Breaking News
Home / ಜಿಲ್ಲೆ / ಬಳ್ಳಾರಿ (page 5)

ಬಳ್ಳಾರಿ

ಸರ್ಕಾರಿ ಶಿಶುಗೃಹದಲ್ಲಿ ಅನಾಥ ಮಗುವಿನ ಹುಟ್ಟುಹಬ್ಬ ಆಚರಣೆ

ಬಳ್ಳಾರಿ: ಸರ್ಕಾರಿ ಶಿಶುಗೃಹದಲ್ಲಿ ಒಂದು ವರ್ಷದ ಹಿಂದೆ ರೈಲ್ವೆ ಬೋಗಿಯಲ್ಲಿ ಸಿಕ್ಕಿದ್ದ ಅನಾಥ ಮಗುವಿನ ಹುಟ್ಟುಹಬ್ಬವನ್ನು ಅಧಿಕಾರಿಗಳು ಆಚರಣೆ ಮಾಡಿದ್ದಾರೆ. ಒಂದು ವರ್ಷದ ಹಿಂದೆ ಬಳ್ಳಾರಿ ರೈಲ್ವೆ ನಿಲ್ದಾಣದ ಬೋಗಿಯಲ್ಲಿ ನವಜಾತ ಶಿಶು ಸಿಕ್ಕಿತ್ತು. ನಂತರ ಮಗುವನ್ನು ರಕ್ಷಿಸಿ ಸರ್ಕಾರಿ ಶಿಶುಗೃಹದಲ್ಲಿ ಸೇರಿಸಲಾಗಿತ್ತು. ಅಲ್ಲದೇ ಮಗುವಿಗೆ ನಿಶ್ವಿತಾ ಎಂದು ನಾಮಕರಣ ಮಾಡಲಾಗಿತ್ತು. ಇಂದು ಆ ಮಗುವಿಗೆ ಒಂದು ವರ್ಷದ ಸಂಭ್ರಮ. ನಿಶ್ವಿತಾಳ ಹುಟ್ಟುಹಬ್ಬವನ್ನು ಸಿಬ್ಬಂದಿ ಸೇರಿಕೊಂಡು ಸಂಭ್ರಮದಿಂದ ಆಚರಿಸಿದರು. ಜಿಲ್ಲಾ …

Read More »

ಸೋಂಕಿತರ ಸಂಖ್ಯೆ ಇಳಿಮುಖ – ಗುಣಮುಖರ ಸಂಖ್ಯೆ ಹೆಚ್ಚಳ

ಬಳ್ಳಾರಿ: ಜಿಲ್ಲೆಯಲ್ಲಿಂದು ಹೊಸದಾಗಿ 268 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 7,530ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ 268 ಮಂದಿಗೆ ಮಹಾಮಾರಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,530ಕ್ಕೇರಿಕೆಯಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ ಎರಡು ದಿನಗಳಿಂದ ಸೋಂಕಿನ ಪ್ರಮಾಣದಲ್ಲಿ ಕಡಿಮೆ ಆಗಿದೆ.ಅಲ್ಲದೇ 4,022 ಮಂದಿ ಈವರೆಗೂ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೂ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ …

Read More »

ಬಳ್ಳಾರಿಯಲ್ಲಿ ಕೊರೋನಾ ಮಹಾಸ್ಪೋಟ : ಇಂದು 579 ಜನರಿಗೆ ಕೊರೋನಾ ದೃಢ, ಮೂವರು ಸಾವು

ಬಳ್ಳಾರಿ : ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟವೇ ಉಂಟಾಗಿದೆ. ಇಂದು 579 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಡುವ ಮೂಲಕ, ಸೋಂಕಿತರ ಸಂಖ್ಯೆ 4,046ಕ್ಕೆ ಏರಿಕೆಯಾಗಿದೆ. ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಂದು 579 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,046ಕ್ಕೆ ಏರಿಕೆಯಾಗಿದೆ. ಇದುವರೆಗೆ ಕೊರೋನಾ ಸೋಂಕಿತರಾದಂತ 1,622 ಜನರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ …

Read More »

ಅರಣ್ಯ ಸಚಿವ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಆನಂದ್ ಸಿಂಗ್‍ಗೆ ಕೊರೊನಾ ಸೋಂಕು ದೃಢವಾಗಿದೆ.

ಬಳ್ಳಾರಿ: ಅರಣ್ಯ ಸಚಿವ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಆನಂದ್ ಸಿಂಗ್‍ಗೆ ಕೊರೊನಾ ಸೋಂಕು ದೃಢವಾಗಿದೆ. ಸಚಿವ ಆನಂದ್ ಸಿಂಗ್ ಶುಕ್ರವಾರ ಸ್ವಯಂ ಪ್ರೇರಿತರಾಗಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಅದರ ವರದಿ ಶನಿವಾರ ರಾತ್ರಿ ಬಂದಿದ್ದು, ವರದಿಯಲ್ಲಿ ಆನಂದ್ ಸಿಂಗ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಯಾವುದೇ ರೋಗ ಲಕ್ಷಣಗಳಿಲ್ಲದೇ ಆನಂದ್ ಸಿಂಗ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಎ ಸಿಂಪ್ಟಮ್ಯಾಟಿಕ್ ಕೇಸ್ ಆಗಿರುವುದರಿಂದ ಆನಂದ್ ಸಿಂಗ್ ಮನೆಯಲ್ಲೇ ಚಿಕಿತ್ಸೆ …

Read More »

ಹೋಂ ಕ್ವಾರಂಟೈನ್ ಆದ ಬಳ್ಳಾರಿ ಜಿಲ್ಲಾಧಿಕಾರಿ……….

ಬಳ್ಳಾರಿ: ತಮ್ಮ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದ್ದರಿಂದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಇದೀಗ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಹೌದು. ಎಸ್.ಎಸ್ ನಕುಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಒಬ್ಬರಲ್ಲಿ ಕರೋನಾ ಸೋಂಕು ಇರುವುದು ದೃಢವಾಗಿದೆ. ಬಳ್ಳಾರಿಯ ಅನಂತಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಜಿಲ್ಲಾಧಿಕಾರಿ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ. ಡಿಸಿಯವರ ನಿವಾಸದ ಎದುರು ಅಧಿಕಾರಿಗಳು ಹೋಂ ಕ್ವಾರಂಟೈನ್ ಬೋರ್ಡ್ ಹಾಕಿದ್ದಾರೆ. ಮಂಗಳವಾರದಿಂದ ಶನಿವಾರದವರೆಗೆ ಹೋಂ ಕ್ವಾರಂಟೈನ್‍ನಲ್ಲಿ ಇರಲಿದ್ದು, ಮನೆಯಿಂದಲೇ …

Read More »

ಇಂದಿನಿಂದ ಬಳ್ಳಾರಿಯಲ್ಲಿ ಸ್ವಯಂ‌ ಪ್ರೇರಿತ ಲಾಕ್ ಡೌನ್; ಮಧ್ಯಾಹ್ನ 3ರ ನಂತರ ಎಲ್ಲಾ ಬಂದ್….?

ಬಳ್ಳಾರಿ, : ಬಳ್ಳಾರಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ‌. ಜಿಲ್ಲಾಧಿಕಾರಿ ನಕುಲ್ ಅವರು ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 1019 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸೋಂಕಿತರ ಸಾವಿನ ಪ್ರಮಾಣ ಎರಡಂಕಿ ದಾಟಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇನ್ನಷ್ಟು ಕಠಿಣ ಸಮಯ ಎದುರಾಗಬಹುದು. ಇದಕ್ಕೆ ಬ್ರೇಕ್ ಹಾಕಲು ಜನರೇ ಮುಂದೆ ಬಂದಿದ್ದು, ಇಂದಿನಿಂದ ಒಂದು ವಾರಗಳ ಕಾಲ ಮಧ್ಯಾಹ್ನ ಮೂರು ಗಂಟೆ ನಂತರ ಸ್ವಯಂ …

Read More »

ಮೃತ ಪಟ್ಟು ಎರಡು ಗಂಟೆಗಳಾದರೂ ಮಳೆಯಲ್ಲೇ ಶವವನ್ನು ನೆನೆಯಲು ಬಿಟ್ಟ ಸಿಬ್ಬಂದಿ

ಬಳ್ಳಾರಿ: ಕೊರೊನಾ ಸೋಂಕಿತ ಮೃತದೇಹವನ್ನು ಮಳೆಯಲ್ಲೇ ನೆನೆಯಲು ಬಿಟ್ಟು ಬಳ್ಳಾರಿ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತೊಮ್ಮೆ ಅಮಾನವೀಯವಾಗಿ ನಡೆದುಕೊಂಡಿದೆ. ಬುಧವಾರ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಆರು ಜನರು ಸಾವನ್ನಪ್ಪಿದ್ದರು. ಇದರಲ್ಲಿ ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲೂ ಓರ್ವ ಸೋಂಕಿತ ಮೃತಪಟ್ಟಿದ್ದರು. ಈ ವೇಳೆ ಆತನ ಶವವನ್ನು ಆಸ್ಪತ್ರೆಯ ಆವರಣದಲ್ಲಿ ನೆನೆಯಲು ಬಿಟ್ಟು ಆಸ್ಪತ್ರೆಯ ವೈದ್ಯರ ಮತ್ತೊಂದು ಎಡವಟ್ಟು , ಈ ಆಸ್ಪತ್ರೆಗೆ ಪ್ರತಿನಿತ್ಯ ಗರ್ಭಿಣಿಯರು ಸೇರಿದಂತೆ ಅನೇಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. …

Read More »

ಕೋವಿಡ್ ಸೋಂಕು ಮತ್ತು ಬಹು ಅಂಗಾಂಗ ವೈಫಲ್ಯದಿಂದ ಆದೋನಿ ಮೂಲದ ವ್ಯಕ್ತಿಯೊಬ್ಬರು ಸೋಮವಾರ ಬೆಳಗಿನ ಜಾವ ಮೃತಪಟ್ಟರು…

ಬಳ್ಳಾರಿ: ಕೋವಿಡ್ ಸೋಂಕು ಮತ್ತು ಬಹು ಅಂಗಾಂಗ ವೈಫಲ್ಯದಿಂದ ಆದೋನಿ ಮೂಲದ ವ್ಯಕ್ತಿಯೊಬ್ಬರು ಸೋಮವಾರ ಬೆಳಗಿನ ಜಾವ ಮೃತಪಟ್ಟರು. ವಿಮ್ಸ್‌ಗೆ ದಾಖಲಾಗಿದ್ದ ಅವರನ್ನು, ಸೋಂಕು ದೃಢಪಟ್ಟ ಬಳಿಕ ಜೂನ್ 17 ರಂದು‌ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅನಿಯಂತ್ರಿತ ಮಧುಮೇಹ, ಸೋಂಕು ತಗುಲಿದೆ ಎಂಬ ಆಘಾತ ಹಾಗೂ ಅಂಗಾಂಗ ವೈಫ್ಯಲ್ಯಕ್ಕೆ‌ ಒಳಗಾಗಿದ್ದ ಅವರಿಗೆ ವೆಂಟಿಲೇಟರ್ ಸೌಕರ್ಯದೊಂದಿಗೆ‌ ಚಿಕಿತ್ಸೆ ಮುಂದುವರಿಸಲಾಗಿತ್ತು‌. ಆದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು …

Read More »

ಕೊರೊನಾ ನಡುವೆಯೂ ಜಿಂದಾಲ್ ಆಡಿದ್ದೇ ಆಟ – ಜಿಲ್ಲಾಡಳಿತದ ಆದೇಶಕ್ಕೆ ಇಲ್ಲ ಕಿಮ್ಮತ್ತು

ಬಳ್ಳಾರಿ: ಜಿಂದಾಲ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಸುತ್ತಲಿನ ಗ್ರಾಮಗಳು ಸಹ ಭೀತಿಯಲ್ಲೇ ದಿನ ಕಳೆಯುತ್ತಿವೆ. ಈ ಮಧ್ಯೆ ಬಳ್ಳಾರಿ ಜಿಲ್ಲಾಡಳಿತ ಇಂದಿನಿಂದ 12 ದಿನಗಳ ಕಾಲ ಗ್ರಾಮ ಸಂಪರ್ಕ ನಿರ್ಬಂಧಿಸಿತ್ತು. ಆದರೆ ಜಿಂದಾಲ್ ಮಾತ್ರ ನೆಪ ಮಾತ್ರಕ್ಕೆ ಗೇಟ್ ಕ್ಲೋಸ್ ಮಾಡಿದ್ದು ಹೊರಗಿನ ಕಾರ್ಮಿಕರು ಬಿಂದಾಸ್ ಆಗಿಯೇ ಎಂಟ್ರಿ ಕೊಡುತ್ತಿದ್ದಾರೆ. ಹೌದು. ಬಳ್ಳಾರಿಯ ಜಿಂದಾಲ್ ಕಾರ್ಖಾನೆ ಕೊರೊನಾ ಕಾರ್ಖಾನೆಯಾಗಿದೆ. ಸೋಂಕಿತರ ಪ್ರಮಾಣ ಭಾರೀ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, …

Read More »

ಜಿಂದಾಲ್‍ನಲ್ಲಿ ಕೊರೊನಾ ರಣಕೇಕೆ- 86 ಮಂದಿ ನೌಕರರಿಗೆ ಸೋಂಕು………..

ಬಳ್ಳಾರಿ: ಮಹಾಮಾರಿ ಕೊರೊನಾ ರಣಕೇಕೆ ಬಳ್ಳಾರಿ ಜಿಲ್ಲೆಯಲ್ಲಿ ಮುಂದುವರೆದಿದ್ದು ಜಿಲ್ಲೆಗೆ ಜಿಂದಾಲ್ ಉಕ್ಕು ಕಂಪನಿ ಕಂಟಕವಾಗಿ ಪರಿಣಮಿಸಿದೆ. ಇಂದು ಒಂದೇ ದಿನ ಜಿಂದಾಲ್ ನಲ್ಲಿ 46 ಪ್ರಕರಣಗಳು ದಾಖಲಾಗುವ ಮೂಲಕ ಜಿಂದಾಲ್ ನೌಕರರಲ್ಲಿ ಈವರೆಗೂ ಕಾಣಿಸಿಕೊಂಡ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆ ಆಗಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ಇರುವ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ 33 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಆರಂಭ ಆಗಿನಿಂದಲೂ ಜಿಂದಾಲ್ …

Read More »