ಬೆಂಗಳೂರು, ಜೂ.17- ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ವಿಧಾನ ಪರಿಷತ್‍ನ ಮಾಜಿ ಸದಸ್ಯ ನಜೀರ ಅಹಮದ್, ರಾಜ್ಯಸಭೆ ಮಾಜಿ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ.
ಬಿಜೆಪಿ ಮಾದರಿಯಲ್ಲೇ ಕಾಂಗ್ರೆಸ್ ಹೈಕಮಾಂಡ್ ಕೂಡ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೂಚಿಸಿದ ಹೆಸರಗಳನ್ನು ಹೊರತು ಪಡಿಸಿ ಬಿ.ಕೆ.ಹರಿಪ್ರಸಾದ್ ಅವರಿಗೆ ಹೈಕಮಾಂಡ್‍ಗೆ ಮಣೆ ಹಾಕಿದೆ.
ಕಳೆದೆರಡು ದಿನಗಳಿಂದ ನಡೆದ ಕಸರತ್ತಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವುಕುಮಾರ್ ಅವರು ಏಳು ಮಂದಿಯ ಹೆಸರನ್ನು ಶಿಫಾರಸ್ಸು ಮಾಡಿದ್ದರು.
ಹಿಂದುಳಿದ ವರ್ಗಗಳ ನಾಯಕರಾದ ಎಚ್.ಎಂ.ರೇವಣ್ಣ, ಎಂ.ಆರ್.ಸೀತಾರಾಮ್, ಎಂ.ಸಿ.ವೇಣುಗೋಪಾಲ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು , ಅಲ್ಪಸಂಖ್ಯಾತರ ಖೋಟಾದಲ್ಲಿ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಅವರ ಪುತ್ರ, ನಿವೇದಿತ್ ಆಳ್ವಾ, ನಜೀರ್ ಅಹಮದ್, ಮಾಜಿ ಸದಸ್ಯ ಐವಾನ್ ಡಿ ಸೋಜಾ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು.
ಅಲ್ಪಸಂಖ್ಯಾತ ನಾಯಕರೆಲ್ಲಾ ಒಟ್ಟಾಗಿ ನಿಂತಿದ್ದರ ಫಲವಾಗಿ ನಜೀರ ಅಹಮದ್‍ಗೆ ಅವಕಾಶ ಸಿಕ್ಕಿದೆ. ಕ್ರಿಶ್ಚಿಯನ್ ಸಮುದಾಯ ಅವಕಾಶ ವಂಚಿತವಾಗಿದೆ. ಹಿಂದುಳಿದ ವರ್ಗಗಳ ಪರವಾಗಿ ಲಾಬಿ ಮಾಡಿದ ಮುಖಂಡರಿಗೆಲ್ಲಾ ಮುಖಭಂಗವಾಗಿದೆ.
ಬಿ.ಕೆ.ಹರಿಪ್ರಸಾದ್ ಈವರೆಗೂ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದವರು. ಇದೇ ಮೊದಲ ಬಾರಿಗೆ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲಾಗಿದೆ. ಕಳೆದ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ರ್ಪಸಲು ಹರಿಪ್ರಸಾದ್ ಅವರಿಗೆ ಅವಕಾಶ ನೀಡಲಾಗಿತ್ತು.
ಈಗ ವಿಧಾನ ಪರಿಷತ್ ಸ್ಥಾನವನ್ನು ನೀಡುವ ಮೂಲಕ ಹೈಕಮಾಂಡ್ ಮಣೆ ಹಾಕಿದೆ. ರಾಜ್ಯ ನಾಯಕರಿಗೆ ಈ ಆಯ್ಕೆಗಳು ತುಸು ಇರಿಸು ಮುರಿಸು ಉಂಟು ಮಾಡಿವೆ.