Breaking News
Home / Uncategorized / 2 ರಿಂದ 18 ವರ್ಷದೊಳಗಿನ ಮಕ್ಕಳು ಈ ವರ್ಷದ ಸೆಪ್ಟೆಂಬರ್ ವೇಳೆಗೆ ಕೊವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಳ್ಳಬಹುದು

2 ರಿಂದ 18 ವರ್ಷದೊಳಗಿನ ಮಕ್ಕಳು ಈ ವರ್ಷದ ಸೆಪ್ಟೆಂಬರ್ ವೇಳೆಗೆ ಕೊವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಳ್ಳಬಹುದು

Spread the love

ಲಸಿಕೆಗಳಿಗಾಗಿ ಹಂತ 2-3 ಕ್ಲಿನಿಕಲ್ ಪ್ರಯೋಗಗಳು ಪ್ರಸ್ತುತ ಮಕ್ಕಳ ಮೇಲೆ ನಡೆಯುತ್ತಿವೆ. ಭಾರತದಲ್ಲಿ ಮಕ್ಕಳಲ್ಲಿ ಎರಡು ಲಸಿಕೆಗಳನ್ನು ಪರೀಕ್ಷಿಸಲಾಗಿದೆ. ಅವುಗಳೆಂದರೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಮತ್ತು ಜೈಡಸ್ ಕ್ಯಾಡಿಲಾದ ಜೈಕೋವ್-ಡಿ. ಕೊವಾಕ್ಸಿನ್ ಪ್ರಯೋಗವು 525 ಸ್ವಯಂಸೇವಕರನ್ನು ಒಳಗೊಂಡಿದೆ ಆದರೆ ಜೈಕೋವ್-ಡಿ ಯ ಪ್ರಯೋಗಗಳು-ಹಂತ II/III ಕ್ಲಿನಿಕಲ್ ಅಧ್ಯಯನದ ಭಾಗವಾಗಿ-12-18 ವಯಸ್ಸಿನ ಗುಂಪಿನಲ್ಲಿ 1,000 ಸ್ವಯಂಸೇವಕರನ್ನು ಒಳಗೊಂಡಿದೆ.

 

ಈ ಹಿಂದೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಿರ್ದೇಶಕ ರಣದೀಪ್ ಗುಲೇರಿಯಾ ಇದೇ ರೀತಿಯ ಟೈಮ್‌ಲೈನ್ ಬಗ್ಗೆ ಮಾತನಾಡಿದ್ದರು.

 

ಭಾರತದಲ್ಲಿ ಮಕ್ಕಳಿಗೆ ಲಸಿಕೆ: ಸ್ಥಿತಿಗತಿ ಏನು?

ಭಾರತ್ ಬಯೋಟೆಕ್, ಫೈಜರ್ ಮತ್ತು ಜೈಡಸ್ ಲಸಿಕೆಗಳು ಶೀಘ್ರದಲ್ಲೇ ಲಭ್ಯವಿರುತ್ತವೆ ಎಂದು ಗುಲೇರಿಯಾ ಈ ಹಿಂದೆ ಹೇಳಿದ್ದರು. ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ದೆಹಲಿ ಏಮ್ಸ್ ಮತ್ತು ಇತರ ಐದು ಆಸ್ಪತ್ರೆಗಳಲ್ಲಿ ಪರೀಕ್ಷೆಯ ಹಂತದಲ್ಲಿದೆ. ಮಧ್ಯಂತರ ದತ್ತಾಂಶವು ತುಂಬಾ ಧನಾತ್ಮಕ ಮತ್ತು ಪ್ರೋತ್ಸಾಹದಾಯಕವಾಗಿದೆ. ಡೇಟಾದ ಅಂತಿಮ ವಿಶ್ಲೇಷಣೆಯ ನಂತರ ಇದು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮಕ್ಕಳಿಗೆ ಲಭ್ಯವಿರುತ್ತದೆ ಎಂದಿದ್ದಾರೆ ಗುಲೇರಿಯಾ.

 

ಜೈಡಸ್ ಕ್ಯಾಡಿಲಾ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗಾಗಿ ಜೈಕೋವ್ ಡಿ ಲಸಿಕೆಯನ್ನು ಕೂಡ ನೀಡಿದ್ದಾರೆ. ಇದು 12-18 ವರ್ಷಗಳ ಗುಂಪಿಗೆ ತನ್ನ ಪ್ರಯೋಗವನ್ನು ಮುಗಿಸಿದೆ. ಅಹಮದಾಬಾದ್ ಮೂಲದ ಕಂಪನಿಯು ತನ್ನ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆಯ ತುರ್ತು ಬಳಕೆ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು ಹೆಚ್ಚಿನ ಡೇಟಾ ಕೇಳಲಾಗಿದೆ.

 

ಭಾರತ್ ಬಯೋಟೆಕ್ ಮೂಗು ಮೂಲಕ ಹಾಕುವ ಲಸಿಕೆ (nasal vaccine) ಪ್ರಯೋಗದಲ್ಲಿ ಮಕ್ಕಳನ್ನು ಸೇರಿಸಿದೆ. ಇದು ಒಂದು ಶಾಟ್ ಮೂಗು ಮೂಲಕ ಹಾಕುವ ಲಸಿಕೆ ಆಗಿದೆ.

 

ಸೆರಮ್ ಇನ್‌ಸ್ಟಿಟ್ಯೂಟ್ ಸಿಇಒ ಆದರ್ ಪೂನವಲ್ಲಾ ಅವರು ಶುಕ್ರವಾರ ಕೊವೊವಾಕ್ಸ್ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಹುತೇಕ ಜನವರಿ-ಫೆಬ್ರವರಿಯಲ್ಲಿ ಆರಂಭಿಸಲಾಗುವುದು ಎಂದು ಹೇಳಿದ್ದರು.

 

ಜಾಗತಿಕವಾಗಿ ಫೈಜರ್-ಬಯೋನೆಟ್ಚ್ ಮತ್ತು ಮಾಡರ್ನಾದಿಂದ mRNA ಲಸಿಕೆಗಳು, ಸಿನೋವಾಕ್ ಮತ್ತು ಸಿನೋಫಾರ್ಮ್ ನಿಂದ 12 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ಪರೀಕ್ಷಿಸಲಾಗಿದೆ ಎಂದು ನೇಚರ್ ನಿಯತಕಾಲಿಕದ ಲೇಖನದಲ್ಲಿ ಹೇಳಿದೆ. ಅಮೆರಿಕ, ಇಸ್ರೇಲ್ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ಈಗ ಈ ವಯಸ್ಸಿನವರಿಗೆ ಲಸಿಕೆಗಳನ್ನು ನೀಡುತ್ತಿವೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಯಾವುದೇ ಲಸಿಕೆಯನ್ನು ಅನುಮೋದಿಸಲಾಗಿಲ್ಲ.

 

ಫೈಜರ್ ಲಸಿಕೆ 12-17 ವರ್ಷ ವಯಸ್ಸಿನ ಮಕ್ಕಳ ಮೇಲೆ ಬಳಸಲು ಈಗಾಗಲೇ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ನ ಅನುಮತಿಯನ್ನು ಪಡೆದಿದೆ. ಇದು ಸೆಪ್ಟೆಂಬರ್ ವೇಳೆಗೆ 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಅನುಮೋದನೆಯನ್ನು ನಿರೀಕ್ಷಿಸುತ್ತದೆ. ಕಂಪನಿಯು 6 ತಿಂಗಳಿಂದ 11 ವರ್ಷದೊಳಗಿನ ಮಕ್ಕಳ ಮೇಲೆ ಪ್ರಯೋಗಗಳನ್ನು ನಡೆಸುತ್ತಿದೆ.

 

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಕೂಡ 12-17 ವರ್ಷ ವಯಸ್ಸಿನ ಮಕ್ಕಳ ಮೇಲೆ ಪ್ರಯೋಗಗಳನ್ನು ಆರಂಭಿಸಿದೆ.

 

ಎಲ್ಲಾ ವಯಸ್ಸಿನ ಮಕ್ಕಳಿಗೂ ಇದೆಯೇ?

12-18 ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕುವಲ್ಲಿ ಆದ್ಯತೆ ನೀಡಲಾಗುವುದು. ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳನ್ನು ಅವಲಂಬಿಸಿ, ವಿವಿಧ ಹಂತಗಳಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆಗಳನ್ನು ಲಭ್ಯವಾಗುವಂತೆ ಮಾಡಬಹುದು. ಮಕ್ಕಳ ಜನಸಂಖ್ಯೆಯನ್ನು ಪೂರೈಸಲು ಭಾರತಕ್ಕೆ ಕನಿಷ್ಠ 20 ಕೋಟಿ ಡೋಸ್‌ಗಳ ಅಗತ್ಯವಿದೆ.

 

ಎಷ್ಟು ಡೋಸ್?

12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಫಿಜರ್ ಬಯೋಟೆಕ್ ಲಸಿಕೆ ಡೋಸೇಜ್ ವಯಸ್ಕರಂತೆಯೇ ಸಮಾನವಾಗಿರುತ್ತದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಫೈಜರ್ ಕಡಿಮೆ ಡೋಸ್‌ನೊಂದಿಗೆ ಅಧ್ಯಯನಗಳನ್ನು ಮಾಡುತ್ತಿದೆ. ಭಾರತೀಯ ಲಸಿಕೆ ಕೊವಾಕ್ಸಿನ್‌ಗೆ ಸಂಬಂಧಿಸಿದಂತೆ, ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನಗಳು ಮುಗಿಯುವವರೆಗೂ ಡೋಸೇಜ್ ಬಗ್ಗೆ ಇನ್ನೂ ಖಚಿತವಾಗಿಲ್ಲ.

 

ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗುತ್ತಾರೆಯೇ?

ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ಏರಿಕೆ,ಕೆಲವೊಮ್ಮೆ ಗಂಭೀರ ಪ್ರಕರಣಗಳು ಮತ್ತು ಶಾಲಾ ಆರಂಭವು ಹೆಚ್ಚಿನ ಮಕ್ಕಳಿಗೆ ಲಸಿಕೆ ಹಾಕಲು ಪರಿಗಣಿಸುವಂತೆ ಪ್ರೇರೇಪಿಸುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಜುಲೈ ಆರಂಭದಿಂದಲೂ ಮಕ್ಕಳಲ್ಲಿ ಕೊವಿಡ್ -19 ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಹೆಚ್ಚಾಗಿದೆ.

 

ಆದ್ಯತೆಯ ಗುಂಪು ಇದೆಯೇ?

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಆರೋಗ್ಯ ಸ್ಥಿತಿಗತಿಯನ್ನಾಧರಿಸಿ ಮೊದಲು ಲಸಿಕೆ ಹಾಕುವ ಸಾಧ್ಯತೆಯಿದೆ.


Spread the love

About Laxminews 24x7

Check Also

ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?

Spread the love ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಬೆಂಗಳೂರು & ಚೆನ್ನೈ ನಡುವೆ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ