Breaking News
Home / ಜಿಲ್ಲೆ / ಹಾಸನ (page 8)

ಹಾಸನ

ಮುನ್ನೆಚ್ಚರಿಕಾ ಕ್ರಮವಾಗಿ ಅರಸೀಕೆರೆಯಲ್ಲಿ ಗಾರ್ಮೆಂಟ್ಸ್‌ಗಳಿಗೆ ರಜೆ…..

ಹಾಸನ: ಜಿಲ್ಲೆಯ ಅರಸೀಕೆರೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಕೆಲವೊಂದು ಗಾರ್ಮೆಂಟ್ಸ್‌ನವರು ಇಂದಿನಿಂದ ತಮ್ಮ ನೌಕರರಿಗೆ ಕೆಲವು ದಿನಗಳ ಕಾಲ ರಜೆ ನೀಡಿ ಮನೆಗೆ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೇ ಅರಸೀಕೆರೆ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಲವು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಸೀಕೆರೆ ಡಿಪೋದಿಂದ ಸಂಚರಿಸುತ್ತಿದ್ದ ಬಸ್‍ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಬಗ್ಗೆ ಶುಕ್ರವಾರ ರಾತ್ರಿಯಷ್ಟೇ …

Read More »

ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ರೆ ಹೇಗೆ ಹುಷಾರಾಗ್ತೇವೆ- ಸರ್ಕಾರಕ್ಕೆ ಸೋಂಕಿತರ ಪ್ರಶ್ನೆ

ಹಾಸನ: ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ದರೆ ನಾವು ಹೇಗೆ ಹುಷಾರಾಗುತ್ತೇವೆ. ಬರೀ ಅನ್ನ ಬಿಟ್ರೆ ನಮಗೆ ಬೇರೆ ಆಹಾರ ಕೊಡುತ್ತಿಲ್ಲ ಎಂದು ಹಾಸನದ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ತಮಗೆ ನೀಡುತ್ತಿರುವ ಚಿಕಿತ್ಸಾ ವಿಧಾನದ ಬಗ್ಗೆ ಅಸಮಾಧಾನ ಹೊರಹಾಕಿ ವಿಡಿಯೋ ಮಾಡಿರುವ ಕೊರೊನಾ ಸೋಂಕಿತರು, ನಮಗೆ ಆರಂಭದ ಐದು ದಿನ ಮಾತ್ರ ಮೆಡಿಸಿನ್ ಕೊಟ್ರು. ಈಗ ಮೆಡಿಸಿನ್ ಕೊಡ್ತಿಲ್ಲ. ಬರೀ ಅನ್ನ …

Read More »

ಹಾಸನದಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ- ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಮರಣಮೃದಂಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕೂಡ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಹಾಸನದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಹೊಳೆನರಸೀಪುರ ಮೂಲದ 88 ವರ್ಷದ ವ್ಯಕ್ತಿ ಮತ್ತು ಅರಸೀಕೆರೆ ಮೂಲದ 47 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಹೊಳೆನರಸೀಪುರ ಮೂಲದ 88 ವರ್ಷದ ವ್ಯಕ್ತಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 29ರಂದು ಡಯಾಲಿಸಿಸ್‍ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ ನಾಲ್ಕರಂದು ಐಸಿಯುಗೆ …

Read More »

ಚನ್ನರಾಯನಪಟ್ಟಣ 14 ದಿನ ಲಾಕ್‍ಡೌನ್- 3 ದಿನ ಮಾತ್ರ ಅಗತ್ಯವಸ್ತು ಖರೀದಿಗೆ ಅವಕಾಶ

ಹಾಸನ: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಪಥವನ್ನು ವಿಸ್ತರಿಸಿಕೊಳ್ತಿದೆ. ಇದಕ್ಕೆ ಹಾಸನದ ಜನ ಮದ್ದು ಅರೆದಿದ್ದಾರೆ. ಸರ್ಕಾರದ ಆದೇಶ ಇಲ್ಲದಿದ್ದರೂ ಹಾಸನ ಜಿಲ್ಲೆ ಭಾಗಶಃ ಲಾಕ್‍ಡೌನ್ ಆಗುತ್ತಿದೆ. ಹೌದು. ಜಿಲ್ಲೆಯಲ್ಲಿ ಕೊರೊನಾ ನಾಗಾಲೋಟದಿಂದ ಓಡುತ್ತಿದ್ದು ಕೊರೊನಾ ವಾರಿಯರ್ಸ್ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ 541 ಕೊರೊನಾ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 255 ಜನ ಗುಣಮುಖರಾಗಿದ್ರೆ 278 ಕೇಸ್‍ಗಳು ಆಕ್ಟೀವ್ ಆಗಿದ್ದು 8 ಜನ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲೇ ಅದರಲ್ಲೂ ಚನ್ನರಾಯಪಟ್ಟಣದಲ್ಲಿ …

Read More »

ಹಾಸನದಲ್ಲಿ ಇಂದು 13 ಮಂದಿಗೆ ಕೊರೊನಾ ಸೋಂಕು, ಒಂದು ಸಾವು…….

ಹಾಸನ: ಕೊರೊನಾ ಸೋಂಕು ಹಾಸನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಕೂಡ 13 ಜನರಿಗೆ ಕೋವಿಡ್ ವೈರಸ್ ಹರಡಿದ್ದು, ಓರ್ವ ಸಾವನಪ್ಪಿದ್ದಾರೆ. ಅರಸೀಕೆರೆ ನಿವಾಸಿ 77 ವರ್ಷದ ವೃದ್ಧ ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಸೋಂಕಿತ ನಿಮೋನಿಯಾ, ರಕ್ತದ ಒತ್ತಡ ಸೇರಿದಂತೆ ಇತರೆ ಸಮಸ್ಯೆಯಿಂದ ಬಳಲುತ್ತಿದ್ದು, ಜುಲೈ 3ರಂದು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಟಲು ದ್ರವ ಪರೀಕ್ಷೆ ಮಾಡಿದ್ದು, ಈ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಚಿಕಿತ್ಸೆ ನೀಡಲಾಗುತ್ತಿದ್ದರೂ …

Read More »

ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ: ಕೋಡಿಮಠ ಶ್ರೀ

ಹಾಸನ: ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಪ್ರಸಾರವಾಗಿರುವ ಈ ಮಾರಕ ರೋಗ ಮನುಕುಲಕ್ಕೆ ಕಂಟಕ ಪ್ರಾಯವಾಗಿದೆ. ಇದು ದಿನ ದಿನಕ್ಕೆ ಹೆಚ್ಚುತ್ತಿರುವುದು ಶೋಚನೀಯ ಪ್ರಸಂಗ ಎಂದು ಆತಂಕ ಹೊರಹಾಕಿದರು. ಮನುಷ್ಯ ಸ್ವಾರ್ಥದಿಂದ ತಂದುಕೊಳ್ಳುತ್ತಿರುವ ಈ ರೋಗ ಕೇವಲ ಮನುಕುಲ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳ ಮೇಲೆ …

Read More »

2 ದಿನ ರಜೆ ಹಾಕಿ ಆಸ್ಪತ್ರೆ ಹೋದ ಕಾನ್‍ಸ್ಟೇಬಲ್‍ಗೂ ಕೊರೊನಾ ಸೋಂಕು…………

ಹಾವೇರಿ: ಜಿಲ್ಲೆಗೆ ಮತ್ತೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯ ಇಬ್ಬರಲ್ಲಿ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದೆ. 9 ವರ್ಷದ ಬಾಲಕ ಹಾಗೂ ಪೊಲೀಸ್ ಕಾನ್‍ಸ್ಟೇಬಲ್‍ ನಲ್ಲಿ ಸೋಂಕು ದೃಢಪಟ್ಟಿದೆ. 41 ವರ್ಷದ ಕಾನಸ್ಟೇಬಲ್ ಪಿ-7030ರಲ್ಲಿ ಸೋಂಕು ದೃಢಪಟ್ಟಿದ್ದು, ಹಾವೇರಿ ಜಿಲ್ಲೆ ಬ್ಯಾಡಗಿ ಠಾಣೆಯಲ್ಲಿ ಕಾನ್‍ಸ್ಟೇಬಲ್‍ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲತಃ ಕದರಮಂಡಲಿ ಗ್ರಾಮದ ನಿವಾಸಿಯಾಗಿದ್ದು, ಎರಡು ದಿನ ರಜೆ ಹಾಕಿ ದಾವಣಗೆರೆ ಜಿಲ್ಲೆ ಮಲೇಬೆನ್ನೂರಿಗೆ ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲದೇ …

Read More »

ಪ್ರತಿ ಕ್ವಿಂಟಾಲ್‍ಗೆ 10,300 ರೂ. ನಂತೆ ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ

ಹಾಸನ: ಪ್ರತಿ ಕ್ವಿಂಟಾಲ್‍ಗೆ 10,300 ರೂ. ನಂತೆ ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೂ.11ರ ಸರ್ಕಾರಿ ಆದೇಶದಂತೆ ಕೊಬ್ಬರಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಖರೀದಿ ಕೇಂದ್ರಗಳನ್ನು ತರಬೇಕಿದೆ. ಕೇಂದ್ರ ಸರ್ಕಾರ ಬೆಂಬಲಬೆಲೆಯೊಂದಿಗೆ ಕೊಬ್ಬರಿ ಖರೀದಿಸಲು ನೆಫೆಡ್ ಸಂಸ್ಥೆಯನ್ನು ಗುರುತಿಸಿದ್ದು, ರಾಜ್ಯ ಸರ್ಕಾರ ಸಹಕಾರ ಮಾರಾಟ ಮಂಡಳಿ ಮೂಲಕ ಖರೀದಿಸಲು ಸೂಚನೆ ನೀಡಿದೆ. ಅದರಂತೆ …

Read More »

ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಯ್ತು ಎಣ್ಣೆ ಪಾರ್ಟಿ..!

ಹಾಸನ ; ಮದ್ಯದ ಅಮಲು ಮನುಷ್ಯ ರನ್ನು ಯಾವ ರೀತಿ ದಿಕ್ಕುತಪ್ಪಿಸುತ್ತದೆ ಹಾಗೂ ಜೀವಕ್ಕೆ ಎರವಾಗುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳನ್ನು ನಾವು ಕಂಡಿದ್ದೇವೆ . ಅದೇ ರೀತಿ ಇಂದು ಮದ್ಯದ ಮತ್ತಿನಲ್ಲಿ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆಗೈದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದ ಪ್ರವೀಣ್ ಕೊಲೆಯಾದ ಯುವಕ. ಅದೇ ಗ್ರಾಮದ ಸಂತೋಷ್ ಹತ್ಯೆಗೈದ …

Read More »

ಮುಂಬೈಯಿಂದ ಬಂದವರನ್ನು ಹೆಚ್ಚು ದಿನ ಕ್ವಾರಂಟೈನ್ ಮಾಡಲು ಸಿಎಂ ಗಮನಕ್ಕೆ ತರುತ್ತೇವೆ: ಸಚಿವ ಗೋಪಾಲಯ್ಯ

ಹಾಸನ: ಬಾಂಬೆಯಿಂದ ಬಂದವರನ್ನು ಹೆಚ್ಚು ದಿನ ಕ್ವಾರಂಟೈನ್ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಹೊರರಾಜ್ಯದಿಂದ ಬಂದವರ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಮುಂಬೈಯಿಂದ ಬಂದವರನ್ನು ಕ್ವಾರಂಟೈನ್‍ನಲ್ಲಿ ಇಟ್ಟು ನೆಗೆಟಿವ್ ವರದಿ ಬಂದ ನಂತರವೇ ಮನೆಗೆ ಕಳುಹಿಸಲಾಗುವುದು. ಹೊರರಾಜ್ಯದಿಂದ ಬಂದವರನ್ನು ಈಗ ಏಳು ದಿನ ಕ್ವಾರಂಟೈನ್ ಮಾಡಲಾಗುತ್ತಿದೆ. …

Read More »