Breaking News
Home / ಹುಬ್ಬಳ್ಳಿ (page 62)

ಹುಬ್ಬಳ್ಳಿ

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ: ಮದುವೆಯಾಗಿ ಎರಡು ಮಕ್ಕಳಿದ್ದರೂ ಪತ್ನಿ ತನ್ನ ಜೊತೆಗೆ ಇಲ್ಲದೇ ಬೇರೆಯವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ. ನಗರದ ಅಂಚಟಗೇರಿಯ ನಿವಾಸಿ ಬೂದಪ್ಪ ಕೋರಿಗೆ 23 ವರ್ಷಗಳ ಹಿಂದೆಯೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೆ ತನ್ನ ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮನನೊಂದು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಮೃತ ಬೂದಪ್ಪ …

Read More »

ಹುಬ್ಬಳ್ಳಿ: ನಗರದ ವಿದ್ಯಾನಗರ ಸನ್ಮಾಶನದಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಚಿತಾಗಾರದ ಭೂಮಿ ಪೂಜೆ

ಹುಬ್ಬಳ್ಳಿ: ನಗರದ ವಿದ್ಯಾನಗರ ಸನ್ಮಾಶನದಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಚಿತಾಗಾರದ ಭೂಮಿ ಪೂಜೆಯನ್ನು ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ನೆರವೇರಿಸಿದರು. ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಕೆನರಾ ಬ್ಯಾಂಕ್‍ನ ಸಾಮಾಜಿಕ ಹೊಣೆಗಾರಿಕಾ ನಿಧಿಯಡಿ ವಿದ್ಯಾನಗರ ಸ್ಮಶಾನದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿ, 11 ಲಕ್ಷ …

Read More »

ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ 10 ಆಕ್ಸಿಜನ್ ಕಾನ್ಸನ್ ಟ್ರೇಟರ್ ವಿತರಣೆ

ಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ 10 ಆಕ್ಸಿಜನ್ ಕಾನ್ಸನ್ ಟ್ರೇಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ನೀಡಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್, ಕಿಮ್ಸ್ ವೈದ್ಶಕೀಯ ಅಧೀಕ್ಷಕರಾದ ಡಾ. ಅರುಣ್ ಕುಮಾರ್, ಜಿಲ್ಲಾ ಜನಜಾಗ್ರತಿ ವೇದಿಕೆ ಅಧ್ಯಕ್ಷರು ರಾಜಣ್ಣ ಕೊರವಿ, ಕಾರ್ಪೋರೇಟರ್ ತಿಪ್ಪಣ್ಣ ಮಜ್ಜಗಿ, ವಿಶ್ವಮಾನ್ಶಪ್ರಶಸ್ತಿ …

Read More »

ಆಕ್ಸಿಜನ್ ಲೆವೆಲ್ ಕಡಿಮೆ ಇದೆ ಅಡ್ಮಿಟ್ ಆಗು ಅಂದ್ರೂ ಕ್ಯಾರೇ ಎನ್ನದ ಸೋಂಕಿತ..!

ಹುಬ್ಬಳ್ಳಿ: ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಬೆಡ್ ಸಿಗ್ತಿಲ್ಲ. ಬೆಡ್ ಸಿಕ್ಕರೂ ಸಾವನ್ನಪ್ಪುವವರ ಸಂಖ್ಯೆ ಹೆಚ್ಚು. ಆದರೆ ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆ ಇದೆ, ಆಸ್ಪತ್ರೆಗೆ ದಾಖಲಾಗಿ ಅಂದರೂ ಸೊಂಕಿತನೊಬ್ಬ ವೈದ್ಯರ ಸಲಹೆಯನ್ನೇ ಧಿಕ್ಕರಿಸಿ ಮನೆಗೆ ತೆರಳಿದ ವಿಚಿತ್ರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ನಿವಾಸಿಯೊಬ್ಬರಿಗೆ ಕೊರೊನಾ ದೃಢಪಟ್ಟ ಪರಿಣಾಮ ಸೊಂಕಿತ ಶುಕ್ರವಾರ ಮತ್ತೊಮ್ಮೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚೆಕ್ ಮಾಡಿಸಿಕೊಳ್ಳಲು ಆಗಮಿಸಿದ್ದ. ಆಗ ವೈದ್ಯರು ದೇಹದಲ್ಲಿ ಆಕ್ಸಿಜನ್ ಲೆವೆಲ್ …

Read More »

ಕಿಮ್ಸ್ ನ ಕೊರೊನಾ ಐಸಿಯು ವಾರ್ಡ್ ನಲ್ಲಿ ಅಟೆಂಡರ್ ಗಳು ಸಹ ವಾಸ

ಹುಬ್ಬಳ್ಳಿ: ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿರುವ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಅವ್ಯವಸ್ಥೆಗೆ ಹೆಸರಾಗಿದೆ. ಕೊರೊನಾ ಐಸಿಯು ವಾರ್ಡ್ ನಲ್ಲಿ ಯಾರೂ ಹೋಗಬಾರದು ಅನ್ನೋ ನಿಯಮವಿದೆ. ವೈದ್ಯರು, ನರ್ಸ್ ಗಳು ಭಯದಿಂದ ಪಿಪಿಇ ಕಿಟ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಆದರೆ ಕಿಮ್ಸ್ ನ ಕೊರೊನಾ ಐಸಿಯು ವಾರ್ಡ್ ನಲ್ಲಿ ಅಟೆಂಡರ್ ಗಳು ಸಹ ವಾಸವಾಗಿರುವುದು ಕಿಮ್ಸ್ ಆಸ್ಪತ್ರೆಯ ಭದ್ರತಾ ವೈಫಲ್ಯ ಎತ್ತಿ ತೋರಿಸುವಂತಾಗಿದೆ. ಕೊರೊನಾ ಐಸಿಯು ವಾರ್ಡ್ ನಲ್ಲಿ …

Read More »

ಕಿಮ್ಸ್‌ನಲ್ಲಿ 96 ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯಲ್ಲಿ 96 ಜನ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಮಾಹಿತಿ ನೀಡಿರುವ ಅವರು, ಮೇ 24ರ ವರೆಗೆ ನಮ್ಮ ಆಸ್ಪತ್ರೆಯಲ್ಲಿ ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ 109 ಜನ ಬ್ಲ್ಯಾಕ್ ಫಂಗಸ್ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಕೆಲವು ಸೋಂಕಿತರು ತಮ್ಮ ಜಿಲ್ಲೆಯ ಆಸ್ಪತ್ರೆಗಳಿಗೆ ಹೋಗಿದ್ದಾರೆ. ಸದ್ಯ ಕಿಮ್ಸ್ …

Read More »

ಪೊಲೀಸ್ ಇಲಾಖೆಗೆ ಸ್ವರ್ಣ ಉದ್ಯಮ ಸಮೂಹ ಸಂಸ್ಥೆಯು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಕ್ಸ್ ಗಳ ದೇಣಿಗೆ

ಹುಬ್ಬಳ್ಳಿ: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಫ್ರಂಟ್ ಲೈನ್ ವಾರಿಯರ್ಸ್‍ಗಳಾಗಿರುವ ಪೊಲೀಸ್ ಇಲಾಖೆಗೆ ಸ್ವರ್ಣ ಉದ್ಯಮ ಸಮೂಹ ಸಂಸ್ಥೆಯು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಕ್ಸ್ ಗಳನ್ನ ದೇಣಿಗೆಯಾಗಿ ನೀಡಿ ಸಾಮಾಜಿಕ ಕಾರ್ಯ ಕೈಗೊಂಡಿದೆ. ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ ಪ್ರಸಾದ್ ಅವರು 2100 ಮಾಸ್ಕ್ ಮತ್ತು 2100 ಸ್ಯಾನಿಟೈಸರ್ ಬಾಕ್ಸ್ ಗಳನ್ನು ವಿತರಣೆ ಮಾಡುವ ಮೂಲಕ ಪೊಲೀಸ್ ಸಿಬ್ಬಂದಿಗೆ ನೆರವು ನೀಡಿದ್ದಾರೆ. ನವನಗರದಲ್ಲಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ …

Read More »

ಜೂಜಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟು ದಾಳಿ ಮಾಡಿಸಿದ್ದಾನೆಂದು ಸಿಟ್ಟಾಗಿ ಓರ್ವನ ಮೇಲೆ ಹಲ್ಲೆ ಮಾಡಿ, ಅಪಹರಿಸಿಕೊಂಡು ಹೋಗಿ ಕಾರು ಹಾಯಿಸಿ ಕೊಲೆಗೆ ಯತ್ನ

ಹುಬ್ಬಳ್ಳಿ: ಜೂಜಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟು ದಾಳಿ ಮಾಡಿಸಿದ್ದಾನೆಂದು ಸಿಟ್ಟಾಗಿ ಓರ್ವನ ಮೇಲೆ ಹಲ್ಲೆ ಮಾಡಿ, ಅಪಹರಿಸಿಕೊಂಡು ಹೋಗಿ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಸುಗಲ್ಲ ಗ್ರಾಮದ ರಹಿಮಾನಸಾಬ ಸೇರಿದಂತೆ ನಾಲ್ವರು ಹಾಗೂ ಹುಬ್ಬಳ್ಳಿಯ ಮೂವರು ಸೇರಿ ವೇ ಬ್ರಿಜ್‌ನಲ್ಲಿ ಕೆಲಸ ಮಾಡುತ್ತಿರುವ ಕುಸುಗಲ್ಲ ಗ್ರಾಮದ ಮೌಲಾಸಾಬ ಆರ್‌. ಶೇಖಸನದಿ ಎಂಬಾತನ ಕೊಲೆಗೆ ಯತ್ನಿಸಿದ್ದಾರೆ.ಜೂಜಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ದಾಳಿ …

Read More »

ಬ್ಲ್ಯಾಕ್‌, ವೈಟ್‌ ಫಂಗಸ್ ನಲ್ಲಿ ವರ್ಣದ ಅಂಶ ಹೊರತು ಬೇರೆ ವ್ಯತ್ಯಾಸವಿಲ್ಲ : ಸುಧಾಕರ್‌

ಹುಬ್ಬಳ್ಳಿ : ಆಸ್ಪತ್ರೆಗಳಲ್ಲಿ ಬಳಸುವ ಹ್ಯುಮಿಡಿಫೈಡ್‌ಗಳಲ್ಲಿ ಡಿಸ್ಟಿಲ್‌ ವಾಟರ್‌ ಬಳಸಬೇಕು. ಆದರೆ ಹಲವೆಡೆ ನಲ್ಲಿಯ ನೀರನ್ನು ಹಾಕಿದ್ದಾರೆ. ಇದರಿಂದ ಫ‌ಂಗಸ್‌ ಬೆಳವಣಿಗೆಯಾಗಿದೆ. ಕ್ಯಾನುಲಾಗಳು ಸೇರಿ ಐಸಿಯುನಲ್ಲಿ ಬಳಸುವ ವೈದ್ಯಕೀಯ ಪರಿಕರಗಳಲ್ಲಿ ಕೂಡ ಫ‌ಂಗಸ್‌ ಬೆಳೆಯತ್ತಿದೆ. ಇವುಗಳನ್ನು ಮತ್ತೂಬ್ಬ ರೋಗಿ ಬಳಸುವಾಗ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಿ ಬಳಸಬೇಕು. ಇಲ್ಲವಾದರೆ ಹೊಸದನ್ನು ಬಳಸಬೇಕು ಎಂಬ ಸಲಹೆಯನ್ನು ತಜ್ಞರ ಸಮಿತಿ ನೀಡಿದೆ. ತಜ್ಞರ ವರದಿ ಆಧರಿಸಿ ಬ್ಲ್ಯಾಕ್‌ ಫ‌ಂಗಸ್‌ ಸೋಂಕು ಹರಡುವುದನ್ನು ತಡೆಯಲು ಎಲ್ಲ …

Read More »

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್ ಫಂಗಸ್‍ಗೆ ಮೊದಲ ಬಲಿ

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ಲ್ಯಾಕ್ ಫಂಗಸ್ ಸೊಂಕಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಮೂಲಕ ಹುಬ್ಬಳ್ಳಿ ಕಿಮ್ಸ್ ನಲ್ಲಿ  ಬ್ಲ್ಯಾಕ್ ಫಂಗಸ್‍ಗೆ ಮೊದಲ ಬಲಿಯಾದ ಪ್ರಕರಣ ಇದಾಗಿದೆ. ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಕಳೆದ ಕೆಲವು ದಿನಗಳ ಹಿಂದೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬ್ಲ್ಯಾಕ್ ಫಂಗಸ್ ಸೋಂಕಿಗೆ ಕಿಮ್ಸ್ ನಲ್ಲಿ ಜಿಲ್ಲೆಯ ಒಟ್ಟು 78 …

Read More »