Breaking News
Home / ಅಂತರಾಷ್ಟ್ರೀಯ / ವಿಶ್ವದಾದ್ಯಂತ ಕ್ರೂರಿ ಕೊರೋನಾಗೆ 4.47 ಲಕ್ಷ ಬಲಿ, 82.65 ಲಕ್ಷ ಮಂದಿಯಲ್ಲಿ ಸೋಂಕು…………..

ವಿಶ್ವದಾದ್ಯಂತ ಕ್ರೂರಿ ಕೊರೋನಾಗೆ 4.47 ಲಕ್ಷ ಬಲಿ, 82.65 ಲಕ್ಷ ಮಂದಿಯಲ್ಲಿ ಸೋಂಕು…………..

Spread the love

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜೂ.17- ಜಗವೇ ಒಗ್ಗೂಡಿದ್ದರೂ ಜಗ್ಗದಜಗಮೊಂಡ ಕೋಡ್-19 ವೈರಸ್ ಹಾವಳಿ ಮುಂದುವರಿದಿದೆ.  ನಾಶಕಾರಿ ಮಹಾಮಾರಿ ದಾಳಿಯಿಂದ ವಿಶ್ವಕಂಗಾಲಾಗಿದ್ದು, ಸಾವಿನ ಸಂಖ್ಯೆ 4.47ಲಕ್ಷಹಾಗೂ ಸೋಂಕಿತರ ಸಂಖ್ಯೆ82.65 ಲಕ್ಷಮೀರಿದೆ.

ಇದರ ನಡುವೆಯೂ ವಿಶ್ವದಲ್ಲಿ ಸುಮಾರು 43.21 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಡೆಡ್ಲಿಕೊರೊನಾ ಹಾವಳಿಯಿಂದ ಜಗತ್ತಿನ ನಾನಾ ದೇಶಗಳಲ್ಲಿ ಸೋಂಕು ಮತ್ತು ಸಾವು ಸಂಖ್ಯೆಯಲ್ಲಿಮತ್ತೆಭಾರೀ ಏರಿಕೆ ಕಂಡುಬಂದಿದೆ.

ಇನ್ನು ಕೆಲವು ರಾಷ್ಟ್ರಗಳಲ್ಲಿ ಹಾವಳಿ ಕಡಿಮೆಯಾಗಿದೆ. 10ಕ್ಕೂ ಹೆಚ್ಚು ದೇಶಗಳು ಪೀಡೆಯಿಂದ ಮುಕ್ತವಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಈವರೆಗೆ 4,46,145 ಮಂದಿ ಸಾವಿಗೀಡಾಗಿದ್ದು, 82.64.468ಸೋಂಕು ಪ್ರಕರಣಗಳು ವರದಿಯಾಗಿವೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 34.96 ಲಕ್ಷದಾಟಿದೆ.ಅಲ್ಲದೇಇನ್ನೂ54,591ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ.ನಾಳೆ ವೇಳೆಗೆ ಸಾವಿನ ಸಂಖ್ಯೆ 4.49 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 84 ಲಕ್ಷದಾಟುವ ಆತಂಕವಿದೆ.  ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ.

ವಿಶ್ವದಲ್ಲಿಈವರೆಗೆ 43,21,998ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ. ಅಮೆರಿಕ, ಬ್ರೆಜಿಲ್, ರಷ್ಯಾ, ಭಾರತ ಮತ್ತು ಇಂಗ್ಲೆಂಡ್ ಕೊರೊನಾ ಕೇಸ್‍ಗಳಲ್ಲಿ ವಿಶ್ವದಟಾಪ್ ಫೈವ್ ದೇಶಗಳಾಗಿವೆ. ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ, ಮತ್ತುಟರ್ಕಿದೇಶಗಳಿವೆ.

ಏಷ್ಯಾಖಂಡದಲ್ಲಿಚೀನಾ, ದಕ್ಷಿಣಕೊರಿಯಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್‍ಕೇಂದ್ರ ಬಿಂದುಚೀನಾದ ವುಹಾನ್ ನಗರದಲ್ಲಿಯೂ ಹೊಸ ಪಾಸಿಟಿವ್ ಕೇಸ್‍ಗಳು ದಿನೇ ದಿನೇ ಹೆಚ್ಚಾಗಿವೆ.

ಅಮೆರಿಕ, ಯುರೋಫ್, ಆಫ್ರಿಕಾ ಖಂಡಗಳ ಅನೇಕ ರಾಷ್ಟ್ರಗಳೂ ಕೂಡ ವೈರಸ್ ಹಾವಳಿಯಿಂದ ಕಂಗೆಟ್ಟಿವೆ. ಕೆಲವು ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾಗಿದೆ.

ನ್ಯೂಜಿಲೆಂಡ್ ಸೇರಿದಂತೆಕಿಲ್ಲರ್‍ಕೊರೊನಾ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿವೆ. ಇಡೀ ವಿಶ್ವವೇಕಿಲ್ಲರ್ ಕೋವಿಡ್-19 ವೈರಸ್ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿದ್ದರೂ, ಹೆಮ್ಮಾರಿ ನಿಯಂತ್ರಣ ಮರಿಚಿಕೆಯಾಗಿದೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ