀಡಲು ಮುಂದಾಗಬೇಕು. ನನ್ನ ಕೈಲಾದಷ್ಟು ಬಡವರಿಗೆ ವಿತರಣೆ ಮಾಡುತ್ತಿದೇನೆ. ನಿಮ್ಮ ಕೈಲಾದಷ್ಟು ನಿರ್ಗತಿಕರಿಗೆ ಹಾಗೂ ಬಡವರಿಗೆ ತಿನ್ನಲು ಆಹಾರ ಸಹಾಯ ಮಾಡಲು ಮುಂದಾಗಬೇಕು ಎಂದರು…