Breaking News
Home / ಜಿಲ್ಲೆ / SHOCKING : ಬೆಂಗಳೂರಿನಲ್ಲಿ ಹೋಂ ಕ್ವಾರಂಟೆನ್‍ನಲ್ಲಿದ್ದಾರೆ 22 ಸಾವಿರ ಮಂದಿ..!

SHOCKING : ಬೆಂಗಳೂರಿನಲ್ಲಿ ಹೋಂ ಕ್ವಾರಂಟೆನ್‍ನಲ್ಲಿದ್ದಾರೆ 22 ಸಾವಿರ ಮಂದಿ..!

Spread the love

ಬೆಂಗಳೂರು,ಮಾ.23- ನಗರದಲ್ಲಿ 22 ಸಾವಿರ ಹೋಂ ಕ್ವಾರಂಟೆನ್‍ಗಳಿದ್ದು, ಇವರಲ್ಲಿ 16 ಮಂದಿ ನಗರದ ವಿವಿಧ ಆಸ್ಪತ್ರೆಗಳ ಐಸೋಲೇಷನ್‍ಗಳಲ್ಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು.

ಕೊರೊನಾ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ವಾರ್‍ರೂಮ್ ಉದ್ಘಾಟಿಸಿ ಅವರು ಮಾತನಾಡಿದರು. ಹೋಂ ಕ್ವಾರಂಟೆನ್‍ಗಳಲ್ಲಿ ಇರಬೇಕಾದವರು ಮನೆಬಿಟ್ಟು ಹೊರಬರುತ್ತಿದ್ದಾರೆ ಇಂಥವರ ಮೇಲೆ ಪಾಲಿಕೆ ಹದ್ದಿನ ಕಣ್ಣಿಟ್ಟಿದೆ. ಹೋಂ ಕ್ವಾರಂಟೆನ್‍ಗಳು ರಸ್ತೆಗಿಳಿದರೆ ಅವರನ್ನು ಹಿಡಿದು ಮಾಸ್ಕ್ ಕ್ವಾರಂಟೆನ್ ಸೆಂಟರ್‍ಗಳಿಗೆ ರವಾನಿಸಲಾಗುವುದು ಎಂದು ಹೇಳಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2500 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ಒಂದೇ ದಿನ ಆರು ಸಾವಿರ ಹೋಂ ಕ್ವಾರಂಟೆನ್‍ಗಳ ಮಾಹಿತಿ ಕಲೆ ಹಾಕಲಾಗಿದೆ. ಇಂದು ಕೂಡ ಪೆÇಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಿರತಗೊಳ್ಳಲಿದ್ದಾರೆ.

ಹೋಂ ಕ್ವಾರಂಟೆನ್‍ಗಳನ್ನು ಫೋನ್ ಜಿಪಿಎಸ್ ಮೂಲಕ ಟ್ರಾಕ್ ಮಾಡಲಾಗುತ್ತಿದೆ. ಮನೆ ಬಿಟ್ಟು ಹೊರಹೋದವರಿಗೆ ಕರೆ ಮಾಡಿ ಮನೆಗೆ ವಾಪಸ್ಸಾಗುವಂತೆ ಸೂಚಿಸಲಾಗುವುದು. ಅಕ್ಕಪಕ್ಕದ ಮನೆಯವರು ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಅನಿಲ್‍ಕುಮಾರ್ ಹೇಳಿದರು.
ನಗರದಲ್ಲಿ ಕೊರೊನಾ ಹರಡದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ವಾರ್‍ರೂಮ್ ಸ್ಥಾಪಿಸಲಾಗಿದೆ.

ಇಲ್ಲಿ ಅಧಿಕಾರಿಗಳು 24 ಗಂಟೆಗಳ ಕಾಲ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೋಂಕಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇರಲಿದೆ ಎಂದರು. ಮೇಯರ್ ಗೌತಮ್‍ಕುಮಾರ್ ಮಾತನಾಡಿ, ಹೋಂ ಕ್ವಾರಂಟೆನ್‍ಗಳಿರುವ ಮನೆಗಳಿಗೆ ಮಾರ್ಕಿಂಗ್ ಮಾಡಲಾಗುತ್ತಿದೆ. ವಾರ್‍ರೂಮ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಡಿಜಿಟಲ್ ವಾಕಿಟಾಕಿಗಳನ್ನು ನೀಡಲಾಗಿದ್ದು, ರೋಗ ಹರಡದಂತೆ ಬಿಬಿಎಂಪಿಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಯನ್ನು ಎದುರಿಸಲು 24 ಗಂಟೆಗಳ ಕರ್ತವ್ಯ ನಿರ್ವಹಿಸುವ ಕಮಾಂಡ್ ಕಂಟ್ರೋಲ್ ರೂಮ್ ರೆಡಿಯಾಗಿದ್ದು, ಕಾಯಿಲೆ ಬಗ್ಗೆ ಯಾವುದೇ ಮಾಹಿತಿಯಾದರೂ ಮೊದಲು ಕಂಟ್ರೋಲ್‍ರೂಮ್‍ಗೆ ಬರಲಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.


Spread the love

About Laxminews 24x7

Check Also

ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ದ ವಿಡಂಬನಾತ್ಮಕ ಪೋಸ್ಟರ್​​ವೊಂದನ್ನು ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾ

Spread the love ಬೆಂಗಳೂರು: ಕಾವೇರಿ ವಿವಾದ ಹಿನ್ನೆಲೆ ಪ್ರಧಾನಿ ಮೋದಿ ನಡೆದುಕೊಂಡು ಹೋಗುತ್ತಿರುವ ಪಯಣದ ದಿಕ್ಕಿನ ವಿಡಂಬನಾತ್ಮಕ ಪೋಸ್ಟರ್ ಪೋಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ