Home / ರಾಜಕೀಯ (page 1810)

ರಾಜಕೀಯ

ಜನರ ಜೀವದ ಜತೆಗೆ ಚೆಲ್ಲಾಟವಾಡಿ ಪರಿಸ್ಥಿತಿ ಲಾಭ ಪಡೆದುಕೊಳ್ಳವವರಿಗೆ ತಕ್ಕ ಶಾಸ್ತಿ:ಲಕ್ಷ್ಮಣ ಸವದಿ

ಬೆಂಗಳೂರು : ಜನರ ಜೀವದ ಜತೆಗೆ ಚೆಲ್ಲಾಟವಾಡಿ ಪರಿಸ್ಥಿತಿ ಲಾಭ ಪಡೆದುಕೊಳ್ಳವವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಾಸಗಿ ವಾಹನಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ವೈರಸ್ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸಾರಿಗೆ ಸಂಸ್ಥೆಗಳ ಬಸ್ಸುಗಳ ಮತ್ತು ರೈಲು ಸಂಚಾರಗಳನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದು …

Read More »

ನಾಳೆಯಿಂದ ಸಂಪೂರ್ಣ ರಾಜ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ?.bsy

27 ಕ್ಕೇರಿದ ಕೊರೋನಾ ಸೊಂಕೀತರ ಸಂಖ್ಯೆ: ನಾಳೆಯಿಂದ ಇಡೀ ರಾಜ್ಯ ಸಂಪೂರ್ಣ ಲಾಕಡೌನ್ ಸಾಧ್ಯತೆ ಬೆಂಗಳೂರು: ಕೊರೋನಾ ವೈರಸ್ ಸೋಂಕು ನಿಗ್ರಹಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಇಂದಿನಿಂದ ಬಂದ್​ ಆದೇಶ ಹೊರಡಿಸಿದೆ. ಇನ್ನು, ನಾಳೆಯಿಂದ ಸಂಪೂರ್ಣ ರಾಜ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ. ಇಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ …

Read More »

ಕೊರೊನಾ ಪೀಡಿತರಲ್ಲಿ ಶೇ.80 ಮಂದಿಗೆ ಅಲ್ಪಜ್ವರ, ನೆಗಡಿ :ಭಯ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ

ನವದೆಹಲಿ, ಮಾ.23-ದೇಶದಲ್ಲಿ ಕೊರೊನಾ ಪೀಡಿತರದಲ್ಲಿ ಶೇಕಡ 80ರಷ್ಟು ಜನರಿಗೆಅಲ್ಪಜ್ವತ ಮತ್ತು ನೆಗಡಿ (ಶೀತ) ಮಾತ್ರ ಕಂಡು ಬಂದಿದೆ. ಹೀಗಾಗಿ ಜನರು ಭಯ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್‍ಕೌನ್ಸಿಲ್‍ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್) ಸ್ಪಷ್ಟಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಐಸಿಎಂಆರ್ ಮಹಾ ನಿರ್ದೇಶಕ ಬಲರಾಂ ಭಾರ್ಗವ, ಕೋವಿಡ್-19 ವೈರಾಣು ಸೋಂಕು ಹಬ್ಬದಂತೆ ತಡೆಗಟ್ಟಲುಅಗತ್ಯವಾದಎಲ್ಲ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.ನಾವು ಈಗಾಗಲೇ …

Read More »

ಚಾಮರಾಜನಗರಕ್ಕೆ ಭೇಟಿ ನೀಡಲು ನನಗೆ ಮೂಢನಂಬಿಕೆ ಕಾಡಲ್ಲ : ಕಾರಜೋಳ

ಈ ಸುದ್ದಿಯನ್ನು ಶೇರ್ ಮಾಡಿ ಬೆಂಗಳೂರು,ಮಾ.23- ಚಾಮರಾಜನಗರಕ್ಕೆ ಭೇಟಿ ನೀಡಲು ತಮಗೆ ಯಾವುದೇ ಮೂಢನಂಬಿಕೆ ಕಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ನೀವು ನಮ್ಮ ಜಿಲ್ಲೆಗೆ ಬರುತ್ತಿರೋ ಇಲ್ಲವೋ ಆಗ ಯಾವುದೇ ಮೂಢನಂಬಿಕೆ ಕಾಡುವುದಿಲ್ಲ. ಎಲ್ಲ ಕಡೆಗೂ ಬರುತ್ತೇನೆ ಎಂದು ಹೇಳಿದರು. ಚಾಮರಾಜನಗರ ಪಟ್ಟಣ ಪರಿಮಿತಿಯಲ್ಲಿ ಚತುಷ್ಪದ ರಸ್ತೆಯನ್ನಾಗಿ ಅಗಲೀಕರಣಗೊಳಿಸುವ ಕಾಮಗಾರಿ ಪ್ರಾರಂಭಿಸಲಾಗಿದ್ದು, ಕಳೆದ 2019ರ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಬೇಕಿತ್ತು. …

Read More »

SHOCKING : ಬೆಂಗಳೂರಿನಲ್ಲಿ ಹೋಂ ಕ್ವಾರಂಟೆನ್‍ನಲ್ಲಿದ್ದಾರೆ 22 ಸಾವಿರ ಮಂದಿ..!

ಬೆಂಗಳೂರು,ಮಾ.23- ನಗರದಲ್ಲಿ 22 ಸಾವಿರ ಹೋಂ ಕ್ವಾರಂಟೆನ್‍ಗಳಿದ್ದು, ಇವರಲ್ಲಿ 16 ಮಂದಿ ನಗರದ ವಿವಿಧ ಆಸ್ಪತ್ರೆಗಳ ಐಸೋಲೇಷನ್‍ಗಳಲ್ಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು. ಕೊರೊನಾ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ವಾರ್‍ರೂಮ್ ಉದ್ಘಾಟಿಸಿ ಅವರು ಮಾತನಾಡಿದರು. ಹೋಂ ಕ್ವಾರಂಟೆನ್‍ಗಳಲ್ಲಿ ಇರಬೇಕಾದವರು ಮನೆಬಿಟ್ಟು ಹೊರಬರುತ್ತಿದ್ದಾರೆ ಇಂಥವರ ಮೇಲೆ ಪಾಲಿಕೆ ಹದ್ದಿನ ಕಣ್ಣಿಟ್ಟಿದೆ. ಹೋಂ ಕ್ವಾರಂಟೆನ್‍ಗಳು ರಸ್ತೆಗಿಳಿದರೆ ಅವರನ್ನು ಹಿಡಿದು ಮಾಸ್ಕ್ ಕ್ವಾರಂಟೆನ್ ಸೆಂಟರ್‍ಗಳಿಗೆ ರವಾನಿಸಲಾಗುವುದು ಎಂದು …

Read More »

ನವದೆಹಲಿ:ಲಾಕ್‌ಡೌನ್‌ ಅನ್ನು ಹಲವರು ಗಂಭೀರವಾಗಿ ಪರಿಗಣಿಸುತ್ತಿಲ್ಲ.:ನರೇಂದ್ರ ಮೋದಿ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೇರಿರುವ ಲಾಕ್‌ಡೌನ್‌ ಅನ್ನು ಹಲವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಕಟ್ಟುನಿಟ್ಟಿನ ಆದೇಶವನ್ನು ಜನರು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ 80ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಕಂಡು ಬಂದಿವೆ. 400ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ದೇಶದಲ್ಲಿ ಈ ವರೆಗೆ ಕೊರೊನಾಗೆ 8 ಜನ ಮೃತಪಟ್ಟಿದ್ದಾರೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದ ಮಾರ್ಚ್‌ …

Read More »

ಮಹಾರಾಷ್ಟ್ರದಲ್ಲಿ ಕೊರೊನಾಗೆ ಮೂರನೇ ವ್ಯಕ್ತಿ ಬಲಿಯಾಗಿದ್ದು, ಕೊರೊನಾ ದೇಶದಲ್ಲಿ ಈವರೆಗೂ 8 ಜನರನ್ನು ಬಲಿಪಡೆದುಕೊಂಡಿದೆ

ವಿಶ್ವಾದ್ಯಂತ ಹೆಚ್ಚುತ್ತಿರುವ ಮಾರಣಾಂತಿಕ ಕೊರೊನಾ ವೈರಸ್‍ಗೆ ದೇಶದಲ್ಲಿ ಮತ್ತೊಂದು ಬಲಿಯಾಗಿದೆ. ಮುಂಬೈನಲ್ಲಿ ಕೊರೊನಾ ಸೋಂಕಿಗೆ ವಿದೇಶಿ ಪ್ರವಾಸಿಗ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಒಟ್ಟು 8 ಜನರು ಮೃತಪಟ್ಟಿದ್ದಾರೆ. ಮುಂಬೈನಲ್ಲಿ 68 ವರ್ಷದ ಫಿಲಿಪೈನ್ಸ್ ಪ್ರಜೆ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ. ಮುಂಬೈನ ಕಸ್ತೂರಬಾ ಆಸ್ಪತ್ರೆಯಿಂದ ಪ್ರೈವೇಟ್ ಆಸ್ಪತ್ರೆಗೆ ವ್ಯಕ್ತಿಯನ್ನು ಸ್ಥಳಾಂತರಿಸಲಾಗಿತ್ತು. ಅವರು ಮೂತ್ರಪಿಂಡ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾಗೆ ಮೂರನೇ ವ್ಯಕ್ತಿ …

Read More »

ಬೆಳಗಾವಿ ಪೋಲೀಸರು ಸರ್ಕಾರದ ಲಾಕ್ ಡೌನ್ ಆದೇಶವನ್ನು ಅನುಷ್ಠಾನಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಳಗಾವಿ ಪೋಲೀಸರು ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಸರ್ಕಾರದ ಲಾಕ್ ಡೌನ್ ಆದೇಶವನ್ನು ಅನುಷ್ಠಾನಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪಕ್ಕದ ಮಹಾರಾಷ್ಟ್ರ ದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ,ರಾಜ್ಯ ಸರ್ಕಾರ ಹಲವಾರು ನಗರಗಳು ಸೇರಿದಂತೆ ಬೆಳಗಾವಿ ನಗರವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದು ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿ ಪೋಲೀಸರು ಲಾಕ್ ಡೌನ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳಗಾವಿಯ ಖಡೇಬಝಾರ್ ನಿಂದ ಕಾರ್ಯಾಚರಣೆ ಆರಂಂಭಿಸಿರುವ ಪೋಲೀಸರು ಕಿರಾಣ,ಡೈರಿ,ಔಷಧಿ,ಹಣ್ಣು,ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ …

Read More »

15 ದಿನ ಸಿಟಿಯಿಂದ ಹಳ್ಳಿಗಳಿಗೆ ಹೋಗಬೇಡಿ; ಇನ್ಮುಂದೆ ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ಕೇಂದ್ರ; ಸಿಎಂ ಬಿಎಸ್​ವೈ

ಬೆಂಗಳೂರು(ಮಾ.22): ಈ ಮಾರಣಾಂತಿಕ ಕೊರೋನಾ ವೈರಸ್​ ನಿಗ್ರಹ ಮಾಡಲು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಕರ್ನಾಟಕದ ಜನತೆ ಸಂಪೂರ್ಣವಾಗಿ ಸಹಕಾರ  ಕೊಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆಯಿಂದ ನಾನು ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಇಂದಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ್ದೇನೆ. 1700 ಹಾಸಿಗೆಗಳನ್ನು ಒಳಗೊಂಡ ವಿಕ್ಟೋರಿಯಾ …

Read More »

ಕೊರೋನಾ ಭೀತಿ: ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿ, ಮಾರ್ಚ್​ 31ರವರೆಗೆ ಜಿಲ್ಲೆ ಲಾಕ್​ಡೌನ್​

ಸರ್ಕಾರಿ ಕಚೇರಿಗಳು, ಜಿಲ್ಲಾ ಪಂಚಾಯತಿ. ಅಂಚೆ ಕಚೇರಿ, ವಿದ್ಯುತ್ ಇಲಾಖೆ ಮಹಾನಗರ ಪಾಲಿಕೆ, ನೀರು ಸರಬರಾಜು ಕೇಂದ್ರ, ಬ್ಯಾಂಕ್​ಗಳು, ಎಟಿಎಂ, ಔಷಧಿ, ವೈದ್ಯಕೀಯ ಸಲಕರಣೆ, ಕೃಷಿಗೆ ಸಂಬಂಧಿಸಿದ ಚಟುವಟಿಕೆ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೆ ಸಂಬಂಧಿಸಿದಂತೆ ವ್ಯಾಪಾರ ಹಾಗೂ ಮಾರುಕಟ್ಟೆಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ.     ಮೈಸೂರು(ಮಾ.23): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪಾಸಿಟಿವ್​ ಪ್ರಕರಣ ಪತ್ತೆಯಾದ ಹಿನ್ನೆಲೆ, ಇಂದಿನಿಂದ ಜಿಲ್ಲೆ ಲಾಕ್​ಡೌನ್​ ಆಗಲಿದೆ.  ಇಂದಿನಿಂದ ಮಾರ್ಚ್‌ 31ರವೆಗೆ ಜಿಲ್ಲೆಯಲ್ಲಿ …

Read More »