Breaking News
Home / ಹುಬ್ಬಳ್ಳಿ (page 10)

ಹುಬ್ಬಳ್ಳಿ

ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಇಂದಿನಿಂದ: ಸಚಿವ ಕೆ.ಎಚ್.ಮುನಿಯಪ್ಪ

ಹುಬ್ಬಳ್ಳಿ: ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಇಂದಿನಿಂದಲೇ ಆರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್​ಗೆ ಈವರೆಗೆ 2 ಲಕ್ಷ 90 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಅರ್ಜಿ ಪರಿಷ್ಕರಣೆ ಮಾಡಿ ಅರ್ಹರಿಗೆ ಕಾರ್ಡ್ ವಿತರಣೆ ಮಾಡಲಾಗುವುದು. ಈಗಾಗಲೇ ಅರ್ಜಿ ಹಾಕಿಕೊಂಡು ಕಾಯುತ್ತಿರುವ ಜನರಿಗೆ …

Read More »

ಧಾರವಾಡ ಕರ್ನಾಟಕ ವಿವಿ ಘಟಿಕೋತ್ಸವ: ಡಿ.ಕೆ.ಶಿವಕುಮಾರ್ ಹೆಸರಲ್ಲಿ ಚಿನ್ನದ ಪದಕ ಪ್ರದಾನ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವ ಸೋಮವಾರ ಇಲ್ಲಿನ ಗಾಂಧಿ ಭವನದಲ್ಲಿ ನಡೆಯಿತು. ಘಟಿಕೋತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೆಸರಿನಲ್ಲಿ ಒಂದು ಚಿನ್ನದ ಪದಕ ಪ್ರದಾನ ಮಾಡಲಾಯಿತು. ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಈ ವರ್ಷದಿಂದ ಚಿನ್ನದ ಪದಕ ದತ್ತಿ ಇಡಲಾಗಿದೆ. ಕವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ದಾದಾಗೌಡ ಪಾಟೀಲ್​ ಅವರಿಗೆ ಈ ಪದಕ ಲಭಿಸಿತು. ದಾದಾಗೌಡ ಪಾಟೀಲ್​ 9 ಪದಕ ಪಡೆದರು. ವಿವಿ ಕನ್ನಡ ವಿಭಾಗದ …

Read More »

ಕಾಂಗ್ರೆಸ್​ನಲ್ಲಿ ಅಧಿಕಾರಕ್ಕಾಗಿ ಒಳಜಗಳ ಶುರುವಾಗಿದ್ದು, ಡೈವರ್ಟ್ ಮಾಡಲು ಹುಲಿ ಉಗುರು ಪೆಂಡೆಂಟ್ ವಿಚಾರ ತಂದಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಗೊಂದಲದಿಂದ ರಾಜ್ಯದ ಜನ ಅಂತಂತ್ರವಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿಸಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ಆರೋಪಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಬಿಟ್ಟು ಸಭೆ ಮಾಡುವ ಸ್ಥಿತಿಗೆ ಸಿದ್ದರಾಮಯ್ಯ ತಲುಪಿದ್ದಾರೆ. ಇದು ರಾಜಕೀಯ ಹೈಡ್ರಾಮ, ಕಾಂಗ್ರೆಸಿನಲ್ಲಿ ನಿತ್ಯ ಭಿನ್ನಮತ ಹೆಚ್ಚಾಗುತ್ತಿದೆ. ಅಧಿಕಾರಕ್ಕಾಗಿ ಒಳಜಗಳ ನಡೆಯುತ್ತಿದೆ. ಡೈವರ್ಟ್ ಮಾಡಲು ಹುಲಿ …

Read More »

ಸತೀಶ್ ಜಾರಕಿಹೊಳಿ ಕೆಲ ಶಾಸಕರ ಜೊತೆ ದುಬೈಗೆ ಹೊರಟಿರೋ ವಿಚಾರ ನನಗೆ ಗೊತ್ತಿಲ್ಲ

ಧಾರವಾಡ: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಪಕ್ಷ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಿದೆ ಎಂಬ ವಿಚಾರಕ್ಕೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್​ ಕುಲಕರ್ಣಿ ಪ್ರತಿಕ್ರಿಯೆಸಿ, ನಾನು ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳಿಲ್ಲ. ಕೊಟ್ಟರೆ ನೋಡೋಣ ಏನಾಗುತ್ತದೆ ಎಂದು ಹೇಳಿದರು. ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ಕೆಲ ಶಾಸಕರ ಜೊತೆ ದುಬೈಗೆ ಹೊರಟಿರುವ ವಿಚಾರ ನನಗೆ ಗೊತ್ತಿಲ್ಲ, ನನಗಂತೂ ದೇಶ …

Read More »

ಪಠ್ಯ ಪುಸ್ತಕದಲ್ಲಿ ಭಾರತ ಎಂದು ನಮೂದಿಸಿದರೆ ತಪ್ಪೇನಿಲ್ಲ- ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಬದಲಾಗಿ ಭಾರತ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಏನು ‌ನಿರ್ದೇಶನ ಕೊಡುತ್ತೋ ಅದನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಇಂಡಿಯಾ ಅಂದರೆ ಹಿಂದೆ ಬ್ರಿಟಿಷರಿಟ್ಟ ಹೆಸರು. ಈಗ ಭಾರತ ಅಂದರೆ ತಪ್ಪೇನಿಲ್ಲ. ಇಂಡಿಯಾ ಅನ್ನುವರು ಭಾರತ ಅಂತಾರೆ. ಭಾರತಕ್ಕೆ ಹೊರದೇಶದಲ್ಲಿ ಇಂಡಿಯಾ ಅಂತಾರೆ. ಪಠ್ಯ ಪುಸ್ತಕಗಳಲ್ಲಿ ಭಾರತ ಎಂದು …

Read More »

ಹುಬ್ಬಳ್ಳಿ ಯುವಕನ ಕೊಲೆ ಪ್ರಕರಣ: ಕುಡಿದ ಮತ್ತಿನಲ್ಲಿ ಸ್ನೇಹಿತರಿಂದಲೇ ಹತ್ಯೆ: ಇಬ್ಬರ ಬಂಧನ

ಹುಬ್ಬಳ್ಳಿ: ನಗರದ ಶಿವಳ್ಳಿ ರಸ್ತೆಯ ರೈಲ್ವೆ ಹಳಿ ಪಕ್ಕದ ಜಮೀನಿನಲ್ಲಿ ಯುವಕನೊಬ್ಬ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸಪ್ತಗಿರಿ ಪಾರ್ಕ್‌ನ ಆಟೋ ರಿಕ್ಷಾ ಚಾಲಕ ಮಂಜುನಾಥ ಕಟ್ಟಿಮನಿ ಹಾಗೂ ಬಿಡ್ತಾಳ ಮಾರುತಿ ನಗರದ ಟೇಲರ್ ಕಿರಣ ಶಿರಸಂಗಿ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಂದ ಎರಡು ಬೈಕ್, ಎರಡು ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಅರುಣ ವನಹಳ್ಳಿ ಬೆಂಡೆ …

Read More »

ಹೆಚ್​ ಡಿ ಕುಮಾರಸ್ವಾಮಿ ಏನೇ ಟೀಕೆ ಮಾಡಿದರೂ ಕೇವಲ ಹಿಟ್ ಅಂಡ್ ರನ್ ಕೇಸ್​: ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಏನೇ ಟೀಕೆ ಮಾಡಿದರೂ ಅದಕ್ಕೆ ಬೇಸ್ ಇರಬೇಕು. ಆದರೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ವಿಧಾನ ಪರಿಷತ್​ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು. ಬಿಜೆಪಿಯೊಂದಿಗೆ ಕೈ ಜೋಡಿಸಿದ ಮೇಲೆ ಹೆಚ್ ​ಡಿ ಕುಮಾರಸ್ವಾಮಿ ಕಾಂಗ್ರೆಸ್​ ವಿರುದ್ಧ ಟೀಕೆ ಮಾಡುತ್ತಿದ್ದು, ಸಚಿವ ಜಾರ್ಜ್ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಏನು ಮಾಡುತ್ತಿದ್ದರು? ಎಂದೆಲ್ಲ ಪ್ರಶ್ನೆ ಕೇಳುತ್ತಿರುವ ಬಗ್ಗೆ ಜಗದೀಶ್​ ಶೆಟ್ಟರ್​ ಪ್ರತಿಕ್ರಿಯಿಸಿ, ಕೆಲ ತಿಂಗಳ …

Read More »

ಟೊಮೆಟೊ ಲಾಭ ಗಳಿಕೆ ಕಂಡು ಹೊಟ್ಟೆಕಿಚ್ಚು.. ಹತ್ತಿಗೆ ಕಳೆನಾಶಕ‌ ಸಿಂಪಡನೆ ಮಾಡಿದ ಕಿಡಿಗೇಡಿಗಳು: ರೈತನ ಆರೋಪ

ಧಾರವಾಡ: ಮುಂಗಾರು ಮಳೆ ಕೈಕೊಟ್ಟರೂ ಟೊಮೆಟೊ ಬೆಳೆಯಲ್ಲಿ ಭರ್ಜರಿ ಲಾಭ ಗಳಿಸಿದ್ದನ್ನು ಕಂಡು ಸಹಿಸಲಾಗದೇ ಕಿಡಿಗೇಡಿಗಳು ರಾತ್ರೋರಾತ್ರಿ ತಮ್ಮ ಒಂದೂವರೆ ಎಕರೆ ಹತ್ತಿ ಬೆಳೆಗೆ ಕಳೆನಾಶಕ ಹೊಡೆದು ಹಾಳು ಮಾಡಿದ್ದಾರೆ ಎಂದು ರೈತ ಧಾರವಾಡ ತಾಲೂಕಿನ ಗರಗ ಗ್ರಾಮದ ಗಂಗಪ್ಪ ಬಾರ್ಕಿ ಎಂಬ ರೈತ ಆರೋಪಿಸಿದ್ದಾರೆ. ಗಂಗಪ್ಪ ಬಾರ್ಕಿ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆದಿದ್ದರು. ಬರಗಾಲ ಇದ್ದರೂ, ಈ ರೈತ ನೀರು ಹಾಯಿಸಿ ಹತ್ತಿ ಬೆಳೆದಿದ್ದರು. …

Read More »

ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ಬಾಲಕ: ಸಮಯ ಪ್ರಜ್ಞೆ ಮೆರೆದ ರೈಲ್ವೆ ಸಿಬ್ಬಂದಿ!

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಾಲಕ ಕೆಳಗೆ ಬಿದ್ದಿದ್ದು, ಈ ವೇಳೆ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿಯ ರಕ್ಷಣೆ ಮಾಡಿ ಸಮಯಪ್ರಜ್ಞೆ ಮೆರೆದ ಘಟನೆ ಮಂಗಳವಾರ ನಡೆದಿದೆ. ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಾಲಕ ಕೆಳಗೆ ಬಿದ್ದಿದ್ದು, ಈ ವೇಳೆ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿಯ ರಕ್ಷಣೆ ಮಾಡಿ ಸಮಯಪ್ರಜ್ಞೆ ಮೆರೆದ ಘಟನೆ ಮಂಗಳವಾರ …

Read More »

ವಿಜಯ ದಶಮಿ ಹಬ್ಬದಂದೇ ಯುವಕನನ್ನು ಕೊಚ್ಚಿ‌ ಕೊಲೆ

ಹುಬ್ಬಳ್ಳಿ: ವಿಜಯ ದಶಮಿ ಹಬ್ಬದಂದೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೆತ್ತರು ಹರಿದಿದೆ. ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ‌ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಹೊರವಲಯದ ಶಿವಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ.‌ ಸುಮಾರು 30 ವರ್ಷದ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಕುತ್ತಿಗೆ, ಮುಖ ಹಾಗೂ ದೇಹದ ಹಲವೆಡೆ ಗಾಯಗಳಿವೆ. ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »