Breaking News
Home / ರಾಷ್ಟ್ರೀಯ (page 738)

ರಾಷ್ಟ್ರೀಯ

ಅಕ್ರಮವಾಗಿ ಆಧಾರ್ ಕಾರ್ಡ್ ತಯಾರಿಸಿದ್ದ ಮೂವರ ಬಂಧನ

ಡಿಸ್ಪೂರ್: ಅಕ್ರಮವಾಗಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಅಸ್ಸಾಂನ ದಿಬ್ರುಗಢದಲ್ಲಿ ನಡೆದಿದೆ. ಆರೋಪಿಗಳನ್ನು ಡಿಪೆನ್ ಡೋಲಿ(29), ಬಿಟುಪನ್ ಡಿಯೋರಿ(27) ಮತ್ತು ಐಬಿ ಡಿಯೋರಿ(30) ಎಂದು ಗುರುತಿಸಲಾಗಿದೆ. ಈ ಮೂವರು ದಿಬ್ರುಗಢದಿಂದ 120ಕಿ.ಮೀ ದೂರದಲ್ಲಿರುವ ಲಖಿಂಪುರದವರು. ಆರೋಪಿಗಳು ಒಂದು ಆಧಾರ್ ಕಾರ್ಡ್ ತಯಾರಿಸಲು ತಲಾ 300 ರೂ. ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಅವರ ಬಳಿ ಇದ್ದ …

Read More »

ಸಾರಿಗೆ ನೌಕರರ ಕುಟುಂಬಸ್ಥರು ತಟ್ಟೆ, ಲೋಟ ಬಡಿದು ಆಕ್ರೋಶ

ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೊಳಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಕಳೆದ ಆರು ದಿನಗಳಿಂದ ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾರಿಗೆ ಸಿಬ್ಬಂದಿ ಕುಟುಂಬ ಸಮೇತರಾಗಿ ರಸ್ತೆಗಿಳಿದು ತಟ್ಟೆ ಹಾಗೂ ಲೋಟ ಬಡಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಕುಟುಂಬ ಸಮೇತ ಬಂದು ರಸ್ತೆ ಮಧ್ಯೆ ತಟ್ಟೆ-ಲೋಟ ಬಡಿದು ಸರ್ಕಾರದ ವಿರುದ್ಧ …

Read More »

ಪಶ್ಚಿಮ ಬಂಗಾಳದ ಜನರು ಹೇಳಿದರೆ ರಾಜಿನಾಮೆ ನೀಡಲು ಸಿದ್ದ: ಅಮಿತ್ ಷಾ

ಕೊಲ್ಕತ್ತಾ:ಪಶ್ಚಿಮ ಬಂಗಾಳದ ಜನರು ಹಾಗೆ ಕೇಳಿದರೆ ಮಾತ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ. ಆದಾಗ್ಯೂ, ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲುವುದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇ 2 ರಂದು ತ್ಯಜಿಸಬೇಕಾಗುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ಅಮಿತ್ ಷಾ ಪ್ರತಿಪಾದಿಸಿದರು. ಕೂಚ್ ಬೆಹಾರ್ ಜಿಲ್ಲೆಯ ಸಿಟಾಲ್ಕುಚಿಯಲ್ಲಿ ಶನಿವಾರ ನಡೆದ ನಾಲ್ಕನೇ ಹಂತದ ಮತದಾನದ …

Read More »

ಮೋದಿ ಗಡ್ಡಬಿಟ್ಟರೆ ಟ್ಯಾಗೋರ್ ಆಗೋದಿಲ್ಲ: ಖರ್ಗೆ

ಮಸ್ಕಿ (ರಾಯಚೂರು): ‘ಪ್ರಧಾನಿ ನರೇಂದ್ರ ಮೋದಿ ಗಡ್ಡಬಿಟ್ಟರೆ ರವೀಂದ್ರನಾಥ ಟ್ಯಾಗೋರ್ ಆಗೋದಿಲ್ಲ.‌ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ನಕಲು ಇದಾಗಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ‌ ಮಲ್ಲಿಕಾರ್ಜುನ ‌ಖರ್ಗೆ ಹೇಳಿದರು. ಮಸ್ಕಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಪರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ‘ಪಶ್ಚಿಮ ‌ಬಂಗಾಳಕ್ಕೆ ಹೋಗಿದ್ದ ಪ್ರಧಾನಿ ಪಕ್ಷದ ನೀತಿ‌ಗಳನ್ನು ಹೇಳುವ ಬದಲಾಗಿ, ಮಮತಾ‌ ಬ್ಯಾನರ್ಜಿ‌ ಅವರನ್ನು ವ್ಯಂಗ್ಯ ಮಾಡಿದ್ದಾರೆ. ಪ್ರಧಾನಿ ಜೋಕರ್ ರೀತಿ‌ ವರ್ತನೆ ತೋರಿಸಿದ್ದಾರೆ’ …

Read More »

ಬಿಜೆಪಿ ಎಂದರೆ ‘ಭ್ರಷ್ಟಾಚಾರ ಜನತಾ ಪಾರ್ಟಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು

ರಾಯಚೂರು: ಬಿಜೆಪಿ ಎಂದರೆ ‘ಭ್ರಷ್ಟಾಚಾರ ಜನತಾ ಪಾರ್ಟಿ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಮುದಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್ ವೈ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸಿಎಂ ಮನೆಗೆ ಹೋಗುತ್ತಾರೆ ಎಂದು ಅದೇ ಪಕ್ಷದ ಯತ್ನಾಳ ಹೇಳಿದ್ದಾರೆ. ಬಿಜೆಪಿಯವರು ಎಲ್ಲಿಯಾದರೂ ಸೋಲ್ತೀವಿ ಅಂತ ಹೇಳಿದ್ದಾರೆ. ಯಡಿಯೂರಪ್ಪನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಯಡಿಯೂರಪ್ಪನವರು ಮೊದಲಿಬಿಂದಲೂ ಸುಳ್ಳು ಹೇಳಿಕೊಂಡೆ ಬಂದಿದ್ದಾರೆ ಎಂದರು. ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಹೋಗುತ್ತದೆ ಎನ್ನುವುದು ಬಾಲಿಶತನದ ಹೇಳಿಕೆ. …

Read More »

5ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ : ಇಂದು 8 ಗಂಟೆಯವರೆಗೆ ಸಂಚರಿಸಿದ ಸಾರಿಗೆ ಬಸ್ ಗಳು ಎಷ್ಟು ಗೊತ್ತಾ.?

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದೆ. 6ನೇ ವೇತನ ಆಯೋಗ ಶಿಫಾರಸ್ಸು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ, ಇಂದು ಕೂಡ ಸಾರಿಗೆ ನೌಕರರು ಅನಿರ್ಧಿಷ್ಟಾವಧಿಯ ಮುಷ್ಕರ ಮುಂದುವರೆಸಿದ್ದಾರೆ. ಇಂತಹ ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯಾಧ್ಯಂತ ಸಾರಿಗೆ ಬಸ್ ಸಂಚಾರ ಕೂಡ ವಿರಳವಾಗಿದೆ. ಯುಗಾದಿ ಹಬ್ಬಕ್ಕೆ ತೆರಳುತ್ತಿರುವಂತ ನೌಕರರು ಬಸ್ ಗಳಿಲ್ಲದೇ ಪರದಾಡುವಂತ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಇದರ ಮಧ್ಯೆ 8 ಗಂಟೆಯವರೆಗೆ ವಿವಿಧ ನಿಗಮಗಳಿಂದ ಒಟ್ಟು …

Read More »

2021ರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ.

ಚೆನ್ನೈ: 2021ರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ. 5 ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ತಂಡದ ವಿರುದ್ಧ ಇಲ್ಲಿಯಯವರೆಗೆ ಯಾರೂ 5 ವಿಕೆಟ್ ಪಡೆದಿರಲಿಲ್ಲ. ಆದರೆ ಈ ಬಾರಿ ಹರ್ಷಲ್ ಪಟೇಲ್ 5 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹರ್ಯಾಣದ ಮಧ್ಯಮ ವೇಗಿ ಬೌಲರ್ ಹರ್ಷಲ್ ಪಟೇಲ್ ಅವರನ್ನು ಕೊಹ್ಲಿ 5ನೇಯವರಾಗಿ ಬೌಲಿಂಗ್ ಇಳಿಸಿದ್ದರು. ಹರ್ಷಲ್ …

Read More »

IPL 2021 Live Score, MI vs RCB: ಆರ್​ಸಿಬಿ ಶುಭಾರಂಭ: ಟಾಸ್ ಗೆದ್ದ ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಸೀಸನ್​ಗೆ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್​ನ್ನು ಎದುರಿಸುತ್ತಿದ್ದು, ಟಾಸ್ ಗೆದ್ದಿರುವ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದಾರೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಅತ್ತ 6ನೇ ಬಾರಿ ಚಾಂಪಿಯನ್​ ಪಟ್ಟದ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್​ಗೆ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸುವ …

Read More »

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಖರ್ಚು ಮಾಡಿದ ಹಣದ ಲೆಕ್ಕ ಸರ್ಕಾರ ಹೇಳಲಿ -ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿ ಕುರಿತು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದ ಬಿಜೆಪಿ ಸರ್ಕಾರ, ಅಭಿವೃದ್ಧಿ ಕಾಮಗಾರಿಗಳಿಗೆ ಈ ವರೆಗೆ ನಯಾಪೈಸೆ ಖರ್ಚು ಮಾಡಿಲ್ಲ ಎಂದು ಆಕ್ರೋಶಗೊಂಡಿದ್ದಾರೆ ಈ ವಿಚಾರ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಹಣ ಖರ್ಚು ಮಾಡಿದ್ದರೆ ಲೆಕ್ಕ ಹೇಳಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ‌ …

Read More »

ಸಾರಿಗೆ ನೌಕರರ ಕಷ್ಟ ಬಿಜೆಪಿಗೆ ಗೊತ್ತಾಗುತ್ತಿಲ್ಲ: ಕುಮಾರಸ್ವಾಮಿ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ‘ಬಿಜೆಪಿ ಮುಖಂಡರ ಚಿಂತನೆಗಳೇ ಬೇರೆ ಇವೆ. ಅವರಿಗೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಬೇಕಾಗಿಲ್ಲ. ಹೀಗಾಗಿ ಸಾರಿಗೆ ನೌಕರರ ಕಷ್ಟ ಬಿಜೆಪಿಗೆ ಗೊತ್ತಾಗುತ್ತಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಕುತಂತ್ರದ ಮೂಲಕ ಹಣ ಉಪಯೋಗ ಮಾಡಿ ಸರ್ಕಾರ ರಚಿಸಿದರು. ಈಗ ಆ ಹಣ ಹೇಗೆ ಸಂಪಾದನೆ ಮಾಡಬೇಕು, ಕಿಸೆ ತುಂಬಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿದ್ದಾರೆ’ ಎಂದು ಮುಖಂಡರ ಹೆಸರು ಪ್ರಸ್ತಾಪ …

Read More »