Breaking News
Home / ಜಿಲ್ಲೆ / ಹಾಸನ (page 9)

ಹಾಸನ

ಹೋಟೆಲ್‍ನಲ್ಲಿ ಊಟ ಎಂಜಲು ಮಾಡುತ್ತಿರುವ ವಿಡಿಯೋ ವೈರಲ್

ಹಾಸನ: ಜನರು ಕೊರೊನಾ ಭೀತಿಯಲ್ಲಿರುವಾಗ ಹಾಸನದಲ್ಲಿ ಭಯ ಹುಟ್ಟಿಸುವ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೋಟೆಲ್ ಮಾಲೀಕನ ಮಗನೊಬ್ಬ ಗ್ರಾಹಕರಿಗೆ ನೀಡಲು ಇಟ್ಟಿರುವ ಆಹಾರವನ್ನು ಎಂಜಲು ಮಾಡುತ್ತಿದ್ದಾನೆ ಎಂಬ ಅಡಿಬರಹದ ವಿಡಿಯೋ ಹಾಸನದಲ್ಲಿ ವೈರಲ್ ಆಗಿದೆ. ಓರ್ವ ವ್ಯಕ್ತಿ ಹೋಟೆಲ್ ಒಳಗೆ ನಿಂತುಕೊಂಡು ಗ್ರಾಹಕರಿಗೆ ನೀಡಲು ಪಾತ್ರೆಯೊಳಗೆ ಸಂಗ್ರಹಿಸಿಟ್ಟಿರುವ ಆಹಾರವನ್ನು ಸ್ಟಿಕ್‍ನಿಂದ ಪದೇ ಪದೆ ತಿನ್ನುತ್ತಿದ್ದಾನೆ. ಇದನ್ನು ಅಲ್ಲೇ ಇದ್ದವರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, …

Read More »

ರೇವಣ್ಣನ ಮೇಲೆ ಎಂಎಲ್‍ಸಿ ಗೋಪಾಲಸ್ವಾಮಿ ಆಕ್ರೋಶ………..

ಹಾಸನ: ಜಿಲ್ಲೆಯಲ್ಲಿ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಕೊರೊನಾ ವಿರುದ್ಧ ಹೋರಾಡಲು ಬಳಸಬಹುದಾಗಿದ್ದ ಸುಮಾರು 112 ಕೋಟಿ ಹಣ ಮಾಜಿ ಸಚಿವ ರೇವಣ್ಣ ಅವರಿಂದ ಬಳಕೆಯಾಗದೆ ವಾಪಸ್ಸಾಗುವ ಪರಿಸ್ಥಿತಿ ಬಂದಿದೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 15ನೇ ಹಣಕಾಸಿನಲ್ಲಿ ಜಿಲ್ಲಾಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಮೂರಕ್ಕೂ ಸೇರಿ ಹಾಸನ ಜಿಲ್ಲೆಗೆ ಸುಮಾರು 112 ಕೋಟಿ ಹಣ ಬಂದಿದೆ. ಈ ಹಣವನ್ನು ಅಭಿವೃದ್ಧಿ …

Read More »

ಕೊರೊನಾ ಮಧ್ಯೆ ರೈತರಿಗೆ ಮತ್ತೊಂದು ಸಂಕಷ್ಟ- ಹಾಲಿಗೆ ಸರಿಯಾದ ಬೆಲೆ ನೀಡದ್ದಕ್ಕೆ ಆಕ್ರೋಶ

ಹಾಸನ: ಕೊರೊನಾ ಲಾಕ್‍ಡೌನ್‍ನಿಂದಾಗಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಬದುಕು ಬೀದಿಗೆ ಬಂದಿದೆ. ಈ ವೇಳೆ ರೈತರು ಹಾಲು ಉತ್ಪಾದನೆ ಮಾಡಿ ಒಂದಷ್ಟು ಬದುಕು ಕಟ್ಟಿಕೊಂಡಿದ್ರು. ಆದರೆ ಈಗ ಹಾಲಿಗೆ ಫ್ಯಾಟ್ ಬರುತ್ತಿಲ್ಲ ಎಂದು ನೆಪ ಹೇಳಿ ಒಂದು ಲೀಟರ್ ಹಾಲಿಗೆ ಕೇವಲ 9 ರೂಪಾಯಿ ಕೊಡುತ್ತಿದ್ದು, ಕಂಗಾಲಾದ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ ಗ್ರಾಮದ ಸುತ್ತಮುತ್ತಲಿನ ರೈತರು ಕೊರೊನಾ ಭಯ …

Read More »

ಹಾಸನ:ಪೊಲೀಸ್ ಪೇದೆ ಸೇರಿದಂತೆ ಒಟ್ಟು 14 ಜನರಿಗೆ ಕೊರೊನಾ ಪಾಸಿಟಿವ್

ಹಾಸನ: ಇಂದು ಜಿಲ್ಲೆಯಲ್ಲಿ ಪೊಲೀಸ್ ಪೇದೆ ಸೇರಿದಂತೆ ಒಟ್ಟು 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಸೋಂಕಿತರ ಸಂಖ್ಯೆ 99ಕ್ಕೆ ಏರಿಕೆ ಕಂಡಿದೆ. ಪೊಲೀಸ್ ಪೇದೆ ಮತ್ತು ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಹಾಸನದಲ್ಲಿಂದು ಮತ್ತೆ 14 ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಸತ್ಯವಂಗಲ ಹಾಗೂ ಉತ್ತರ ಬಡಾವಣೆಯ ಒಂದು ರಸ್ತೆ ಸೀಲ್‍ಡೌನ್ ಮಾಡಲಾಗಿದೆ. ಕೊರೊನಾ ದೃಢಪಟ್ಟಿರುವ ಪೇದೆ ಹಾಸನ ನಗರದ ಪೊಲೀಸ್ …

Read More »

ಹಾಸನದಲ್ಲಿ ಕೊರೊನಾ ಭೀತಿ- ಸಾಮಾಜಿಕ ಅಂತರ ಮರೆತು ಗ್ರಾಮ ಪಂಚಾಯಿತಿಯಲ್ಲಿ ಗಲಾಟೆ

ಹಾಸನ: ಹಾಸನದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಚೇರಿಯೊಳಗೆ ಜನಪ್ರತಿಗಳು, ಅಧಿಕಾರಿಗಳ ಜೊತೆ ಸಾರ್ವಜನಿಕರು ವಾಕ್ಸಮರ ನಡೆಸಿ ಪರಸ್ಪರ ಹಲ್ಲೆ ನಡೆಸಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ, ಕೆಂಬಾಳು ಗ್ರಾಮದಲ್ಲಿ ಘಟನೆ ನಡೆದಿದ್ದು, ಕೆಂಬಾಳು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಿಂದ ಶುಲ್ಕ ವಿಧಿಸುವ ಸಲುವಾಗಿ ತೀರ್ಮಾನ ತೆಗೆದುಕೊಳ್ಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಇದಕ್ಕೆ ಅಪಸ್ವರ ವ್ಯಕ್ತಪಡಿಸಿದ ಅಂಗಡಿ ಮಾಲೀಕರು, ಸ್ಥಳೀಯರು ಪಂಚಾಯಿತಿಯಲ್ಲಿ …

Read More »

ಮುಂಬೈನಿಂದ ಬಂದವರ ಕ್ವಾರಂಟೈನ್- ಅಂಬುಲೆನ್ಸ್‌ಗೆ ಕಲ್ಲು ತೂರಾಟ…………

ಹಾಸನ: ಮುಂಬೈನಿಂದ ಬಂದವರನ್ನು ಜಿಲ್ಲೆಯ ಹೊಳೆನರಸೀಪುರದಲ್ಲಿ ಕ್ವಾರಂಟೈನ್ ಮಾಡುತ್ತಿರುವುದಕ್ಕೆ ವಿರೋಧಿಸಿ ಅಂಬ್ಯುಲೆನ್ಸ್ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ. ಹೊಳೆನರಸೀಪುರ ತಾಲೂಕಿನ ದೇವರ ಮುದ್ದನಹಳ್ಳಿ ಬಳಿ ಘಟನೆ ನಡೆದಿದ್ದು, ಮುಂಬೈನಿಂದ ಬಂದವರನ್ನು ಇಲ್ಲಿ ಕ್ವಾರಂಟೈನ್ ಮಾಡಿದರೆ ಹಳ್ಳಿಯ ಜನರಿಗೂ ಕೊರೊನಾ ಬರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ವಾರಂಟೈನ್ ಮಾಡಲು ಕರೆದೊಯ್ದಿದ್ದ ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೇ.15ರಂದು ಮುಂಬೈನಿಂದ ಬಂದಿದ್ದ ಒಂದೇ ಕುಟುಂಬದ ನಾಲ್ವರನ್ನು …

Read More »

ಹಾಸನದಲ್ಲಿ ಮತ್ತೆ ಮೂವರಿಗೆ ಕೊರೊನಾ- ಜಿಲ್ಲೆಯಲ್ಲಿ 12ಕ್ಕೇರಿದ ಸೋಂಕಿತರ ಸಂಖ್ಯೆ

ಹಾಸನ: ಜಿಲ್ಲೆಯಲ್ಲಿ ಇಂದು ತಂದೆ-ಮಗ ಸೇರಿದಂತೆ ಮತ್ತೆ ಮೂವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಎಲ್ಲರೂ ಮುಂಬೈನಿಂದ ವಾಪಸ್ ಬಂದವರಾಗಿದ್ದಾರೆ. ಈ ಹಿಂದೆ ಹಾಸನದಲ್ಲಿ ಒಂಬತ್ತು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಅವರೆಲ್ಲರೂ ಚನ್ನರಾಯಪಟ್ಟಣ ತಾಲೂಕಿನವರಾಗಿದ್ದು, ಮುಂಬೈಯಿಂದ ವಾಪಸ್ಸಾದವರಾಗಿದ್ದರು. ಇಂದು ಮತ್ತೆ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಹಾಸನದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 12ಕ್ಕೆ ಏರಿದೆ. ಮೂವರಲ್ಲಿ ಇಬ್ಬರು ಚನ್ನರಾಯಪಟ್ಟಣ ಮೂಲದ ತಂದೆ ಮತ್ತು ಮಗನಾಗಿದ್ದು, ಮುಂಬೈನಿಂದ ಸ್ವಂತ …

Read More »

ಕೊರೊನಾದಿಂದ ಕಲ್ಯಾಣ ಮಂಟಪ ಮಾಲೀಕರಿಗೆ 50 ಕೋಟಿ ನಷ್ಟ

ಹಾಸನ: ಕೊರೊನಾ ವೈರಸ್ ಜಿಲ್ಲೆಯ ಕಲ್ಯಾಣ ಮಂಟಪದ ಮಾಲೀಕರನ್ನು ಅತಂತ್ರ ಸ್ಥಿತಿಗೆ ದೂಡಿದೆ. ಹಾಸನ ನಗರದಲ್ಲೇ ಕಲ್ಯಾಣ ಮಂಟಪ ಮಾಲೀಕರಿಗೆ ಬರೋಬ್ಬರಿ 50 ರಿಂದ 60 ಕೋಟಿ ನಷ್ಟ ಆಗಿದೆ ಎಂದು ಹಾಸನ ಕಲ್ಯಾಣ ಮಂಟಪದ ಅಧ್ಯಕ್ಷ ದಿನೇಶ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಅವರು, ಕಲ್ಯಾಣ ಮಂಟಪ ಮಾಲೀಕರು ಈಗಾಗಲೇ ಮದುವೆಗೆ ಬುಕ್ ಮಾಡಿದವರ ಹಣ ವಾಪಸ್ ಕೊಡಲು ಅಸಾಹಯಕತೆ ತೋಡಿಕೊಂಡಿದ್ದಾರೆ. ಈ ಕುರಿತು ಹಾಸನ …

Read More »

ಗ್ರೀನ್ ಝೋನ್‍ನಲ್ಲಿದ್ದ ಹಾಸನ ಜಿಲ್ಲೆಗೆ ಮುಂಬೈ ಕಂಟಕ!…….

ಹಾಸನ: ಗ್ರೀನ್ ಝೋನ್‍ನಲ್ಲಿದ್ದ ಹಾಸನ ಜಿಲ್ಲೆಗೆ ಮಹಾಮಾರಿ ಕೊರೊನಾ ಕಾಲಿಟ್ಟಿದೆ. ಮುಂಬೈಯಿಂದ ಹಾಸನಕ್ಕೆ ಆಗಮಿಸಿದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಐವರಲ್ಲಿ ಕೊರೊನಾ ದೃಢಪಟ್ಟಿದೆ. ಚನ್ನರಾಯಪಟ್ಟಣ ತಾಲೂಕಿನ ಐವರು ಮೇ 10ರಂದು ಮುಂಬೈನಿಂದ ಬಂದಿದ್ದರು. ಅದರಲ್ಲಿ ಒಂದೇ ಕುಟುಂಬದ ನಾಲ್ವರು ಒಂದೇ ಕಾರಿನಲ್ಲಿ ಬಂದಿದ್ದರು. ಒಂದೇ ಫ್ಯಾಮಿಲಿಯ ಇಬ್ಬರು ಮಕ್ಕಳು, ಓರ್ವ ಮಹಿಳೆ, ಓರ್ವ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಕಾರ್ ಚಾಲಕನ …

Read More »

ಲಾಕ್‍ಡೌನ್ ಎಫೆಕ್ಟ್ – ಸೈಕಲ್ ಹತ್ತಿ ಉತ್ತರಪ್ರದೇಶಕ್ಕೆ ಹೊರಟ ನಾಲ್ವರು ಯುವಕರು

ಹಾಸನ: ಕೊರೊನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ತಮ್ಮ ರಾಜ್ಯಕ್ಕೆ ತೆರಳಲು ಸಾಧ್ಯವಾಗದೆ ನಾಲ್ವರು ಯುವಕರು ಹಾಸನದಲ್ಲೇ ಉಳಿದಿದ್ದರು. ಆದರೆ ಈಗ ಹೊಸದಾಗಿ ಸೈಕಲ್ ಖರೀದಿಸಿ ತಮ್ಮ ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಉತ್ತರಪ್ರದೇಶದಿಂದ ಹಾಸನಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಲಾಕ್‍ಡೌನ್ ನಂತರ ವಾಪಸ್ ತಮ್ಮ ರಾಜ್ಯಕ್ಕೆ ತೆರಳಲಾಗದೇ ಇಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರು ಕೂಡ ವಾಪಸ್ ತೆರಳಲು ಬಸ್ ಇಲ್ಲದಂತಾಗಿದೆ. ಇತ್ತ ಸ್ವಂತ ವಾಹನ …

Read More »