ಮೈಸೂರು: ಕೊರೊನಾ ವೈರಸ್ ಹರಡುವಿಕೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಕೆಲವರನ್ನು ಹೋಂ ಕ್ವಾರಂಟೈನ್ ಮಾಡುವುದಕ್ಕಿಂತ ಸರ್ಕಾರಿ ಕ್ವಾರಂಟೈನ್ ಮಾಡಲು ಮುಂದಾಗಿದೆ.
ಇದಕ್ಕೆ ರೂಂಗಳ ಕೊರತೆಯಿದ್ದು, ಲಾಡ್ಜ್ ಗಳ ಬಿಟ್ಟು ಕೊಡಲು ಮಾಲೀಕರು ಮುಂದೆ ಬರುತ್ತಿಲ್ಲ. ಆದರೆ ಮೈಸೂರಿನ ಉದ್ಯಮಿ ಎಂ.ರಾಜೇಂದ್ರ, ಸ್ವಯಂ ಪ್ರೇರಿತರಾಗಿ ತಮ್ಮ ಥ್ರೀ ಸ್ಟಾರ್ ಹೋಟೆಲ್ ಅನ್ನು ಸರ್ಕಾರಿ ಕ್ವಾರಂಟೈನ್‍ಗೆ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಸರ್ಕಾರದ ಕೆಲಸಕ್ಕೆ ಸಾಥ್ ನೀಡಿದ್ದಾರೆ.
ಇದರ ಜೊತೆಗೆ ತಮ್ಮದೇ ಮಾಲೀಕತ್ವದ ಸ್ಟಾರ್ ಹೋಟೆಲ್‍ಗಳಾದ ದಿ ಪ್ರೆಸಿಡೆಂಟ್ ಹೋಟೆಲ್, ವೈಸರಾಯ್ ಕಂಫರ್ಟ್ ಹೋಟೆಲ್ ಹಾಗೂ ರಾಜೇಂದ್ರ ಕಲಾ ಮಂದಿರವನ್ನು ಸರ್ಕಾರಿ ಕ್ವಾರಂಟೈನ್ ಕೆಲಸಕ್ಕೆ ಬಿಟ್ಟು ಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಸ್ವತಃ ತಾವೇ ಕರೆ ಮಾಡಿ ತಮ್ಮ ಹೋಟೆಲ್ ಗಳನ್ನು ಉಚಿತವಾಗಿ ಬಳಸಿಕೊಳ್ಳವಂತೆ ತಿಳಿಸಿದ್ದಾರೆ.