ಚೆನ್ನೈ: ತಾನು ಪ್ರತಿನಿಧಿಸುವ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಶಾಸಕ ವಿ.ಎಸ್.ಬಾಬು ಅವರ ಗೆಲುವನ್ನು ಅಸಿಂಧುಗೊಳಿಸುವಂತೆ ಕೋರಿ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠವು ಸ್ಟಾಲಿನ್ ಅವರ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ಈಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಾಬು ಅವರು ಸ್ಟಾಲಿನ್ ಅವರನ್ನು 8,795 …
Read More »ದುನಿಯಾ ವಿಜಯ್ – ನಾಗರತ್ನ ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು; 2 ಕೋಟಿ ಜೀವನಾಂಶಕ್ಕೆ ಆದೇಶ
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕಾನೂನಾತ್ಮಕವಾಗಿ ತೆರೆಬಿದ್ದಿದೆ. ಹಲವು ವರ್ಷಗಳಿಂದ ಕೋರ್ಟ್ ಅಂಗಳದಲ್ಲಿದ್ದ ವಿಚ್ಛೇದನ ಪ್ರಕರಣವನ್ನ ಇತ್ಯರ್ಥಪಡಿಸಿರುವ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ, ದಂಪತಿಗೆ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ. ಕ್ರೌರ್ಯದ ಆಧಾರದ ಮೇಲೆ ನಟ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನಾ ಅವರಿಗೆ ನ್ಯಾ. ಡಿಕೆ ಸಿಂಗ್ ಹಾಗು ಶಾಂತಿಭೂಷಣ್ ಅವರ …
Read More »ಮೋದಿ ಸಂಪುಟ ಪುನರ್‌ರಚನೆಗೆ ವೇದಿಕೆ ಸಿದ್ಧ? – ಯುವ ಮುಖಗಳು, ಮಿತ್ರಪಕ್ಷಗಳಿಗೆ ಆದ್ಯತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ಪುನರ್‌ರಚನೆ ನಡೆಯುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಗಳು, ಸಚಿವರ ಕಾರ್ಯಕ್ಷಮತೆ, ಪ್ರಾದೇಶಿಕ ಸಮತೋಲನ ಹಾಗೂ ಮಿತ್ರಪಕ್ಷಗಳ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ಹೊಸ ಮುಖಗಳನ್ನು ಸೇರ್ಪಡೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಕೇಂದ್ರ ಸಚಿವ ಸಂಪುಟದಲ್ಲಿ ಸುಮಾರು 69 ಸಚಿವರಿದ್ದಾರೆ. ಗರಿಷ್ಠ 81 ಸಚಿವರಿಗೆ ಅವಕಾಶವಿದೆ. ಹೀಗಾಗಿ, ಹೆಚ್ಚುವರಿ ಸಚಿವರನ್ನು …
Read More »ಖಾಸಗಿ ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್ ಟ್ಯಾಕ್ಸಿ ನಿರ್ವಹಿಸಲು ಅವಕಾಶ ಕೊಡಿ: ರಾಜ್ಯಗಳಿಗೆ ಗಡ್ಕರಿ ಮನವಿ
ನವದೆಹಲಿ: ಖಾಸಗಿ ದ್ವಿಚಕ್ರ ವಾಹನ ಮಾಲೀಕರು ಬೈಕ್ ಟ್ಯಾಕ್ಸಿ ಸೇವೆ ನಿರ್ವಹಿಸಲು ಅವಕಾಶ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಬುಧವಾರ ಮಾತನಾಡಿದ್ದು, ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಖಾಸಗಿ ದ್ವಿಚಕ್ರ ವಾಹನಗಳ ಮೂಲಕ ಪ್ರಯಾಣಿಕರನ್ನ ಸಾಗಿಸುವ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲಾಗಿದೆ. ಆದರೆ ಕೆಲ ರಾಜ್ಯಗಳಲ್ಲಿ ಇಂತಹ ಸೇವೆಗಳಿಗೆ ಇನ್ನೂ ಅವಕಾಶ ನೀಡಲಾಗಿಲ್ಲ. …
Read More »ಕಾಂಗ್ರೆಸ್ ಶಾಸಕನಿಂದ ಕಮೀಷನ್ ಆರೋಪ ವಿಚಾರ ತನಿಖೆ ಆಗಲಿ: ಯು.ಟಿ. ಖಾದರ್
ಬೆಂಗಳೂರು: ಸಚಿವರ ಹೆಸರಿನಲ್ಲಿ ಕಮೀಷನ್ ಕೇಳಿದ ಪ್ರಕರಣ ತನಿಖೆ ಆಗಲಿ ಎಂದು ಸಚಿವ ಯುಟಿ. ಖಾದರ್ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರಿಂದ 7% ಕಮೀಷನ್ ಆರೋಪ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಚಿವರ ಹೆಸರು ಹೇಳಿ ಕಮೀಷನ್ ತಗೋತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಗ್ರಾಮೀಣಾಭಿವೃದ್ದಿ ಸಚಿವರು ತಕ್ಷಣ ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರಿಗೂ ನಾನು ತನಿಖೆ ಮಾಡೋಕೆ ಮನವಿ …
Read More »26 ಎಕ್ರೆ ಸರ್ಕಾರಿ ಜಮೀನಿಗೆ ಅಕ್ರಮ ಇ-ಖಾತೆ – ನಗರಸಭೆ ಅಧಿಕಾರಿಗಳ ವಿರುದ್ಧ ದೂರು ಹಿನ್ನಲೆ ತನಿಖಾ ತಂಡ ರಚನೆ
ಚಿಕ್ಕಬಳ್ಳಾಪುರ: ತಾಲೂಕಿನ ಅಣಕನೂರು ಗ್ರಾಮದ ಸರ್ವೆ ನಂ.109 ರಲ್ಲಿರುವ 26 ಎಕರೆ ಸರ್ಕಾರಿ ಜಮೀನಿಗೆ ಖಾಸಗಿ ಮಹಿಳೆಯ ಹೆಸರಲ್ಲಿ ಅಕ್ರಮವಾಗಿ ಇ-ಖಾತೆ ಸೃಜಿಸಿದ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ದೂರು ನೀಡಿದ ಹಿನ್ನೆಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಕ್ರಮ ಇ-ಖಾತೆ ಪ್ರಕರಣದ ತನಿಖೆಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ಅವರು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಎಸಿ ಅಶ್ವಿನ್, ಪಿಡಿ ಮಂಜುನಾಥ್ …
Read More »ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳದಲ್ಲಿ ಮುಳುಗಿ ಕುಳಿತಿದ್ದ ರೌಡಿಶೀಟರ್!
ಶಿವಮೊಗ್ಗ: ಮಹಾಭಾರತ ಯುದ್ದದ ಕೊನೆಯ ದಿನ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ ಕಥೆ ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ರೌಡಿಶಿಟರ್ ಒಬ್ಬ ಕೊಳದ ನೀರಲ್ಲಿ ಅರ್ಧಗಂಟೆ ಮುಳುಗಿ ಕುಳಿತ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ರೌಡಿಶೀಟರ್ ದಿಲೀಪ್ ಅಲಿಯಾಸ್ ಕರಿಯಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳದ ನೀರಿನಲ್ಲಿ ಅಡಗಿದ್ದ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿ 16 ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಈತನ …
Read More »ಮಣ್ಣಲ್ಲಿ ಮಣ್ಣಾದ ಕಟ್ಟಡಗಳು, ಮೂಲಸೌಕರ್ಯ; ನೇಪಾಳ ಭೀಕರ ಪ್ರವಾಹಕ್ಕೆ ಎಲ್ಲವೂ ನಾಮಾವಶೇಷ
ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯದ ಹೊಡೆತಕ್ಕೆ ಸಿಲುಕಿ ಜನವಸತಿ, ಬೃಹತ್ ಕಟ್ಟಡಗಳೆಲ್ಲವೂ ನಾಮಾವಶೇಷವಾಗಿವೆ. ಟಿಬೆಟ್-ನೇಪಾಳ ಗಡಿಯಲ್ಲಿರುವ ಗೈರಾಂಗ್ ಗಡಿ ಠಾಣೆಯು ಪ್ರವಾಹದ ಮಣ್ಣು, ಕಲ್ಲು ಮತ್ತು ಶಿಲಾಖಂಡರಾಶಿಗಳಿಂದ ಕಣ್ಮರೆಯಾಗಿದೆ. ಜಲಪ್ರಳಯ ನಂತರದ ಹೊಸ ವೈಮಾನಿಕ ದೃಶ್ಯಾವಳಿಗಳನ್ನು ನೋಡಿದರೆ, ಅಲ್ಲಿ ಒಂದು ಕಾಲದಲ್ಲಿ ಪ್ರಮುಖ ಗಡಿ ನೆಲೆ ಇದ್ದಿತ್ತೆಂದು ಊಹಿಸುವುದು ಕಷ್ಟ ಎನ್ನುವಂತಾಗಿದೆ. ಸಂಶೋಧಕ ಇಯಾನ್ ಕ್ಯಾಮರೂನ್ ಹಂಚಿಕೊಂಡ ಡ್ರೋನ್ ಚಿತ್ರಣದಲ್ಲಿ ವಿನಾಶವು ಸ್ಪಷ್ಟವಾಗಿ ಗೋಚರಿಸಿದೆ. ಆಗಸ್ಟ್ 26 ರಂದು …
Read More »ಬೀಳೂರು ಅಜ್ಜನ ಶಿಕ್ಷಣ ಸೇವೆ ಇಂದಿಗೂ ಆದರ್ಶ: ಡಾ. ಕಟಗಿಹಳ್ಳಿಮಠ
ಬಾಗಲಕೋಟೆ : ಜನರಲ್ಲಿ ಶಿಕ್ಷಣ, ಸಂಸ್ಕಾರ, ಸದಾಚಾರ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಠಗಳ ಪರಂಪರೆ ಪ್ರಮುಖವಾಗಿದ್ದು, ಶಿಕ್ಷಣ ಕ್ರಾಂತಿಯಲ್ಲಿ ಬೀಳೂರು ಗುರುಬಸವ ಮಹಾಸ್ವಾಮಿಗಳ ಶ್ರಮ ಸ್ಮರಣೀಯವಾಗಿದೆ ಎಂದು ಬಿವ್ಹಿವ್ಹಿ ಸಂಘದ ಆಡಳಿತಾಧಿಕಾರಿಗಳಾದ ಡಾ. ವ್ಹಿ.ಎಸ್. ಕಟಗಿಹಳ್ಳಿಮಠ ಹೇಳಿದರು. ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಹಾಗೂ ಎನ್‌ಸಿಸಿ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿವಿವಿ ಸಂಘದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಬೀಳೂರು ಗುರುಬಸವ ಮಹಾಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ …
Read More »ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಈ ನೈವೇದ್ಯಗಳನ್ನು ಅರ್ಪಿಸಲೇಬೇಕು
ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುವ ಕೃಷ್ಣ ಜನ್ಮಾಷ್ಟಮಿಯನ್ನುಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಶ್ರೀಕೃಷ್ಣನ ದೇವಾಲಯಗಳಲ್ಲಿ 56 ಬಗೆಯ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಅದೇ ರೀತಿ ಭಕ್ತರು ಮನೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ಕೃಷ್ಣನಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಈ ಬಾರಿ ಸೆಪ್ಟೆಂಬರ್ 5 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಕಷ್ಟಗಳೆಲ್ಲಾ ಕಳೆದು ಇಷ್ಟಾರ್ಥಗಳೆಲ್ಲಾ ಈಡೆರಲು, ಮನೆಯಲ್ಲಿ ಶಾಂತಿ ಸಮೃದ್ಧಿ, ಸಕಾರಾತ್ಮಕತೆ ನೆಲೆಸಲು …
Read More »
Laxmi News 24×7