Home / ಜಿಲ್ಲೆ / ಕೊರೊನಾ ಪೀಡಿತರಲ್ಲಿ ಶೇ.80 ಮಂದಿಗೆ ಅಲ್ಪಜ್ವರ, ನೆಗಡಿ :ಭಯ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ

ಕೊರೊನಾ ಪೀಡಿತರಲ್ಲಿ ಶೇ.80 ಮಂದಿಗೆ ಅಲ್ಪಜ್ವರ, ನೆಗಡಿ :ಭಯ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ

Spread the love

ನವದೆಹಲಿ, ಮಾ.23-ದೇಶದಲ್ಲಿ ಕೊರೊನಾ ಪೀಡಿತರದಲ್ಲಿ ಶೇಕಡ 80ರಷ್ಟು ಜನರಿಗೆಅಲ್ಪಜ್ವತ ಮತ್ತು ನೆಗಡಿ (ಶೀತ) ಮಾತ್ರ ಕಂಡು ಬಂದಿದೆ. ಹೀಗಾಗಿ ಜನರು ಭಯ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್‍ಕೌನ್ಸಿಲ್‍ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್) ಸ್ಪಷ್ಟಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಐಸಿಎಂಆರ್ ಮಹಾ ನಿರ್ದೇಶಕ ಬಲರಾಂ ಭಾರ್ಗವ, ಕೋವಿಡ್-19 ವೈರಾಣು ಸೋಂಕು ಹಬ್ಬದಂತೆ ತಡೆಗಟ್ಟಲುಅಗತ್ಯವಾದಎಲ್ಲ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.ನಾವು ಈಗಾಗಲೇ ದೇಶಾದ್ಯಂತ ಸುಮಾರು 17,000 ಪರೀಕ್ಷೆಗಳನ್ನು ನಡೆಸಿದ್ದೇವೆ.

ಭಾರತದಲ್ಲಿಒಂದು ವಾರಕ್ಕೆ 50,000 ದಿಂದ 70,000 ಪರೀಕ್ಷೆಗಳನ್ನು ನಡೆಸುವ ಸಾಮಥ್ರ್ಯವಿದೆ. ಈಗಾಗಲೇ 111 ಸರ್ಕಾರಿ ಪ್ರಯೋಗಾಲಯಗಳಿವೆ. ಇನ್ನೂ ಹೆಚ್ಚು ಹೆಚ್ಚು ಖಾಸಗಿ ಲ್ಯಾಬ್‍ಗಳು ಈ ಪರೀಕ್ಷೆಗಳನ್ನು ನಡೆಸಲು ನಾವು ಸಹಕಾರ ನೀಡುತ್ತಿದ್ದೇವೆ. ಇನ್ನೂ ಹೆಚ್ಚು ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆಗಳನ್ನು ನಡೆಸಲು ಐಸಿಎಂಆರ್ ಅನುವು ಮಾಡಿಕೊಡಲಿದೆಎಂದು ಬಲರಾಂ ಭಾರ್ಗವ ತಿಳಿಸಿದರು.

ದೇಶದಲ್ಲಿ ಕೊರೊನಾ ಪೀಡಿತರಲ್ಲಿ ಶೇ.80 ಮಂದಿಯಲ್ಲಿ ಸಾದಾರಣಜ್ವರ ಮತ್ತುಕಡಿಮೆತೀವ್ರತೆಯ ನೆಗಡಿ(ಶೀತ) ಪ್ರಕರಣಗಳು ಕಂಡುಬಂದಿವೆ. ಕೊರೊನಾ ಸೋಂಕು ವ್ಯಾಪಿಸಿರುವುದು ವಾಸ್ತವ ಸಂಗತಿ. ಆದರೆಜನರು ವಿನಾಕಾರಣಗೊಂದಲ, ಭಯ ಮತ್ತುಆತಂಕಕ್ಕೆಒಳಗಾಗುವ ಅಗತ್ಯವಿಲ್ಲ ಎಂದುಅವರು ಸ್ಪಷ್ಟಪಡಿಸಿದರು.

ಕೊರೊನಾ ಪರೀಕ್ಷೆ ವಿಷಯದಲ್ಲಿ ಭಾರತಯಾವುದೇಅಭಿವೃದ್ದಿ ದೇಶಗಳಿಗಿಂತ ಹಿಂದೆಇಲ್ಲ. ಕೆಲವು ರಾಷ್ಟ್ರಗಳಿಗಿಂತಲೂ ನಮ್ಮಲ್ಲಿನ ಸಾಮಥ್ರ್ಯ ಹೆಚ್ಚಾಗಿದೆ. ಪರೀಕ್ಷೆಗಳನ್ನು ಸಕಾಲದಲ್ಲಿ ನಡೆಸುವ ವ್ಯವಸ್ಥೆ ಮತ್ತು ಸೌಲಭ್ಯಗಳು ನಮ್ಮಲ್ಲಿವೆ. ಫ್ರಾನ್ಸ್‍ನಲ್ಲಿ 10,000, ಇಂಗ್ಲೆಂಡ್‍ನಲ್ಲಿ 16,000, ಅಮೆರಿಕದಲ್ಲಿ 26,000, ಜರ್ಮನಿಯಲ್ಲಿ 42,000, ಇಟಲಿಯಲ್ಲಿ 52,000 ಮತ್ತು ದಕ್ಷಿಣಕೊರಿಯಾದಲ್ಲಿ 80,000 ಪರೀಕ್ಷೆಗಳನ್ನು ನಡೆಸಲಾಗಿದೆ.

ನಾವು ಸುಮಾರು 70.000 ಪರೀಕ್ಷೆಗಳನ್ನು ನಡೆಸಿದ್ದೇವೆ. ನಮ್ಮ ಪರೀಕ್ಷಾ ಫಲಿತಾಂಶಗಳು ಆತಂಕಕಾರಿಯಾಗಿಲ್ಲಎಂದು ಮಹಾ ನಿರ್ದೇಶಕರು ಹೇಳಿದರು. 111 ಸರ್ಕಾರಿ ಲ್ಯಾಬ್‍ಗಳು ಮತ್ತುಇತರ ಖಾಸಗಿ ಪ್ರಯೋಗಾಲಯಗಳು ಇದಕ್ಕಾಗಿ ಸಜ್ಜಾಗಿವೆಎಂದುಅವರು ತಿಳಿಸಿದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ