Breaking News
Home / ಹುಬ್ಬಳ್ಳಿ (page 26)

ಹುಬ್ಬಳ್ಳಿ

ಬೆಲೆ ಕುಸಿತಕ್ಕೆ ಕಂಗಾಲಾಗಿ ಗಿಡದಿಂದ ಹತ್ತಿ ಬಿಡಿಸದ ರೈತ.

ಧಾರವಾಡ: ರೈತರ ಪಾಲಿನ ಬಿಳಿ ಬಂಗಾರ ಅಂತಲೇ ಹೆಸರುವಾಸಿಯಾಗಿರುವ ಮತ್ತು ವರ್ಷದಿಂದ ವರ್ಷಕ್ಕೆ ಏರುತ್ತ ಹೊರಟಿದ್ದ ಹತ್ತಿ ಯ ಬೆಲೆ ಈ ಬಾರಿ ಏಕಾಏಕಿಯಾಗಿ ಕುಸಿದಿದ್ದು, ಇದರಿಂದಾಗಿ ರೋಸಿ ಹೋದ ರೈತರು ಇದೀಗ ಹತ್ತಿಯನ್ನು ಬಿಡಿಸದೇ ಗದ್ದೆಯಲ್ಲಿ ಹಾಗೆಯೇ ಬಿಡುತ್ತಿದ್ದು, ಬೆಳೆದು ನಿಂತಲ್ಲಿಯೇ ಹತ್ತಿಯೆಲ್ಲವೂ ಹಾಳಾಗಿ ಹೋಗುತ್ತಿದೆ.   ಧಾರವಾಡ, ನವಲಗುಂದ, ಅಣ್ಣಿಗೇರಿ ತಾಲೂಕಿನ ಭಾಗದಲ್ಲಿ ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಳೆದ ವರ್ಷ ಒಂದು ಕ್ವಿಂಟಾಲ್​ ಹತ್ತಿಗೆ 12 ಸಾವಿರ …

Read More »

ಕಣ್ಣೀರು ಹಾಕಿ ಮಾತನಾಡಿದ C.M.ಬೊಮ್ಮಾಯಿ!

ಹುಬ್ಬಳ್ಳಿ: ತಮ್ಮ ಹಳೆ ಸ್ನೇಹಿತರು ಸಂಬಂಧಿಕರನ್ನು ನೋಡಿ ಭಾವುಕಾರದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಹುಟ್ಟೂರಿನಲ್ಲಿ ಕಣ್ಣೀರು ಹಾಕಿದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿರುವ ತಮ್ಮ ತಂದೆ ತಾಯಿ ಜನಿಸಿದ ಬಾಳಿ ಬದುಕಿದ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು ಆ ಸಂದರ್ಭ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿ ಕಣ್ಣೀರಿಟ್ಟರು. ಇದೇ ಸಂದರ್ಭ ಅವರು ಸಿಎಂ ಹುದ್ದೆಗೆ ಏರಲು ಸ್ನೇಹಿತರ ಸಹಾಯವನ್ನು ಸಿಎಂ ಬೊಮ್ಮಾಯಿ ನೆನೆದರು. ಇದೇ ಸಂದರ್ಭ ಮುಖ್ಯಮಂತ್ರಿ ಬೊಮ್ಮಾಯಿ …

Read More »

ಗಾಜಿನ ಪೆಟ್ಟಿಗೆಯೊಳಗಿನ ಪೇಢಾ: ನಗೆ ಚಟಾಕಿ ಹಾರಿಸಿದ ಪ್ರಧಾನಿ ಮೋದಿ

ಧಾರವಾಡ: ‘ಧಾರವಾಡದ ಪೇಢಾ ಒಮ್ಮೆ ಸವಿದರೆ ಮತ್ತೊಮ್ಮೆ ತಿನ್ನಬೇಕೆನಿಸುತ್ತದೆ. ಸಿಹಿ ತಿನ್ನುವ ಆಸೆಗೆ ಮಿತಿ ಹೇರಲು, ನನ್ನ ಆರೋಗ್ಯದ ಕಾಳಜಿ ಮಾಡಲೆಂದೇ ಮಿತ್ರ ಪ್ರಲ್ಹಾದ ಜೋಶಿ, ಗಾಜಿನ ಪೆಟ್ಟಿಗೆಯಲ್ಲಿ ಇಟ್ಟು ಕೊಟ್ಟಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪೇಡೆ ಸ್ವೀಕರಿಸಿ, ನಗೆ ಚಟಾಕಿ ಹಾರಿಸಿದರು.   ಧಾರವಾಡದ ಕರಕುಶಲ ವಸ್ತುಗಳ ಉಡುಗೊರೆಯನ್ನೇ ಪ್ರಧಾನಿಗಳಿಗೆ ನೀಡಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಖಿ ಸಾಫಲ್ಯದ ಕಸೂತಿ ಶಾಲನ್ನು ಹೊದಿಸಿ, ಧಾರವಾಡದ …

Read More »

ಮಠದಲ್ಲಿ ಬೈಬಲ್‌ ಕೃತಿ, ಮೊಹರಂ ಪಂಜಾ!

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ 19ನೆಯ ಶತಮಾನದಲ್ಲಿ ಶ್ರೀನಾಗಲಿಂಗಸ್ವಾಮಿ ಗಳೆಂಬ ಸಾಧುಗಳಿಂದ ಪ್ರವರ್ತಿತವಾದ ಮಠವಿದೆ. ನಾಗಲಿಂಗಸ್ವಾಮಿಗಳು ಜನಿಸಿದ್ದು ರಾಯ ಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಿ ಗ್ರಾಮದ ಮೌನಾಚಾರ್ಯ ಮತ್ತು ನಾಗಮ್ಮ ದಂಪತಿಗೆ. ಇವರು ವಿಶ್ವಕರ್ಮ ಸಮುದಾಯದವರಾಗಿ ಕಮ್ಮಾರ ವೃತ್ತಿ ನಡೆಸು ತ್ತಿದ್ದರು. ಮೈಸೂರು ಪ್ರಾಂತದಲ್ಲಿದ್ದ ಕರಸ್ಥಲ ನಾಗ ಲಿಂಗಸ್ವಾಮಿ ಎಂಬ ಮಹಾಪುರುಷರ ಕಥೆಗಳನ್ನು ಮೌನಾಚಾರ್ಯರು ಹೇಳುತ್ತಿರುವಾಗ “ಪುತ್ರ ನೆಂದರೆ ನಿನ್ನಂತಿರಬೇಕು ಕರಸ್ಥಲಸ್ವಾಮಿಯೇ’ ಎಂದು ನಾಗಮ್ಮ ಬಯಸುತ್ತಿದ್ದರಂತೆ. ಅವರು ಸ್ವಪ್ನದಲ್ಲಿ …

Read More »

ವಿಶ್ವದ ಅತೀ ಉದ್ದನೆಯ ರೈಲು ಪ್ಲಾಟ್‌ಫಾರಂ ಗರಿ

ಹುಬ್ಬಳ್ಳಿ: ವಿಶ್ವದ ಅತೀ ಉದ್ದನೆಯ ರೈಲ್ವೆ ಪ್ಲಾಟ್‌ಫಾರಂ ಹೊಂದಿರುವ ಕೀರ್ತಿ ನಗರದ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ್ದಾಗಿದೆ. ಭಾನುವಾರ ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಮುಂದಿನ 20-30 ವರ್ಷಗಳ ರೈಲ್ವೆ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು 20.01 ಕೋಟಿ ರೂ.ವೆಚ್ಚದಲ್ಲಿ 1,507 ಮೀಟರ್‌(4938 ಅಡಿ)ಉದ್ದದ ಈ ಪ್ಲಾಟ್‌ಫಾರಂ ನಿರ್ಮಿಸಲಾಗಿದೆ. ಇದರಿಂದ ಏಕಕಾಲಕ್ಕೆ ಎರಡು ರೈಲುಗಳು ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡಬಹುದಾಗಿದೆ. ಹುಬ್ಬಳ್ಳಿ ರೈಲ್ವೆ ಜಂಕ್ಷನ್‌ ದೇಶದ ಪ್ರಮುಖ ಜಂಕ್ಷನ್‌ಗಳಲ್ಲೊಂದು. ರಾಜ್ಯ-ದೇಶದ ವಿವಿಧೆಡೆ ಸಂಪರ್ಕ …

Read More »

 ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಸ್ನೇಹಿತರೆ ಸಾಮೂಹಿಕ ಅತ್ಯಾಚಾರ

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಸ್ನೇಹಿತರೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಹುಬ್ಬಳ್ಳಿಯ ಬೈಪಾಸ್ ರಿಂಗ್ ರೋಡ್ ಬ್ರಿಡ್ಜ್ ಬಳಿ ನಡೆದಿದೆ.   ಮೊಬೈಲ್ ಫೋನ್ ಕೊಡಿಸುವುದಾಗಿ ಹೇಳಿ ಬಾಲಕಿಯನ್ನು ನಂಬಿಸಿ ಕರೆದೊಯ್ದ ದುರುಳರು, ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ದೇವರಾಜ್, ಪಕ್ಕಿರೇಶ್ ಹಾಗೂ ಇನ್ನಿಬ್ಬರು ಸೇರಿ ಕೃತ್ಯವೆಸಗಿದ್ದಾರೆ. ಘಟನೆ ಬಗ್ಗೆ ಸಂತ್ರಸ್ತ ಯುವತಿ ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

Read More »

‘ಪತಲಿ ಕಮರಿಯಾ’ ನಂತರ ‘.ಈ ಸ್ವತ್ತು ಬಿಟ್ಟು ಇರಲಾರೆ.’; ರೋಗಿಗಳ ಮುಂದೆ ರೀಲ್ಸ್ ಮಾಡಿದ ಆಸ್ಪತ್ರೆ ಸಿಬ್ಬಂದಿ!

ಹುಬ್ಬಳ್ಳಿ: ರೀಲ್ಸ್ ಮಾಡುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಎಲ್ಲದ್ದಕ್ಕೂ ಸ್ಥಾನ ಸಮಯ ಎಂದಿರುತ್ತದೆ. ಈ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮಾತ್ರ ರೋಗಿಗಳ ಮುಂದೆಯೇ ರೀಲ್ಸ್ ಮಾಡಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ವೈದ್ಯ ಮತ್ತು ನರ್ಸ್ ಸಿಬ್ಬಂದಿ ರೀಲ್ಸ್ ಮಾಡಲು ಆಸ್ಪತ್ರೆಯನ್ನೇ ಸ್ಪಾಟ್ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಮತ್ತೊಬ್ಬ ಸಿಬ್ಬಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೀಲ್ಸ್ …

Read More »

ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ನಿಂದ ಬಂದ್ ಕರೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಭ್ರಷ್ಟಾಚಾರದ ಕೂಪ ಕಾಂಗ್ರೆಸ್, ಅವರು ಮಾಡಿರುವ ಕರ್ಮಕಾಂಡ ಒಂದಾ ಎರಡೇ. ಕಾಂಗ್ರೆಸ್ ಪಕ್ಷವೇ ಬಂದಾಗುತ್ತಿದೆ. ಇಂತಹ ಪ್ರತಿಭಟನೆ ಮೂಲಕ ಮುಂದಿನ ಚುನಾವಣೆ ನಡೆಸಬೇಕು ಎಂದುಕೊಂಡಿದ್ದಾರೆ. ಜನರು ಬಹಳ ಬುದ್ಧಿವಂತರು ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ವಿರುಪಾಕ್ಷಪ್ಪ ಮಾಡಾಳ ಅವರ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಅಸ್ತಿತ್ವಕ್ಕಾಗಿ ಬಂದ್ ಗೆ ಕರೆ ಕೊಟ್ಟಿದ್ದಾರೆ. ಆರೋಪ ಮಾಡುವವರು ಮೊದಲು ಶುದ್ಧ …

Read More »

ಮಾರ್ಚ್‌ 12ರಂದು ಮದ್ದೂರು, ಧಾರವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಹುಬ್ಬಳ್ಳಿ: ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ನೆರವೇರಿಸಿದ ಬಳಿಕ ಅಲ್ಲಿಯೇ ಸಮೀಪದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವರು.   ನಂತರ 2.40ಕ್ಕೆ ಮೋದಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 3.15ಕ್ಕೆ ಧಾರವಾಡದ ಐಐಟಿ ಪಕ್ಕದಲ್ಲಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಪ್ರಧಾನಿ ಆಗಮನವನ್ನು ಅವರ ಕಚೇರಿ ಖಚಿತಪಡಿಸಿದೆ’ ಎಂದು ಭಾನುವಾರ …

Read More »

ಹುಬ್ಬಳ್ಳಿ ಉದ್ಯಮಿಯ ಮನೆಯಲ್ಲಿ ದಾಖಲೆಯಿಲ್ಲದ ಮೂರು ಕೋಟಿ ರೂ ಪತ್ತೆ

ಹುಬ್ಬಳ್ಳಿ: ನಗರದ ಕೈಗಾರಿಕೋದ್ಯಮಿಯೊಬ್ಬರ ಮನೆಯಲ್ಲಿ ದಾಖಲಾತಿಗಳಿಲ್ಲದ ಮೂರು ಕೋಟಿ ರೂ. ಅಕ್ರಮ ಹಣ ದೊರೆತಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಇಲ್ಲಿನ ಭವಾನಿ ನಗರದ ಕೀಟನಾಶಕಗಳ ಕೈಗಾರಿಕೋದ್ಯಮಿ ರಮೇಶ ಎಂಬುವರ ಮನೆಯಲ್ಲಿ ದಾಖಲಾತಿಗಳಿಲ್ಲದ ಹಣ ದೊರೆತಿದೆ.   ಸಿಸಿಬಿ ಎಸಿಪಿ ನಾರಾಯಣ ಭರಮನಿ ಹಾಗೂ ಅಶೋಕ ನಗರ ಠಾಣೆ ಇನ್ಸಪೆಕ್ಟರ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಉದ್ಯಮಿ ಮನೆ ಮೇಲೆ ದಾಳಿ ಮಾಡಿ ಹಣ ಪತ್ತೆ ಮಾಡಿದ್ದಾರೆ. ಈ …

Read More »