Home / ನವದೆಹಲಿ (page 11)

ನವದೆಹಲಿ

ಗಡಿ ಜಿಲ್ಲೆಗಳಿಗೆ ಮಲಯಾಳಿ ಹೆಸರು: ಸಿಎಂ ಬಿಎಸ್ ವೈ ಭೇಟಿ ಮಾಡಿದ ಡಾ. ಸಿ.ಸೋಮಶೇಖರ್; ಕೇರಳ ಸಿಎಂಗೆ ಸರ್ಕಾರ ಪತ್ರ

ಬೆಂಗಳೂರು: ಕರ್ನಾಟಕ-ಕೇರಳ ಗಡಿ ಜಿಲ್ಲೆಗಳಲ್ಲಿನ ಊರುಗಳ ಕನ್ನಡ ಹೆಸರನ್ನು ಬದಲಾಯಿಸಿರುವ ವಿಚಾರವಾಗಿ ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದರು. ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಸೋಮವಾರ ಯಡಿಯೂರಪ್ಪ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳನ್ನು ಹೊಂದಿದ …

Read More »

12 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ ಶಿಕ್ಷಕ, ಗ್ರಾಮಸ್ಥರಿಂದ ಥಳಿತ

ನವದೆಹಲಿ: ತನ್ನ 12 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿದ್ದರಿಂದ ಶಾಲಾ ಶಿಕ್ಷಕನೊಬ್ಬನನ್ನು ಥಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮನ್ಪುರ್ ಗ್ರಾಮದಲ್ಲಿ ಶನಿವಾರ ನಡೆದಿದೆ.ವೈಭವ್ ನಾಯಕ್ ಎಂದು ಗುರುತಿಸಲ್ಪಟ್ಟ ಶಿಕ್ಷಕನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. “ಇಂದೋರ್‌ನ ಮನ್‌ಪುರ ಗ್ರಾಮದಲ್ಲಿ ವಾಸಿಸುತ್ತಿರುವ 12 ವರ್ಷದ ಬಾಲಕಿಗೆ ತನ್ನ ಸ್ವಂತ ಶಾಲಾ ಶಿಕ್ಷಕರಿಂದ ಪ್ರೇಮ ಪತ್ರವೊಂದನ್ನು ಕಳುಹಿಸಲಾಗಿದ್ದು, ಅದು ಬಾಲಕಿಯ ಕುಟುಂಬ ಮತ್ತು ಗ್ರಾಮಸ್ಥರ ಗಮನಕ್ಕೆ ಬಂದ …

Read More »

ದೊಡ್ಡ ಕುಟುಂಬದಲ್ಲಿ ಅಸಮಾಧಾನ ಸಾಮಾನ್ಯ: ಸಚಿವ ನಿರಾಣಿ

ಕಲಬುರಗಿ: ಒಂದು ಕುಟುಂಬ ಎಂದ ಮೇಲೆ ಅಸಮಾಧಾನ ಇರುತ್ತದೆ. ಅದರಲ್ಲೂ ಬಿಜೆಪಿ ದೊಡ್ಡ ಕುಟುಂಬ. ಇಬ್ಬರು-ಮೂರು ಶಾಸಕರಿಗೆ ಅಸಮಾಧಾನ ಇರುವುದು ಸಾಮಾನ್ಯ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಮುಂಬೈ ಭೇಟಿ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಲೂ ನಾನು ಹೋಗಲ್ಲ. ನಮ್ಮ‌ ಹೈಕಮಾಂಡ್ ಸಮರ್ಥವಾಗಿದೆ. ಯಾವುದೇ ಸಮಸ್ಯೆ ಇದ್ದರೂ ಪರಿಹರಿಸುವ ಕೆಲಸ ಮಾಡುತ್ತಿದೆ ಎಂದರು. ಇತ್ತೀಚಿನ ಬೆಳವಣಿಗೆಗಳ …

Read More »

ಜೈಲಲ್ಲಿರುವ ರೌಡಿಯ ಪತ್ನಿಯ ಜತೆ ಅಕ್ರಮ ಸಂಬಂಧ: ರೌಡಿಶೀಟರ್‌ನ ಕುತ್ತಿಗೆ ಸೀಳಿ ಬರ್ಬರ ಕೊಲೆ!

ಬೆಂಗಳೂರು: ರಶೀದ್ ಮಲಬಾರಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದವನ ಕುಖ್ಯಾತ ರೌಡಿ ಶೀಟರ್‌ ಸೈಯದ್ ಕರೀಂ ಅಲಿ ಎಂಬಾತನನ್ನು ನಗರದಲ್ಲಿ ಕೊಲೆ ಮಾಡಲಾಗಿದೆ. ಬೇರೊಬ್ಬನ ಪತ್ನಿಯ ಜತೆ ಈತ ಅಕ್ರಮ ಸಂಬಂಧ ಹೊಂದಿದ್ದು ಅದೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಸೈಯದ್‌ನನ್ನು ಚಾಕುವಿನಿಂದ ಚುಚ್ಚಿ, ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಗೋವಿಂದ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೈಯದ್‌ ಇನ್ನೋರ್ಚ ರೌಡಿ ಅನೀಸ್ ಎಂಬಾತನ …

Read More »

ಗೃಹಿಣಿಯರಿಗೆ ಗುಡ್‌ ನ್ಯೂಸ್:‌ ಇಳಿಕೆಯಾಗಿದೆ ಅಡುಗೆ ಎಣ್ಣೆ ಬೆಲೆ

ಕಳೆದ ಒಂದು ತಿಂಗಳಿನಿಂದ ಅಡುಗೆ ಎಣ್ಣೆ ಬೆಲೆಗಳು ಕುಸಿಯುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಲವೆಡೆ ಅಡುಗೆ ಎಣ್ಣೆ ಬೆಲೆಗಳಲ್ಲಿ 20%ನಷ್ಟು ಇಳಿಕೆ ಕಂಡುಬಂದಿದೆ. ಅಡುಗೆ ಎಣ್ಣೆ ಬೆಲೆಗಳ ಇಳಿಕೆಯ ವಿವರ ಇಂತಿದೆ   1. ಪಾಮ್‌ ಎಣ್ಣೆಯ ಬೆಲೆ ಮೇ 7ರಂದು ರೂ.142/ಕೆಜಿ ಇದ್ದಿದ್ದು ಇಂದಿಗೆ 115 ರೂ./ಕೆಜಿಗೆ ಇಳಿದಿದೆ. 2. ಸೂರ್ಯಕಾಂತಿ ಎಣ್ಣೆಯ ಬೆಲೆಯು ಮೇ 5ರಂದು 188ರೂ./ಕೆಜಿ ಇಂದ 157 ರೂ./ಕೆಜಿಗೆ ಇಳಿದಿದೆ. 3. ಸೋಯಾ …

Read More »

ಲಸಿಕೆ ಕೊರತೆ ಮುಚ್ಚಿ ಹಾಕಲು ಲಸಿಕೆ ನಡುವೆ ಅಂತರ ಹೆಚ್ಚಿಸಿದ ಸರ್ಕಾರ

ನವದೆಹಲಿ: ಕೊವಿಶೀಲ್ಡ್ ಲಸಿಕೆ 2ನೇ ಡೋಸ್ ನಡುವಿನ ಅಂತರ ವಿಚಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಲಸಿಕೆ ಕೊರತೆ ಮತ್ತು ನಿಷ್ಕ್ರಿಯತೆ ಮುಚ್ಚಿ ಹಾಕಲು ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಭಾರತಕ್ಕೆ ಶೀಘ್ರವಾಗಿ, ಸಂಪೂರ್ಣ ಲಸಿಕೆ ನೀಡಬೇಕು. ಹಲವರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ …

Read More »

ನಾಯಕತ್ವ ಬದಲಾವಣೆ ಚರ್ಚೆ | ದೆಹಲಿಗೆ ಅರವಿಂದ ಬೆಲ್ಲದ್; ವರಿಷ್ಠರ ಭೇಟಿ ಸಾಧ್ಯತೆ

ನವದೆಹಲಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಶುಕ್ರವಾರ ತಡರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಗೆ ದೌಡಾಯಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬೆಲ್ಲದ್ ಅವರ ದೆಹಲಿಯ ದಿಢೀರ್‌ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಬೆಲ್ಲದ್ ಅವರು ಸಚಿವ ಸಿ.ಪಿ. ಯೋಗೇಶ್ವರ್ ಅವರೊಂದಿಗೆ ಮೇ ಮೂರನೇ ವಾರ ದೆಹಲಿಗೆ ಬಂದಿದ್ದರು. ಆಗ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಬೇಕೆಂಬ ಅವರ ಪ್ರಯತ್ನಗಳು ಫಲಿಸಿರಲಿಲ್ಲ ಎನ್ನಲಾಗಿತ್ತು. ಇದೀಗ ಬೆಲ್ಲದ್ …

Read More »

ಒಂದೆಡೆ ಕಾಂಗ್ರೆಸ್ ಪ್ರತಿಭಟನೆ; ಮುಂಬಯಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 102 ರೂಪಾಯಿಗೆ ಏರಿಕೆ!

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಶುಕ್ರವಾರವೂ(ಜೂನ್ 11) ಮತ್ತೆ ಇಂಧನ ಬೆಲೆ ಏರಿಕೆಯಾಗಿದ್ದು, ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 102 ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ. ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳ ಬೆಲೆ ಅಧಿಸೂಚನೆ ಪ್ರಕಾರ, ಶುಕ್ರವಾರ ಪೆಟ್ರೋಲ್ ಬೆಲೆ ಲೀಟರ್ ಗೆ 25-29 ಪೈಸೆ ಮತ್ತು ಡೀಸೆಲ್ ಲೀಟರ್ ಗೆ 27-30 ಪೈಸೆ ಹೆಚ್ಚಿಸಿರುವುದಾಗಿ ತಿಳಿಸಿದೆ. …

Read More »

ನವದೆಹಲಿ : 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲ್ಲ; ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ

ನವದೆಹಲಿ : ಹೆಮ್ಮಾರಿ ಸೋಂಕಿಗೆ ಹೆದರದವರಿಲ್ಲ. ಡೆಡ್ಲಿ ಸೋಂಕಿನ 3ನೇ ಅವತಾರ ಮಕ್ಕಳಿಗೆ ಮಾರಕ ಎನ್ನುವ ಮಾತುಗಳು ಎಲ್ಲೇಡೆ ಸಾಮಾನ್ಯವಾಗದೆ. ಈ ಆತಂಕಕ್ಕೆ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ತೆರೆ ಎಳೆದಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೋಟ್ಯಾಂತರ ಪೋಷಕರಲ್ಲಿ ನೆಮ್ಮದಿ ತಂದಿದೆ. ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಗುಲೆರಿಯಾ ಹೇಳಿದ್ದಾರೆ. ಆದರೆ ಮುಂಜಾಗ್ರತ ಕ್ರಮವಾಗಿ ಮಾಸ್ಕ್ …

Read More »

COVID ಪಾಸಿಟಿವಿಟಿ ರೇಟ್ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಜೂನ್ 7 ರ ವರೆಗೆ ಇದ್ದ ಲಾಕ್​ಡೌನ್​ನನ್ನು ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇನ್ನು ಒಂದು ವಾರ ವಿಸ್ತರಿಸಿದೆ. ಜೊತೆಗೆ ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.5 ಕ್ಕೆ ಬರುತ್ತದೋ ಆ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆಗೆ ಅವಕಾಶ ನೀಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ. ಸದ್ಯ ರಾಜ್ಯದ ಹಲವು ಜಿಲ್ಲೆಗಳಲ್ಲಿ …

Read More »