Breaking News
Home / new delhi (page 8)

new delhi

ನನ್ನನ್ನು ಮುಗಿಸಲು ಮುಧೋಳ-ಬೆಂಗಳೂರಿಂದ ಗ್ಯಾಂಗ್​ ಬಂದಿತ್ತು: ಹೊಸ ಬಾಂಬ್​ ಸಿಡಿಸಿದ ಯತ್ನಾಳ್​

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ರಾಜ್ಯ ರಾಜಕಾರಣಕ್ಕೆ ಸಂದೇಶ ರವಾನಿಸಿದೆ. ಆದರೆ, ಈ ಚುನಾವಣೆಯಲ್ಲಿ ನನ್ನನ್ನು ಹಣಿಯಲು ಕಳ್ಳರ ಗ್ಯಾಂಗ್ ಮನೆಯಲ್ಲಿಯೇ ಕುಳಿತು ತಂತ್ರ ಮಾಡಿದೆ. ಮಾತ್ರವಲ್ಲ, ಮುಧೋಳ ಮತ್ತು ಬೆಂಗಳೂರಿನಿಂದಲೂ ಬಂದಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬಾಂಬ್ ಸಿಡಿಸಿದ್ದಾರೆ. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ್​, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಈ ಹಿಂದೆ …

Read More »

ಬೆಳಗಾವಿ: ಗಡಿಯಲ್ಲಿ ಭೋರ್ಗರೆದ ಕನ್ನಡ ಪ್ರೇಮ

ಬೆಳಗಾವಿ: ಉದ್ದಾನುದ್ದದ ಕನ್ನಡ ಬಾವುಟ. ಕನ್ನಡದ ಹಿರಿಮೆಯನ್ನು ಎತ್ತಿಹಿಡಿದ ಯುವಜನರ ಕೈಗಳು, ಕನ್ನಡಕ್ಕಾಗಿ ಕೈ ಎತ್ತಿ ಕಲ್ಪವೃಕ್ಷವಾದಂತೆ ಭಾಸವಾಗುತ್ತಿತ್ತು. ಜಾನಪದ ಕಲಾವಿದರ ಹೆಜ್ಜೆಗಳೂ ಕನ್ನಡದ ಹಿರಿಮೆಯನ್ನೇ ಮಾತನಾಡುತ್ತಿದ್ದವು. ಎತ್ತ ನೋಡಿದರತ್ತ, ಬೆಳಗಾವಿಯ ನಗರದಲ್ಲಿ ಕನ್ನಡದ ಡಿಂಡಿಮ ಮೊಳಗಿತು. ಮೂರು ವರ್ಷಗಳ ನಂತರ ಮಂಗಳವಾರ ಜರುಗಿದ ಕರ್ನಾಟಕ ರಾಜ್ಯೋತ್ಸವದಲ್ಲಿ ಹರ್ಷೋದ್ಗಾರಗಳು ಮುಗಿಲು ಮುಟ್ಟಿದ್ದರೆ, ಹೆಜ್ಜೆಗಳು ಭುವಿಯನ್ನು ನಡುಗಿಸುತ್ತಿದ್ದವು. ಅನ್ಯ ಭಾಷಿಗರು ಸೊಲ್ಲೆತ್ತದಂತೆ ಕನ್ನಡದ ಧ್ವನಿ ನೆಲ-ಬಾನು ಒಂದು ಮಾಡಿದವು. ನಾಡು, ನುಡಿಯ …

Read More »

ಮೆಳವಂಕಿ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸರ್ವೋತ್ತಮ ಜಾರಕಿಹೊಳಿ

  ಗೋಕಾಕ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದ ಸಾರ್ವಜನಿಕ ಸಂಚಾರಕ್ಕಾಗಿ ಮೆಳವಂಕಿ ಹತ್ತಿರ ಸೇತುವೆ ನಿರ್ಮಾಣ ಕಾಮಗಾರಿಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು. ಮಂಗಳವಾರದಂದು ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಂಜೂರಾದ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಕಾಮಗಾರಿ ಅನುಷ್ಠಾನದಿಂದ ದಂಡಿನಮಾರ್ಗ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು …

Read More »

ಕರ್ನಾಟಕದಲ್ಲೇ ಬೆಳಗಾವಿ ಉಳಿಸಲು ಹೋರಾಡಿದ್ದ ನಾಗನೂರು ಶ್ರೀ

ಅಥಣಿ(ನ.01): ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅಗ್ರಗಣ್ಯರಲ್ಲಿ ಬೆಳಗಾವಿ ರುದ್ರಾಕ್ಷಿ ಮಠದ ನಾಗನೂರಿನ ಡಾ. ಶಿವಬಸವ ಸ್ವಾಮೀಜಿಯೂ ಒಬ್ಬರು. ಅವರು ಸ್ವಾತಂತ್ರ್ಯಕ್ಕೆ ಎಷ್ಟು ಶ್ರಮಿಸಿದ್ದರೋ ಅಷ್ಟೇ ಶ್ರಮವಹಿಸಿ ಗಡಿ ನಾಡುವ ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಆಗ ಕನ್ನಡ-ಮರಾಠಿಗರ ಭಾಷಾ ಏಕೀಕರಣ ದನಿ ಮುಗಿಲೆತ್ತರಕ್ಕೆ ಏರಿತ್ತು. ಕೇಂದ್ರ ಸರ್ಕಾರ ಫಜಲ್‌ ಅಲಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ನೇಮಿಸಿತ್ತು. ಈ ಸಮಿತಿ ಬೆಳಗಾವಿಗೆ ಭೇಟಿ ನೀಡಿದ್ದಾಗ ಸಮಿತಿಯ ಮುಂದೆ ಶಿವಬಸವ …

Read More »

ಮೂಡಲಗಿ ಪಟ್ಟಣಕ್ಕೆ 3 ಸಾವಿರ ಕನ್ನಡ ಬಾವುಟಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : 67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ಪಟ್ಟಣದ ಕನ್ನಡ ಪರ ಸಂಘಟನೆಗಳಿಗೆ 3 ಸಾವಿರ ಕನ್ನಡ ಬಾವುಟಗಳನ್ನು ವಿತರಿಸಿದರು.     ಮೂಡಲಗಿ ಪಟ್ಟಣದಲ್ಲಿ ನ. 3 ರಂದು ತಾಲೂಕಿನ ಕನ್ನಡ ಪರ ಸಂಘಟನೆಗಳಿಂದ ಈ ಬಾರಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಅದಕ್ಕಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಂಘಟನೆಗಳ ಕಾರ್ಯಕರ್ತರಿಗೆ ಕನ್ನಡ ಬಾವುಟಗಳನ್ನು ವಿತರಿಸಿದರು. …

Read More »

ನುಡಿದಂತೆ ನಡೆದ ಹೆಮ್ಮೆಯ ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಮೂಡಲಗಿಗೆ ಉಪನೋಂದಣಿ ಅಧಿಕಾರಿಗಳ ಕಛೇರಿಯನ್ನು ಆರಂಭಿಸುವ ಮೂಲಕ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಮತ್ತು ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.     ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ಸೋಮವಾರದಂದು ನೂತನವಾಗಿ ಆರಂಭಗೊಂಡಿರುವ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಕ್ಟೋಬರ ತಿಂಗಳಾಂತ್ಯಕ್ಕೆ ಮೂಡಲಗಿಯಲ್ಲಿ ಕಛೇರಿಯ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರು ಹಾಗೂ ರೈತರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿರುವದಾಗಿ ಅವರು ಹೇಳಿದರು. …

Read More »

ಕುಂದಾನಗರಿಯಲ್ಲಿ ರಾಜ್ಯೋತ್ಸವಕ್ಕೆ ಭಾರೀ ಸಿದ್ಧತೆ

ಬೆಳಗಾವಿ : ಮೈಸೂರಿಗೆ ಹೇಗೆ ದಸರಾ ಪ್ರಾಮುಖ್ಯವೋ ಹಾಗೆ ರಾಜ್ಯೋತ್ಸವ ಬೆಳಗಾವಿಗೆ ಪ್ರಾಮುಖ್ಯ. ಇಲ್ಲಿ ನಡೆಯುವ ರಾಜ್ಯೋತ್ಸವ ಸಂಭ್ರಮ ಕಣ್ತುಂಬಿಕೊಳ್ಳೋದೇ ಸಂಭ್ರಮ.ಕೊರೋನಾ ಹಾಗೂ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ರಾಜ್ಯೋತ್ಸವ ಈ ಬಾರಿ ಅದ್ದೂರಿಯಾಗಿ ನೆರವೇರಲಿದೆ. ಈ ಮಧ್ಯೆಯೇ ರಾಜ್ಯೋತ್ಸವದಂದೇ ಕರಾಳ ದಿನಾಚರಣೆಗೆ MES ಮುಂದಾಗಿದೆ.ಇದು ಕನ್ನಡಿಗರನ್ನು ಕೆರಳಿಸಿದೆ.   ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ ದಿನಕ್ಕೆ ಕರೆ ನೀಡುತ್ತಿರುವ ಎಂಇಎಸ್ ಪುಂಡರಿಗೆ ಮಹಾರಾಷ್ಟ್ರದ ಮಾಜಿ …

Read More »

ಹೋಳಿಗೆ ದಾಸೋಹಕ್ಕೆ ನಟ ಸಾಯಿ ಕುಮಾರ್ ಹಾಗೂ ಸಚಿವ ಗೋವಿಂದ ಕಾರಜೋಳ ಚಾಲನೆ

ಬೆಳಗಾವಿ :ಕುಂದಾನಗರಿ ಬೆಳಗಾವಿಯಲ್ಲಿ ಮೂರು ವರ್ಷಗಳ ಬಳಿಕ ಅದ್ಧೂರಿ ಕನ್ನಡ ರಾಜ್ಯೋತ್ಸವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಬರುವವರಿಗೆಲ್ಲಾ ಹೋಳಿಗೆ ಊಟ ಹಾಕಿಸಲು ನಿರ್ಧರಿಸಲಾಗಿದೆ. ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗುವ 50 ಸಾವಿರ ಜನರಿಗೆ ಹುಕ್ಕೇರಿ ಹಿರೇಮಠ ವತಿಯಿಂದ 1 ಲಕ್ಷ ಹೋಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಈ ಬಾರಿ ಅದ್ದೂರಿಯಾಗಿ ರಾಜ್ಯೋತ್ಸವ ನಡೆಸಲು ತೀರ್ಮಾನಿಸಿದ್ದೇವೆ, ಒಬ್ಬರಿಗೆ ಎರಡು ಹೋಳಿಗೆ ಪ್ರಕಾರ ಒಂದು ಲಕ್ಷ ಹೋಳಿಗೆ ಮಾಡಿಸಲು …

Read More »

ಬೆಳಗಾವಿಗೆ ಬರುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ವಾಪಸ್‌ ಕಳುಹಿಸಿದ ಪೊಲೀಸರು

ಚೀಕ್ಕೋಡಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.ಇತ್ತ ಗಡಿ ಪ್ರದೇಶದಲ್ಲಿ ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ನಾಡವಿರೋಧಿ ಚಟುವಟಿಕೆ ಶುರು ಮಾಡಿದ್ದಾರೆ. ರಾಜ್ಯೋತ್ಸವಕ್ಕೆ ಬೆಳಗಾವಿ ಸಜ್ಜಾಗುತ್ತಿದ್ದರೆ, ನಾಡ ದ್ರೋಹಿ ಶಿವಸೇನೆ ತನ್ನ ಪುಂಡಾಟಿಕೆ ಮುಂದುವರಿಸಿ ರಸ್ತೆಯಲ್ಲಿ ಕುಳಿತು ಹೈಡ್ರಾಮಾ ನಡೆಸಿದೆ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಇರುವ ಕುಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ನಾಳೆ ನಾಡಹಬ್ಬವನ್ನು ಜೋರಾಗಿ ಆಚರಣೆ ಮಾಡಬೇಕು ಎಂದು ಕನ್ನಡಿಗರು ತಯಾರಿ ನಡೆಸುತ್ತಿದ್ದಾರೆ. ಇತ್ತ ಶಿವಸೇನೆ …

Read More »

ರಾಜ್ಯದಲ್ಲಿ ಒಟ್ಟು‌ 29 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜು ಘೋಷಣೆ ಮಾಡಲಾಗಿದೆ.

ಬೆಂಗಳೂರು: ಶಿಕ್ಷಣ ಇಲಾಖೆಯಿಂದ (Education Department) ಹೊಸ ಪಿಯು ಕಾಲೇಜು ಪ್ರಾರಂಭಿಸಲು ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು‌ 29 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜು ಘೋಷಣೆ ಮಾಡಲಾಗಿದೆ. ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಲಾದ ಸ್ಥಳಗಳ ಪಟ್ಟಿ ಈ ಕೆಳಗಿನಂತಿದೆ. 1.ಸರ್ಕಾರಿ ಪದವಿ ಪೂರ್ವ ಕಾಲೇಜು, ದೇವತ್ಕಲ್, ಸುರಪೂರ ತಾಲ್ಲೂಕು, ಯಾದಗಿರಿ ಜಿಲ್ಲೆ. 2. ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಣಸಗಿ, ಸುರಪೂರ ತಾಲ್ಲೂಕು, ಯಾದಗಿರಿ …

Read More »