Breaking News
Home / ಜಿಲ್ಲೆ / ಹುಕ್ಕೇರಿ ಪಟ್ಟಣದ ಬಾಗವಾನ ಗಲ್ಲಿಯ ಓರ್ವ ವ್ಯಕ್ತಿ ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಖಚಿತ

ಹುಕ್ಕೇರಿ ಪಟ್ಟಣದ ಬಾಗವಾನ ಗಲ್ಲಿಯ ಓರ್ವ ವ್ಯಕ್ತಿ ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಖಚಿತ

Spread the love

ಹುಕ್ಕೇರಿ ; ದೆಹಲಿಯ ನಿಜಾಮುದ್ದೀನ್ ತಬ್ಲೀಘ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡ ಓರ್ವ ಸೇರಿದಂತೆ ಇದೇ ವೇಳೆ ಅಂತಾರಾಜ್ಯಗಳಿಗೆ ಭೇಟಿ ನೀಡಿದ ತಾಲೂಕಿನ ಐವರಿಗೆ ಕಿಲ್ಲರ್ ಕೊರೋನಾ ವೈರಸ್ ಸೋಂಕು ತಗಲಿರುವ ಶಂಕೆಯ ಮೇಲೆ ನಿಗಾ ವಹಿಸಲಾಗಿದೆ.
ಹುಕ್ಕೇರಿ ಪಟ್ಟಣದ ಬಾಗವಾನ ಗಲ್ಲಿಯ ಓರ್ವ ವ್ಯಕ್ತಿ ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಖಚಿತಪಟ್ಟ ಹಿನ್ನೆಲೆಯಲ್ಲಿ ಆತನನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಜತೆಗೆ ಇದೇ ಸಮಯದಲ್ಲಿ ದೆಹಲಿ, ಡೆಹರಾಡೂನ್ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ ಬೋವಿ ಗಲ್ಲಿಯ ಇಬ್ಬರು, ಗಜಬರವಾಡಿಯ ಓರ್ವ ಹಾಗೂ ಬೆಲ್ಲದ ಬಾಗೇವಾಡಿಯ ಒಬ್ಬನನ್ನು ಪತ್ತೆ ಹಚ್ಚಿ ಕೊರೋನಾ ಸೋಂಕಿನ ತಪಾಸಣೆಗೊಳಪಡಿಸಲಾಗಿದೆ.
ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಭಾಗವಹಿಸಿದ್ದು ಆಯಾ ಪ್ರದೇಶಗಳಲ್ಲಿ ಪತ್ತೆ ಹಚ್ಚುವ ಕಾರ್ಯ ತ್ವರಿತವಾಗಿ ನಡೆಯಬೇಕು ಎಂಬ ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಇಲ್ಲಿನ ಪೊಲೀಸರು ತಾಲೂಕಿನ ನಾನಾ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದರು.
ಈ ಐವರ ಪೈಕಿ ಓರ್ವನನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಆಸ್ಪತ್ರೆ, ಹೊಸೂರದ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಸತಿ ನಿಲಯದಲ್ಲಿ ಮೂವರನ್ನು ಹಾಗೂ ಓರ್ವನನ್ನು ಹೋಂ ಕ್ವಾರೈಂಟನ್‌ನಲ್ಲಿ ಇಡಲಾಗಿದೆ.
ದೆಹಲಿ ಮುಸ್ಲಿಂ ಧಾರ್ಮಿಕ ಸಮಾವೇಶ ಹಾಗೂ ಇತರೆ ರಾಜ್ಯಗಳಿಗೆ ಹುಕ್ಕೇರಿಯ ಐವರು ಭೇಟಿ ನೀಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಪಟ್ಟಣದ ಜನತೆ ತೀವ್ರ ಆತಂಕಕ್ಕೆ ಒಳಗಾದರು. ಅಲ್ಲಲ್ಲಿ ಈ ಬಗ್ಗೆ ಚರ್ಚೆಗಳೂ ಕೂಡ ನಡೆದಿವೆ. ಈ ಎಲ್ಲ ಐವರಲ್ಲಿ ಕೊರೋನಾ ವೈರಸ್ ಸೋಂಕು ಹರಡಿರುವ ಬಗ್ಗೆ ವದಂತಿಗಳು ಸಹ ಕೇಳಿ ಬಂದಿವೆ.
ಅಲ್ಲದೇ ಈ ಬಗ್ಗೆ ತುರ್ತಾಗಿ ಚರ್ಚಿಸಲು ತಹಸೀಲದಾರ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯೂ ನಡೆಯಿತು. ಯಾವುದೇ ಕಾರಣಕ್ಕೂ ಈ ಐವರನ್ನು ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಟ್ಟು ಪರೀಕ್ಷಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಹುಕ್ಕೇರಿ ಬೆಲ್ಲದ ಹಾಗೂ ಸಂಕೇಶ್ವರ ನಿವಾಸಿಗಳು ದೆಹಲಿಯ ನಿಜಾಮುದ್ದೀನ್ ತಬ್ಲೀಘ್ ಸಭೆಗೆ ಪಾಲ್ಗೊಂಡಿದ್ದಾರೆ ಎನ್ನಲಾದ ವಿಷಯದ ಅರಿತು ೫ ಜನರನ್ನು ಪೋಲಿಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಮಾರ್ಚ ೧೮ ರಂದು ಆಗಮಿಸಿದ್ದರೂ ಕೂಡ ಹಾಗೂ ವೈಧ್ಯಾಧಿಕಾಗೆ ಹಾಗೂ ತಾಲೂಕಾ ಆಡಳಿತಕ್ಕೆ ತಿಳಸದೇ ಮನೆಯಲ್ಲಿ ಕುಳಿತಿರುವ ಸಂಗತಿ. ತಾಲೂಕಾಡಳಿತ ಇವರನ್ನು ಪತ್ತೆ ಹಚ್ಚಿ ಪರೀಕ್ಷಿಸುವುದರ ಜತೆಗೆ ಗೃಹ ಬಂಧನದಲ್ಲಿರಿಸಿ ನಿಗಾ ವಹಿಸಿದ್ದಾರೆ.
ಪಟ್ಟಣದ ಜನರಲ್ಲಿ ಆತಂಕ ಸೃಷ್ಟಿಸಿದ ಐವರು ದೆಹಲಿಯ ನಿಜಾಮುದ್ದೀನ್ ತಬ್ಲೀಘ್ ಸಭೆಗೆ ತೆರಳಿದ್ದರೆಂಬ ಸಂಗತಿ. ತಾಲೂಕಾಡಳಿತ ಇವರನ್ನು ಪತ್ತೆ ಹಚ್ಚಿ ಪರೀಕ್ಷಿಸುವುದರ ಜತೆಗೆ ಗೃಹ ಬಂಧನದಲ್ಲಿರಿಸಿ ನಿಗಾ ವಹಿಸಿದ್ದಾರೆ.
ಬುಧವಾರ ಬೆಳಿಗ್ಗೆ ಈ ಸುದ್ದಿ ಕೇಳಿ ಬರುತ್ತಿದ್ದಂತೆ ಪಟ್ಟಣವಾಸಿಗಳು ಆತಂಕಗೊಂಡಿದ್ದಾರೆ. ಈಗಾಗಲೇ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ದೆಹಲಿ ಸಭೆಗೆ ತೆರಳಿದವರಲ್ಲಿ ಬಹುಪಾಲು ಜನರಿಗೆ ಮಾರಕ ರೋಗ ಕೊರೊನಾ ಸೋಂಕಿತರಾಗಿದ್ದಾರೆಂಬ ಸುದ್ದಿ ಜನರಲ್ಲಿ ಭಯವನ್ನುಂಟು ಮಾಡಿದೆ. ಅಂತಹದ್ದರಲ್ಲಿ ಹುಕ್ಕೇರಿ ತಾಲೂಕಿನ ಐವರು ಈ ಸಭೆಗೆ ತೆರಳಿರುವ ಸುದ್ದಿ ತೀವೃ ಕಳವಳ ಸೃಷ್ಟಿಸಿದೆ.ಈ ಐವರು ಸಂಕೇಶ್ವರ, ಹುಕ್ಕೇರಿ, ಗಜಬರವಾಡಿ ಮತ್ತು ಪೋಗತ್ಯಾನಟ್ಟಿಯವರು ಎಂಬ ವಿಷಯ ಗೊತ್ತಾಗಿದೆ.

ಸ್ಥಳೀಯ ವೈದ್ಯರ ನಿರ್ಲಕ್ಷಕ್ಕೆ ಕೆರಳಿದ ಮಾಜಿ ಸಂಸದರು

ಈ ಐವರನ್ನು ಪೋಲಿಸ್ ಇಲಾಖೆ ಪತ್ತೆ ಹಚ್ಚಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸರಕಾರಿ ವೈದ್ಯರು ಇವರನ್ನು ಪರೀಕ್ಷಿಸಿ ನಿಮಗೆ ಯಾವ ರೋಗವಿಲ್ಲ ಮನೆಗೆ ಹೋಗಿ ಎಂದು ಹೇಳಿದ್ದಾರೆ. ಈ ವಿಷಯ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡ ಅವರು ಜಿಲ್ಲಾ ವೈದ್ಯಾಧಿಕಾರಿಯನ್ನು ಸಂಪರ್ಕಿಸಿ ಹುಕ್ಕೇರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷದ ವಿಷಯ ತಿಳಿಸಿ ತಕ್ಷಣ ಆ ಐವರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆ ಹಾಗೂ ಚಿಕಿತ್ಸೆಕೈಗೊಳ್ಳುವಂತೆ ಸೂಚಿಸಿದರು.

ಉಪವಿಭಾಗಾಧಿಕಾರಿಗಳಿಂದ ಕೊರೊನಾ ಟಾಸ್ಕ್ ಪೋರ್ಸ ಸಭೆ

ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರು ಈ ಸುದ್ದಿ ಕೇಳುತ್ತಿದ್ದಂತೆ ಹುಕ್ಕೇರಿಗೆ ಆಗಮಿಸಿ ಸಭೆ ನಡೆಸಿದರು.ಸಭೆಯಲ್ಲಿ ತೀವೃ ಚರ್ಚೆ ಜರುಗಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನ ಐವರಲ್ಲಿ ಇಬ್ಬರೂ ತಬ್ಲೀಘ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಇನ್ನುಳಿದ ಮೂವರು ದೆಹಲಿ,ಆಜ್ಮೀರ ಮತ್ತು ಡೆಹರಾಡೂನಗಳಿಗೆ ಪ್ರವಾಸ ಹೋಗಿ ಬರುವಾಗ ತಬ್ಲೀಘ ಸಭೆಯವರ ಜತೆಗೆ ಆಗಮಿಸಿದ್ದಾರೆ. ಅದಕ್ಕಾಗಿ ಈ ಐವರನ್ನು ಗುರುತಿಸಲಾಗಿದ್ದು, ಅವರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದರು. ಪರೀಕ್ಷೆಯ ನಂತರ ಪರಿಣಾಮ ಗೊತ್ತಾಗಲಿದೆ. ಆದಾಗ್ಯೂ ಐವರಿಗೆ ಕ್ವಾರಂಟೈನ್ ಕೈಗೊಳ್ಳಲಾಗಿದೆ ಪರೀಕ್ಷಾ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆಂದರು.

ಟಾಸ್ಕ್ ಪೋರ್ಸ್ ಸದಸ್ಯರಲ್ಲಿ ಆರೋಗ್ಯ ಇಲಾಖೆಯವರು ಸರಿಯಾದ ಸ್ಪಂದನೆಯಿಲ್ಲ:

ಸರಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಚಿಕಿತ್ಸೆ ಮತ್ತು ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಇದರತ್ತ ಗಮನಿಸಬೇಕಾದ ಮುಖ್ಯ ವೈದ್ಯಾಧಿಕಾರಿ ನರಸನ್ನವರ ಅಸಡ್ಡೆಯೇ ಕಾರಣವೆಂಬ ಚರ್ಚೆ ಹೆಚ್ಚಾಗಿದೆ.
ಚಿಕಿತ್ಸೆ ನಡೆಸಲು ಒಪ್ಪಿದ ಖಾಸಗಿ ವೈದ್ಯರು: ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರುಖಾಸಗಿ ವೈದ್ಯರ ಅಸಹಕಾರ ಕೇಳಿ ಅವರ ಸಭೆ ನಡೆಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಉಪವಿಭಾಗಾಧಿಕಾರಿಗಳು ಇಲ್ಲಿಯವರೆಗೆ ತಮ್ಮ ಕ್ಲಿನಿಕ್ ತೆರೆದು ಚಿಕಿತ್ಸೆ ಕೈಗೊಳ್ಳುತ್ತಿದ್ದ ತಾವು ಇದೀಗ ಮಾರಕ ರೋಗ ಕೊರೊನಾ ವೈರಸ್ ತಡೆಗಟ್ಟಲು ಸಹಕರಿಸುತ್ತಿಲ್ಲವೆಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಖಾಸಗಿ ವೈದ್ಯರಾದ ಖಾಜಾ ಮಕಾನದಾರ, ಉದಯ ಕುಲಕರ್ಣಿ ಮತ್ತು ಐ.ಎಂ.ಎ ಅಧ್ಯಕ್ಷ ಬಿ.ಎಸ್.ಪಾಟೀಲ ಅವರು ಮಾತನಾಡಿ ನಮಗೂ ಮಾನವೀಯತೆಯ ಅರಿವಿದೆ. ಆದರೆ ಕ್ಲಿನಿಕ್‌ಗಳು ಚಿಕ್ಕದಾಗಿರುವುದರಿಂದ ರೋಗಿಗಳು ಆಗಮಿಸಿದಾಗ ಸಾಮಾಜಿಕ ಅಂತರ ಪಾಲಿಸಲು ಸಾಧ್ಯವಾಗುವುದಿಲ್ಲ ಮತ್ತು ಆಯುಷ್ ವೈದ್ಯರ ಸಂಘಟನೆಯವರ ನಿರ್ದೇಶನದಂತೆ ಕ್ಲಿನಿಕ್ ಬಂದ್ ಮಾಡಿದ್ದೇವು. ತಾವು ಎಲ್ಲ ಸೌಲಭ್ಯ ನೀಡುವುದರ ಜತೆಗೆ ಸ್ಥಳ ನಿಗದಿ ಮಾಡಿದರೆ ೨೪ ತಾಸು ಸೇವೆ ನೀಡುವುದಾಗಿ ತಿಳಿಸಿದರು.
ತಹಸೀಲ್ದಾರ ಅಶೋಕ ಗುರಾಣಿ, ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ, ತಾ.ಪಂ ಇ.ಒ ಮಹಾದೇವ ಬಿರಾದಾರಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪಿ.ಎಸ್.ಐ ಶಿವಾನಂದ ಗುಡಗನಟ್ಟಿ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಸಿದ್ನಾಳ, ಖಾಸಗಿ ವೈದ್ಯರಾದ ಅಭಿಷೇಕ ವಾಗೋಜಿ, ಶಿವಾಜಿ ಗೋಟೂರೆ, ವೈ.ವಿ.ದೇಸಾಯಿ, ಎಸ್.ಬಿ.ಜಾಧವ, ಮುತ್ತುರಾಜ ಹೂಗಾರ ಮತ್ತಿತರರಿದ್ದರು.


Spread the love

About Laxminews 24x7

Check Also

ಕರಂಜಾಳ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು

Spread the loveಖಾನಾಪುರ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ಮತ್ತು ನದಿ ಮತ್ತಿತರ ಜಲಮೂಲಗಳಲ್ಲಿ ನೀರಿನ ಹರಿವು ಮತ್ತು ಪ್ರಮಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ