Breaking News

ರಾಷ್ಟ್ರೀಯ

ಅರುಣ್ ಶಹಾಪುರ್, ಹನುಮಂತ ನಿರಾಣಿ ದೊಡ್ಡ ಲೀಡ್‍ನಲ್ಲಿ ಆಯ್ಕೆಯಾಗುವ ವಿಶ್ವಾಸವಿದೆ: ಬಸವರಾಜ್ ಬೊಮ್ಮಾಯಿ

ನಿನ್ನೆ ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಪಡೆದಿದ್ದೇವೆ. ಅದೇ ರೀತಿ ವಿಧಾನ ಪರಿಷತ್‍ನ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಪ್ರಥಮ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನ ಪಡೆದಿದೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪ್ರತಿನಿಧಿತ್ವ ಹೆಚ್ಚಾಗಿದೆ. ಅದೇ ರೀತಿ ವಿಧಾನ ಪರಿಷತ್‍ನ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ. ವಾಯುವ್ಯ ಪದವೀಧರ ಶಿಕ್ಷಕರ …

Read More »

ರಾಷ್ಟ್ರಪತಿ ಚುನಾವಣೆಗೆ ತಯಾರಿ ಜೋರು! ಮಲ್ಲಿಕಾರ್ಜುನ ಖರ್ಗೆ ಕಣಕ್ಕೆ?

ದೇಶದಲ್ಲಿ ರಾಷ್ಟ್ರಪತಿ ಚುನಾವಣೆ ಘೋಷಣೆ ಆಗ್ತಿದ್ದಂತೆ ಆಡಳಿತ ರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳು ಅಭ್ಯರ್ಥಿಯ ಹುಡುಕಾಟದಲ್ಲಿ ನಿರತವಾಗಿವೆ. ಅದರಲ್ಲೂ ಕಾಂಗ್ರೆಸ್‌ ಇನ್ನಿತರ ಪ್ರತಿಪಕ್ಷಗಳ ಜೊತೆಗೆ ಸೇರಿ ಬಿಜೆಪಿಗೆ ತಕ್ಕ ಪ್ರತಿಸ್ಪರ್ಧಿಯನ್ನ ಕಣಕ್ಕಿಳಿಸೋಕೆ ತಯಾರಿ ನಡೆಸ್ತಿದೆ. ಇನ್ನು ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನ ಕಣಕ್ಕಿಳಿಸಬಹುದು ಅನ್ನೋ ವರದಿಗಳು ಬಲವಾಗಿ ಕೇಳಿ ಬರ್ತಿವೆ. ಮತ್ತೊಂದು ಕಡೆ ಕಾಂಗ್ರೇಸ್ಸೇತರರನ್ನ ರಾಷ್ಟ್ರಪತಿಯನ್ನಾಗಿಸೋಕೆ ಚಿಂತನೆ ನಡೆಸಲಾಗ್ತಿದೆ ಅಂತ ಕೂಡ ಹೇಳಲಾಗ್ತಿದೆ. ಆದ್ರೆ …

Read More »

ಕನ್ನಡ ನ್ಯೂಸ್ ಚಾನಲ್‌ಗಳ 22ನೇ ವಾರದ ಬಾರ್ಕ್ TRP ರೇಟಿಂಗ್

ಬೆಂಗಳೂರು, ಜೂನ್ 09 : ಕರ್ನಾಟಕದ ಸುದ್ದಿವಾಹಿನಿಗಳ 22ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ (Telivision Rating Point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್ ಅಲ್ಪಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಕಳೆದ ಕೆಲವು ವಾರಗಳ ಟಿಆರ್‌ಪಿಯನ್ನು ಗಮನಿಸಿದಾಗ ಪವರ್ ಟಿವಿ ಬೆಳವಣಿಗೆ ರೇಟಿಂಗ್‌ನಲ್ಲಿ ಉತ್ತಮವಾಗುತ್ತ ಸಾಗುತ್ತಿದೆ. ಬಾರ್ಕ್ ನೀಡಿರುವ ರೇಟಿಂಗ್‌ನಲ್ಲಿ …

Read More »

ಬಿಜೆಪಿ ಸೇರಲು ಹೋಗಿದ್ದ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು- H.D.K.

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು. ಈ ಹಿಂದೆ ಬಿಜೆಪಿ ಸೇರಲು ಹೋಗಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಿಜೆಪಿ ಸೇರಲು ಅಡ್ವಾಣಿ ಬಳಿ ಹೋಗಿದ್ದರು. ಒಂದು ಕಾಲದಲ್ಲಿ ಅಡ್ವಾಣಿ ಬಳಿ ಟವೆಲ್ ಹಾಕಿದ್ದರು. ಬೇಕಿದ್ದರೆ ಸಿದ್ದರಾಮಯ್ಯ ಜೊತೆ ಹೋಗಿದ್ದವರನ್ನು ಕೇಳಿ ಎಂದು ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆ ಪ್ರಯತ್ನದ ಬಗ್ಗೆ ಲೇವಡಿ ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ …

Read More »

ರಾಜ್ಯಸಭಾ ಚುನಾವಣೆ: ಬಿಜೆಪಿ ಪ್ಲ್ಯಾನ್‌ ಏನು?

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಕಚ್ಚಾಟದ ಮೇಲೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯಿಡಲು ತೀರ್ಮಾನ ಮಾಡಿದೆ. ಮೊದಲು ನಿರ್ಮಲಾ ಸೀತಾರಾಮನ್‍ಗೆ ವೋಟಿಂಗ್ ಮಾಡಿಸಲು ತೀರ್ಮಾನ ಮಾಡಿದ್ದು, ನಿರ್ಮಲಾಗೆ 46 ಮೊದಲ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ಬಿಜೆಪಿ ಪ್ಲಾನ್ ಮಾಡಿದೆ. ನಂತರ ಜಗ್ಗೇಶ್‍ಗೆ 44 ಮೊದಲ ಪ್ರಾಶಸ್ತ್ಯದ ಮತ ಇದ್ದು, 32 ಎರಡನೇ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ನಿರ್ಧರಿಸಲಾಗಿದೆ. ಅಂತಿಮವಾಗಿ 3ನೇ ಅಭ್ಯರ್ಥಿ ಲೆಹರ್ ಸಿಂಗ್‍ಗೆ 32 ಮೊದಲ ಪ್ರಾಶಸ್ತ್ಯದ ಮತಗಳು, 90 ಎರಡನೇ ಪ್ರಾಶಸ್ತ್ಯದ ಮತಗಳನ್ನು …

Read More »

ಪಂಚಮಸಾಲಿ ಹೋರಾಟಕ್ಕೆ ಸ್ಪಂದಿಸುತ್ತಿರುವ ಆಡಳಿತರೂಡ ಸರ್ಕಾರದ #ಉಭಯಪಾಟೀಲ್ಶಕ್ತಿಗಳು

ಪಂಚಮಸಾಲಿ ಹೋರಾಟಕ್ಕೆ ಸ್ಪಂದಿಸುತ್ತಿರುವ ಆಡಳಿತರೂಡ ಸರ್ಕಾರದ #ಉಭಯಪಾಟೀಲ್ಶಕ್ತಿಗಳು ಪಂಚಮಸಾಲಿ 2 ಎ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಿದ #ಪಾಟೀಲದ್ವಯರು. 9th June 22 at bengalure ಜೂನ್ 27 ರಂದು ಮುಖ್ಯಮಂತ್ರಿ ಮನೆ ಮುಂದೆ ಕೂಡಲ ಸಂಗಮ ಶ್ರೀಗಳು, ಆರಂಭ ಮಾಡಲು ಉದ್ದೇಶಿಸಿರುವ ಸತ್ಯಾಗ್ರಹದ ಗಂಭೀರತೆಯನ್ನು ಅರ್ಥಮಾಡಿಕೊಂಡ ಸಚಿವ ಸಿಸಿ ಪಾಟೀಲ್ ಹಾಗೂ ಶಾಸಕ ಯಾತ್ನಲ್ ಗೌಡರು ಸರ್ಕಾರ ಹಾಗೂ ಸಮಾಜದ ನಡುವೆ …

Read More »

ಕೊನೆಗೂ ತನ್ನನ್ನೇ ಮದ್ವೆಯಾದ ಯುವತಿ..ಇನ್ನೇನಿದ್ರೂ ಹನಿಮೂನ್ ಮಾತ್ರ ಬಾಕಿ

ಭಾರೀ ಸಂಚಲ ಮೂಡಿಸಿದ್ದ ಗುಜರಾತ್​ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೂ ತಮ್ಮ ಕನಸನ್ನ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸ್ತ್ರೋಕ್ತವಾಗಿ ನಿನ್ನೆ ತಮ್ಮನ್ನೇ ತಾವು ಮದುವೆ ಆಗಿದ್ದಾರೆ. ಇವರು ಜೂನ್ 11 ರಂದು ಮದುವೆ ಆಗಬೇಕಿತ್ತು, ಹಲವರ ವಿರೋಧ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚೆಯೇ ಮದುವೆ ಆಗಿದ್ದಾರೆ. ಯಾಕೆ ವಿರೋಧ ಆಗಿತ್ತು..? ಕ್ಷಮಾ ಬಿಂದು ಏಕಾಂಗಿಯಾಗಿ (ತಮ್ಮನ್ನೇ ತಾವು) ವಿವಾಹ ಆಗುತ್ತಿರೋದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಿಂದೂ …

Read More »

ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಅವಘಡ 20ಕ್ಕೂ ಹೆಚ್ಚು ಜನರಿಗೆ ಗಾಯ

ಕಾಲೇಜು ಬಸ್ಸಿನ ಹಿಂಬದಿಗೆ ಕೆಎಸ್‌ಆರ್‌ಟಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದ ಬಳಿ ಸಂಭವಿಸಿದೆ.ಜತ್ತ-ಜಾಂಬೋಟಿ ಹೆದ್ದಾರಿ ಸಮೀಪ ಗುರ್ಲಾಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಮೂಡಲಗಿ ಖಾಸಗಿ ಕಾಲೇಜಿಗೆ ತೆರಳುತ್ತಿದ್ದ ಕಾಲೇಜು ಬಸ್‌ನಲ್ಲಿದ್ದ ೧೦ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ೧೦ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು. ಇದರಲ್ಲಿ …

Read More »

ʻ’ಈ ತಲೆಗಳ ಕಡಿದರೆ 20 ಲಕ್ಷ ರೂ.. ಖಾತೆಗೆ ಜಮಾʼ: ಮುತಾಲಿಕ್​, ಯಶ್​ಪಾಲ್​ ಪ್ರತಿಕ್ರಿಯೆ ಹೀಗಿದೆ.

ಕಾರ್ಕಳ: ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಲೆ ಕಡಿದರೆ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪತ್ರ ಹರಿದಾಡುತ್ತಿದೆ. ಮಾರಿಗುಡಿ ಪೇಜಿನಲ್ಲಿ ಈ ರೀತಿಯಾಗಿ ಬಹಿರಂಗ ಬೆದರಿಕೆ ಹಾಕಲಾಗಿದೆ.   ʻಈ ಎರಡು ತಲೆ ಕಡಿದರೆ 20 ಲಕ್ಷ..! ಒಂದು ತಲೆಗೆ 10 ಲಕ್ಷ, ಇನ್ನೊಂದು ತಲೆಗೆ 10 ಲಕ್ಷ. ಕೂಡಲೇ ನಿಮ್ಮ ಖಾತೆಗೆ ಜಮಾ ಆಗುತ್ತದೆʼ …

Read More »

ಗೋಕಾಕ ನ ಹಿರಿಯ ತಜ್ಞ ವಾದ್ಯರಾದ ಡಾಕ್ಟರ ಮಹೇಶ್ ಕೊಣಿ ಇವಾಗ ಬೆಳಗಾವಿ D.H.O. ಶಶಿಕಾಂತ ಮುನ್ಯಾಳವರ್ಗಾವಣೆ

ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಶಿಕಾಂತ ಮುನ್ಯಾಳ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಡಾ.ಮಹೇಶ ಕೋಣಿ ಅವರನ್ನು ನಿಯೋಜಿಸಲಾಗಿದೆ. ಕೋಣಿ ಗೋಕಾಕದಲ್ಲಿ ಹಿರಿಯ ತಜ್ಞ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುನ್ಯಾಳ ಅವರಿಗೆ ಯಾವುದೇ ಜಾಗ ತೋರಿಸಲಾಗಿಲ್ಲ.

Read More »