Breaking News
Home / ಹುಬ್ಬಳ್ಳಿ (page 8)

ಹುಬ್ಬಳ್ಳಿ

ಕೆರೆ ಖಾಲಿ ಖಾಲಿ; ಬರದ ಮಧ್ಯೆ ಕುಡಿಯುವ ‌ನೀರಿಗಾಗಿ ಪರಿತಪಿಸುತ್ತಿರುವ ಉಮಚಗಿ ಗ್ರಾಮಸ್ಥರು

ಹುಬ್ಬಳ್ಳಿ : ಅದೊಂದು ಪುಟ್ಟ ಗ್ರಾಮ, ಇಲ್ಲಿ ಈ ಹಿಂದೆ ಯಾವತ್ತೂ ಕುಡಿಯುವ ನೀರಿಗೆ ಬರ ಬಂದಿರಲಿಲ್ಲ. ಆದರೆ ಗ್ರಾಮದಲ್ಲಿ ನಡೆದ ಒಂದು ಘಟನೆ ಮತ್ತು ಅದರ ನಂತರ ಗ್ರಾಮಸ್ಥರು ತೆಗೆದುಕೊಂಡ ನಿರ್ಧಾರದಿಂದ ಇಂದು ಇಡೀ ಊರಿನ ಜನರು ನೀರಿಗಾಗಿ ಪರದಾಡುವಂತಾಗಿದೆ. ಹೌದು, ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಸ್ಥರ ಒಂದು ತಪ್ಪು ನಿರ್ಧಾರ ಈಗ ವರ್ಷಪೂರ್ತಿ ಕೊರಗುವಂತೆ ಮಾಡಿದೆ. ಎರಡು ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಕೆರೆ ಖಾಲಿ ಮಾಡಿಸಿದ್ದ …

Read More »

ಸಂವಹನ ಕೊರತೆಯಿಂದ ಸದನದಲ್ಲಿ ಗೊಂದಲ ಉಂಟಾಗಿತ್ತು, ಇದನ್ನು ಬಗೆಹರಿಸುತ್ತೇವೆ: ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ: “ಮೊನ್ನೆ ಸದನದಲ್ಲಿ ಸಂವಹನ ಕೊರತೆಯಿಂದ ಧರಣಿ ಮಾಡಬೇಕೋ ಅಥವಾ ಸಭಾತ್ಯಾಗ ಮಾಡಬೇಕೋ ಎಂಬ ಬಗ್ಗೆ ಗೊಂದಲ ಉಂಟಾಗಿತ್ತು. ಈ ಬಗ್ಗೆ ವಿಪಕ್ಷ ನಾಯಕ ಆರ್​ ಅಶೋಕ್​ ಸ್ಪಷ್ಟನೆ ನೀಡಿದ್ದಾರೆ” ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಧರಣಿ, ಸಭಾತ್ಯಾಗ ವಿಚಾರದಲ್ಲಿ ಬಿಜೆಪಿ ನಾಯಕರ ಅಸಮಾಧಾನದ ವಿಚಾರವಾಗಿ ಪ್ರತಿಕ್ರಿಯಿಸಿ, “ನಾವು ಈ ಕುರಿತು ಸಭೆ ಕರೆದು ಯಾರಿಗಾದರೂ ಗೊಂದಲ ಇದ್ದರೆ ಅದನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ” ಎಂದರು. …

Read More »

ನಾನು ಸಿಎಂ ಸಿದ್ದರಾಮಯ್ಯ ವಕ್ತಾರನಲ್ಲ’: ಬಿ.ಕೆ. ಹರಿಪ್ರಸಾದ್​

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರ ‘ಮುಸ್ಲಿಂ ಸಮುದಾಯಕ್ಕೆ ಅನುದಾನ ನೀಡುವ ವಿಚಾರ’ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್​ ನಾಯಕ ಬಿ ಕೆ ಹರಿಪ್ರಸಾದ್​ ನಿರಾಕರಿಸಿದ್ದಾರೆ. ಸಿದ್ದರಾಮಯ್ಯ ಅವರು ಅನುಭವಿಗಳು, ಈ ಬಗ್ಗೆ ಅವರನ್ನೇ ಕೇಳಿ. ನಾನು ಅವರ ವಕ್ತಾರ ಅಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಸಿಎಂ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಚಿವ ದಿನೇಶ್​ ಗುಂಡೂರಾವ್​ ಮರು ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮುಸ್ಲಿಮರಿಗೆ ಅನುದಾನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ …

Read More »

ಹುಬ್ಬಳ್ಳಿಯ ಹಜರತ್ ಬಾದಶಾ ಪೀರ್ ದರ್ಗಾ ಅಭಿವೃದ್ಧಿಗೆ ಅನುದಾನ ಬಿಡುಗಡೆ:ಸಿದ್ದರಾಮಯ್ಯ

ಹುಬ್ಬಳ್ಳಿಯ ಹಜರತ್ ಬಾದಶಾ ಪೀರ್ ದರ್ಗಾ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಭರವಸೆ ನೀಡಿದರು. ಹುಬ್ಬಳ್ಳಿ: ಹುಬ್ಬಳ್ಳಿಯ ಹಜರತ್ ಬಾದಶಾ ಪೀರ್ ದರ್ಗಾ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಭರವಸೆ ನೀಡಿದರು. ಹುಬ್ಬಳ್ಳಿಯ ಹಜರತ್ ಬಾದ್ ಶಾ ಪೀರಾನ್ ದರ್ಗಾದ ಆವರಣದಲ್ಲಿ ನಡೆದ ಬೃಹತ್ ಔಲಾದೇ ಗೌಸೆ ಅಜಮ್ (ಮೆಹಬೂಬೇ ಸುಭಾನೇ ಮಕ್ಕಳ ಸಮಾವೇಷ) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ …

Read More »

ಕರೆ ಬಂದ್ರೆ ಏನಾಯ್ತು, ಬಾಂಬ್‌ ಸ್ಫೋಟ ಆಗಿದೆಯಾ? – ಸತೀಶ್‌ ಜಾರಕಿಹೊಳಿ

ಹುಬ್ಬಳ್ಳಿ : ಬಾಂಬ್ ಎಲ್ಲಿ ಸ್ಫೋಟ ಆಗಿದೆಯಾ? ಕರೆ ಬಂದ್ರೆ ಏನಾಯ್ತು, ಅಂತಹ ಕರೆಗಳು ಸಾಕಷ್ಟು ಬರುತ್ತವೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಏನು ಆಗಿಲ್ಲ ಅಂತಾ ನಿನ್ನೆ ಸ್ಪಷ್ಟೀಕರಣ ಕೊಟ್ಟಾಗಿದೆ. ಅದ್ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲಾ ಸಮಯ ವ್ಯರ್ಥ ಮಾಡಿದರೆ ಹೇಗೆ ಎಂದರು.   ಅದಕ್ಕೆ ಸರ್ಕಾರ ಪೊಲೀಸ್ ಇಲಾಖೆ ಇದೆ. ಅದನ್ನ ಮಾಡೇ ಮಾಡ್ತಾರೆ. ಬೇರೆ ಸಮಸ್ಯೆಗಳು ಸಾಕಷ್ಟಿದೆ. ಅದರ ಕುರಿತು ನಮಗೂ ಹೇಳೋಕೆ …

Read More »

ಧಾರವಾಡ ಜಿಲ್ಲಾಸ್ಪತ್ರೆಗೆ ದಿಢೀರ್​ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಲೋಕಾಯುಕ್ತ ನ್ಯಾಯಮೂರ್ತಿ

ಧಾರವಾಡ : ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸದಲ್ಲಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್​ ಅವರು ಇಂದು (ಗುರುವಾರ) ಧಾರವಾಡ ಜಿಲ್ಲಾಸ್ಪತ್ರೆಗೆ ದಿಢೀರ್​ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಜಿಲ್ಲಾಸ್ಪತ್ರೆಯ ಔಷಧ ವಿತರಣಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿಗಳು ಔಷಧ ವಿತರಣಾ ವಿಭಾಗದಲ್ಲಿನ ದಾಖಲೆಗಳನ್ನು ಕೇಳಿದರು. ಯಾರಿಗೆ ಎಷ್ಟು ಔಷಧ, ಮಾತ್ರ ಕೊಟ್ಟಿದ್ದೀರಿ ಎಂಬ ಮಾಹಿತಿ ಇದೆಯಾ ಎಂದು ಲೋಕಾಯುಕ್ತರು ಕೇಳಿದಾಗ ಮ್ಯಾನುವಲ್​ನಲ್ಲಿ ಮಾತ್ರ ದಾಖಲಿಸಿದ …

Read More »

ತಪ್ಪಿಸಿಕೊಳ್ಳಲು ಪ್ರಯತ್ನ ನಟೋರಿಯಸ್ ರೌಡಿಶೀಟರ್​ಗೆ ಗುಂಡೇಟು

ಹುಬ್ಬಳ್ಳಿ: ಸ್ಥಳ ಮಹಜರು ಮಾಡಲು ಕರೆತಂದ ವೇಳೆ ಪಿಎಸ್​ಐ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ನಟೋರಿಯಸ್ ರೌಡಿಶೀಟರ್ ಸತೀಶ್​ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪಿಎಸ್​ಐ ಮತ್ತು ಗುಂಡೇಟು ತಿಂದ ರೌಡಿಶೀಟರ್​ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಹು-ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ, ನಟೋರಿಯಸ್ ರೌಡಿಶೀಟರ್ ಸತೀಶನನ್ನು ಕರೆದುಕೊಂಡು ಸ್ಥಳ ಮಹಜರಿಗೆ ಹೋದಾಗ, ಆತ ಪಿಎಸ್‌ಐ …

Read More »

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ರೈತರಿಂದ ಮನವಿ: ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ಮಾಡಿ

ಹುಬ್ಬಳ್ಳಿ: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯ ಕಾಮಗಾರಿಯನ್ನು ಕೂಡಲೇ ಪ್ರಾರಂಭ ಮಾಡಬೇಕು. ಅಲ್ಲದೇ ರೈತರ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂದಿಸುವಂತೆ ಆಗ್ರಹಿಸಿ ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟಗಾರರು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರಿಗೆ ಮನವಿ ಸಲ್ಲಿಸಿದರು. ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮಾತನಾಡಿ, “ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಭೂಪೇಂದ್ರ ಯಾದವ ಅವರ ಜೊತೆ ಮಾತನಾಡಿದ್ದೇನೆ. ಅರಣ್ಯ ಇಲಾಖೆ ಕ್ಲಿಯರನ್ಸ್ ಸೇರಿದಂತೆ ಮೂರು ವಿಷಯ ಇರುವುದರಿಂದ ಕೂಲಂಕಷವಾಗಿ …

Read More »

ರಾಹುಲ್ ಗಾಂಧಿ  ಅಪ್ರಬುದ್ಧ ರಾಜಕಾರಣಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ,  : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಟೀಕಿಸಿದ ರಾಹುಲ್ ಗಾಂಧಿ  ಅಪ್ರಬುದ್ಧ ರಾಜಕಾರಣಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ರಾಹುಲ್ ಗಾಂಧಿಯ ಇಂತಹ ಹೇಳಿಕೆಗಳ ಕಾರಣದಿಂದಲೇ ಕಾಂಗ್ರೆಸ್ ಪಕ್ಷವು ಕಳೆದ ಎರಡೂ ಲೋಕಸಭಾ ಚುನಾವಣೆಗಳಲ್ಲೂ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯನ್ನೂ ಪಡೆಯಲಾಗದಷ್ಟು ಹೀನಾಯವಾಗಿ ಸೋತಿದೆ ಎಂದರು. ನರೇಂದ್ರ ಮೋದಿಯವರನ್ನು ಭಾರತ ದೇಶವಷ್ಟೇ ಅಲ್ಲ, …

Read More »

ಕರೆದಿದ್ದು ಬರಗಾಲದ ಸಭೆ. ಆದರೆ, ಇಲ್ಲಿ ನಡೆದಿದ್ದೆ ಬೇರೆ

ಧಾರವಾಡ: ಕರೆದಿದ್ದು ಬರಗಾಲದ ಸಭೆ. ಆದರೆ, ಇಲ್ಲಿ ನಡೆದಿದ್ದೆ ಬೇರೆ? ಎಂಬ ಗ್ರಾಪಂ ಅಧ್ಯಕ್ಷನ ಮಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಗರಂ ಆಗಬೇಕಾಯಿತು. ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಜಿಲ್ಲೆಯ ಬರ ಸಮರ್ಪಕ ನಿರ್ವಹಣೆ ಬಗ್ಗೆ ಸಭೆ ಕರೆದಿದ್ದರು. ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ವೇಳೆ ಗ್ರಾಪಂವಾರು ಸಚಿವ ಲಾಡ್ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ …

Read More »