Breaking News
Home / ಜಿಲ್ಲೆ / ಮಹಾರಾಷ್ಟ್ರದಲ್ಲಿ ಕೊರೋನಾಗೆ 201 ಬಲಿ; ದೇಶಾದ್ಯಂತ 452 ಸಾವು, 13,835 ಸೋಂಕಿತರು

ಮಹಾರಾಷ್ಟ್ರದಲ್ಲಿ ಕೊರೋನಾಗೆ 201 ಬಲಿ; ದೇಶಾದ್ಯಂತ 452 ಸಾವು, 13,835 ಸೋಂಕಿತರು

Spread the love

ಮುಂಬೈ (ಏ. 18): ದೇಶದಲ್ಲಿ ಕೊರೋನಾ ವೈರಸ್​ ದಾಳಿಗೆ ಜನರು ತತ್ತರಿಸಿದ್ದಾರೆ. ದೇಶದ ಇದುವರೆಗಿನ ಸೋಂಕಿತರ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಕೊರೋನಾದಿಂದ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ದೇಶದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 452ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕೊರೋನಾದಿಂದಾಗಿ ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆಯೊಳಗೆ ಒಟ್ಟು 32 ಜನರು ಸಾವನ್ನಪ್ಪಿದ್ದಾರೆ. 1,076 ಇದ್ದ ಕೊರೋನಾ ಸೋಂಕಿತರ ಸಂಖ್ಯೆ ಕೇವಲ 24 ಗಂಟೆಗಳಲ್ಲಿ 13,835ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅವರಲ್ಲಿ 1,766 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯಕ್ಕೆ 11,616 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ 118 ಜನರಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,320ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ 7 ಜನರು ಸಾವನ್ನಪ್ಪಿದ್ದು, ಕೊರೋನಾಗೆ ಒಟ್ಟಾರೆ 201 ಜನರು ಬಲಿಯಾಗಿದ್ದಾರೆ. ಇದುವರೆಗೂ ಪತ್ತೆಯಾಗಿರುವ 3,320 ಕೊರೋನಾ ಪ್ರಕರಣಗಳಲ್ಲಿ 2,085 ಕೇಸುಗಳು ಮುಂಬೈನದ್ದಾಗಿವೆ.

ದೇಶದಲ್ಲಿ ಕೊರೋನಾದಿಂದ 452 ಜನ ಸಾವನ್ನಪ್ಪಿದ್ದು, ಮಹಾರಾಷ್ಟ್ರದಲ್ಲಿ 201, ಮಧ್ಯಪ್ರದೇಶದಲ್ಲಿ 57, ಗುಜರಾತ್ ಮತ್ತು ದೆಹಲಿಯಲ್ಲಿ 38 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದ ಟಾಪ್​ 3 ಕೊರೋನಾ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ ಈ 4 ರಾಜ್ಯಗಳಿವೆ. ತಮಿಳುನಾಡಿನಲ್ಲಿ 15, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ 14, ಪಂಜಾಬ್ ಮತ್ತು ಕರ್ನಾಟಕದಲ್ಲಿ 13, ರಾಜಸ್ಥಾನದಲ್ಲಿ 11, ಪಶ್ಚಿಮ ಬಂಗಾಳದಲ್ಲಿ 10 ಜನರು ಸಾವನ್ನಪ್ಪಿದ್ದಾರೆ.


Spread the love

About Laxminews 24x7

Check Also

ಕನ್ನಡ ನಾಮಫಲಕ: ಗಡುವು ವಿಸ್ತರಿಸಿದ್ದಕ್ಕೆ ಕರವೇ ನಾರಾಯಣಗೌಡ ಗರಂ

Spread the loveಬೆಂಗಳೂರು, (ಫೆಬ್ರವರಿ 29): ಕರ್ನಾಟಕದ (Karnataka) ಎಲ್ಲಾ ಅಂಗಡಿ ಮಳಿಗೆಗಳ ಬೋರ್ಡ್​ಗಳಲ್ಲಿ (Kannada Board) ಶೇ.60 ರಷ್ಟು ಕನ್ನಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ