Breaking News
Home / ರಾಷ್ಟ್ರೀಯ (page 707)

ರಾಷ್ಟ್ರೀಯ

ಗಾಂಧೀಜಿ ಮರಿಮೊಮ್ಮಗಳಿಗೆ ಆಫ್ರಿಕಾ ನ್ಯಾಯಾಲಯದಿಂದ ಜೈಲು ಶಿಕ್ಷೆ

ಜೊಹಾನ್ಸ್‌ಬರ್ಗ್‌(ದಕ್ಷಿಣ ಆಫ್ರಿಕಾ): ಹಣಕಾಸು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಮಾಡಿದ ಆರೋಪದಲ್ಲಿ ಮಹಾತ್ಮ ಗಾಂಧೀಜಿ ಅವರ 56 ವರ್ಷದ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದ ಡರ್ಬನ್‌ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆರು ದಶಲಕ್ಷ ಆಫ್ರಿಕನ್‌ ರಾಂಡ್‌ ( ಅಂದಾಜು ₹3.22 ಕೋಟಿ) ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಗಾಂಧಿ ಮರಿ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ …

Read More »

ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಗೆ ಬಂದಿದ್ದ ಫ್ರೈಡ್ ಟವಲ್

ಮನಿಲಾ: ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಗೆ ಬಂದಿದ್ದ ಫ್ರೈಡ್ ಟವಲ್ ನೋಡಿ ಮಹಿಳೆ ಶಾಕ್ ಆಗಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲೀಫರೇಜ್ ಎಂಬ ಮಹಿಳೆ ಫ್ರೈಡ್ ಚಿಕನ್ ತಿನ್ನಬೇಕು ಎಂದು ಆಸೆಯಿಂದ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ಡೀಪ್ ಫ್ರೈಡ್ ಚಿಕನ್ ಬದಲು ಡೀಪ್ ಫ್ರೈಡ್ ಟವಲ್ ಸಿಕ್ಕಿದೆ. ಅಲೀ ಚಿಕನ್ ಅಂದುಕೊಂಡು ತಿನ್ನಲು ಶುರು ಮಾಡಿದಾಗ ವಿಚಿತ್ರವೆನಿಸಿದ್ದು, ಪೂರ್ತಿ …

Read More »

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲ ಪತ್ತೆ

ಬೆಂಗಳೂರು, ಜೂ. 07: ಬೆಂಗಳೂರಿನಿಂದ ವಿದೇಶಕ್ಕೆ ಕೊರಿಯರ್ ಮೂಲಕ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ. ಕಿರಾತಕರು ಚಿಕ್ಕ ಬ್ಯಾಗ್ ಗಳಲ್ಲಿ ತುಂಬಿಸಿದ್ದ ಸುಮಾರು ಎರಡು ಕೆ.ಜಿ. ಚರಸ್ ನ್ನು ವಶಪಡಿಸಿಕೊಂಡಿದ್ದಾರೆ. ಎಚ್‌. ಹುಸೇನ್ ಮತ್ತು ಆರ್. ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 3.8 ಕೆ.ಜಿ. ಚರಸ್ ಪತ್ತೆಯಾಗಿದೆ. ಬೆಂಗಳೂರಿನಿಂದ ಕತಾರ್ ಗೆ ಕೊರಿಯರ್ ಮೂಲಕ …

Read More »

ಪುಣೆಯ ಕಾರ್ಖಾನೆಯಲ್ಲಿ ಬೆಂಕಿ ಅವಘಡಕ್ಕೆ 18 ಮಂದಿ ಬಲಿ

ಪುಣೆ: ಇಲ್ಲಿನ ಮುಲ್ಶಿ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಢದಲ್ಲಿ 15 ಮಂದಿ ಮಹಿಳೆಯರು ಸೇರಿ 18 ಜನರು ಮೃತಪಟ್ಟಿದ್ದಾರೆ. ಪಿರಂಗುಟ್ ಗ್ರಾಮದಲ್ಲಿರುವ ‘ಎಸ್‌ವಿಎಸ್‌ ಅಕ್ವಾ ಟೆಕ್ನಾಲಜೀಸ್’ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದೆ. ಸುಮಾರು 20 ಮಂದಿ ಪಾರಾಗಿದ್ದಾರೆ. ಬೆಂಕಿಯಿಂದ ತೀವ್ರವಾಗಿ ಸುಟ್ಟಿದ್ದ ಶವಗಳನ್ನು ಹೊರತೆಗೆಯಲಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಬೆಂಕಿಯಿಂದಾಗಿ ವಾತಾವರಣವನ್ನು ದಟ್ಟ ಹೊಗೆ ಆವರಿಸಿತ್ತು. ಸ್ಥಳಕ್ಕೆ ಪುಣೆ ಜಿಲ್ಲಾಧಿಕಾರಿ …

Read More »

ರಾಜಕೀಯ ಮಾತು ನಿಲ್ಲಿಸಿ ಕೆಲಸ ಮಾಡಿ: ಸ್ವಪಕ್ಷಿಯರ ಮೇಲೆ ಬಿಎಸ್‌ವೈ ಸಿಡಿಮಿಡಿ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ವಪಕ್ಷೀಯರ ಮೇಲೆಯೇ ಸಿಡಿಮಿಡಿಗೊಂಡಿದ್ದಾರೆ. ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಅವರು, ‘ಕೋವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು.ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು …

Read More »

ವಧು ಯಾಮಿಯನ್ನ ರಾಧೆ ಮಾಗೆ ಹೋಲಿಸಿದ ನಟ – ಚಪ್ಪಲಿ ಕೇಳಿದ ಕಂಗನಾ

ಮುಂಬೈ: ವಧು ಯಾಮಿ ಗೌತಮಿಯನ್ನ ರಾಧೆ ಮಾಗೆ ನಟ ವಿಕ್ರಾಂತ್ ಮೆಸ್ಸಿ ಹೋಲಿಕೆ ಮಾಡಿದ್ದಕ್ಕೆ ನಟಿ ಕಂಗನಾ ರಣಾವತ್ ಕೆಂಡಾಮಂಡಲವಾಗಿದ್ದಾರೆ. ನಟನ ಕಮೆಂಟ್ ಗೆ ರಿಪ್ಲೈ ಮಾಡಿರುವ ಕಂಗನಾ, ನನ್ನ ಚಪ್ಪಲಿ ಕೊಡು ಎಂದು ಕಮೆಂಟ್ ಮಾಡಿದ್ದಾರೆ. ಜೂನ್ 4ರಂದು ಯಾಮಿ ಹಿಮಾಚಲ ಪ್ರದೇಶದಲ್ಲಿ ಉರಿ ಚಿತ್ರದ ನಿರ್ದೇಶಕ, ರೈಟರ್ ಆದಿತ್ಯ ಅವರ ಜೊತೆ ವೈವಾಹಿಕ ಬಂಧನಕ್ಕೆ ಕಾಲಿಟ್ಟಿದ್ದರು. ಕೊರೊನಾ ಹಿನ್ನೆಲೆ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು. ಫೋಟೋಗಳು …

Read More »

ರಾಜ್ಯಗಳಿಗೂ ಕೇಂದ್ರದಿಂದಲೇ ಪೂರೈಕೆ: ಪ್ರಧಾನಿ ಮೋದಿ

ನವದೆಹಲಿ: ಲಸಿಕೆ ವಿತರಣೆ ಸಂಬಂಧ ಮತ್ತೊಂದು ಮಹತ್ವದ ಹೆಜ್ಜೆ ಇಡುವ ಮೂಲಕ ಲಸಿಕೆ ವಿರುದ್ಧ ನಡೆಯುತ್ತಿರುವ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಈ ಮಹತ್ವದ ನಿರ್ಧಾರದ ಕುರಿತು ತಿಳಿಸಿದ್ದು, ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ. 50 ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ …

Read More »

ಮನೆ ಮೇಲೆ ಕಟ್ಟಡದ ಗೋಡೆ ಕುಸಿತ: ಒಬ್ಬರ ಸಾವು, 17 ಮಂದಿ ರಕ್ಷಣೆ

ಮುಂಬೈ: ಬಾಂದ್ರಾದಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಗೋಡೆಯು ಪಕ್ಕದ ಎರಡು ಅಂತಸ್ತಿನ ಮನೆಯ ಮೇಲೆ ಕುಸಿದಿರುವ ಪರಿಣಾಮ ಸಂಭವಿಸಿರುವ ದುರಂತದಲ್ಲಿ ಓರ್ವ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂದ್ರಾ (ಪೂರ್ವ) ಖೇರ್ವಾಡಿ ರಸ್ತೆಯಲ್ಲಿರುವ ರಜಾಕ್ ಚಾವ್ಲ್‌ನಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಇದುವರೆಗೆ 17 ಮಂದಿಯನ್ನು ರಕ್ಷಿಸಲಾಗಿದೆ. 28 ವರ್ಷದ ರಿಯಾಸ್ ಅಹ್ಮದ್ ಎಂಬವರು ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಓರ್ವ ಮಹಿಳೆಯು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಅವಘಡ ಸಂಭವಿಸಿದ …

Read More »

ಬೆಳಗಾವಿ ಜಿಲ್ಲೆಯ ಯುವಕನಿಂದಾಗಿ ಮೋಸ ಹೋದ ದಾವಣಗೆರೆ ಯುವತಿ ಆತ್ಮ ಹತ್ಯೆ…..ಆತನಿಗೆ ಗಲ್ಲು ಶಿಕ್ಷೆ ಕೊಡಿಸಿ.. ನೊಂದ ಪ್ರಿಯತಮೆಯ ಕೊನೇ ಮನವಿ.!

ದಾವಣಗೆರೆ: ಪ್ರಿಯಕರನ ವಂಚನೆಯಿಂದ ಬೇಸತ್ತ ಪ್ರೇಮಿ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಭಾನುವಾರ ದಾವಣಗೆರೆಯ ಭಾರತ್ ಕಾಲೋನಿಯಲ್ಲಿ ನಡೆದಿದೆ. ಭಾರತ್ ಕಾಲೋನಿಯ ಆಶಾ(22) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಶಾ ಕೆ.ಬಿ. ಈರಣ್ಣ ಎಂಬಾತತನ್ನು ಪ್ರೀತಿಸುತ್ತಿದ್ದರು. ಈಚೆಗೆ ಆತನಿಂದ ವಂಚನೆಗೊಳಗಾಗಿದ್ದರು ಎನ್ನಲಾಗುತ್ತಿದೆ. ಕೆ.ಬಿ. ಈರಣ್ಣ ಮೂಲತಃ ಬೆಳಗಾವಿ ಜಿಲ್ಲೆಯವ. ದಾವಣಗೆರೆಯಲ್ಲಿ ಬೆಸ್ಕಾಂನಲ್ಲಿ ಬಿಲ್ ಕಲೆಕ್ಟರ್ ಆಗಿ ಮಾಡುತ್ತಿದ್ದು, ಬಂಬೂಬಜಾರ್‌ನಲ್ಲಿ ವಾಸವಾಗಿದ್ದನು. ಬಿಲ್ ಕಲೆಕ್ಟಿಂಗ್‌ಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಆಶಾ ಮತ್ತು ಆತನ ನಡುವೆ …

Read More »

ನಾಸಾ ಚಂದ್ರಯಾನಕ್ಕೆ ಭಾರತೀಯ ಮೂಲದ ಎಂಜಿನಿಯರ್‌ ಸುಭಾಷಿಣಿ ಅಯ್ಯರ್‌ ಬಲ

ಮೆಲ್ಬರ್ನ್: ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ನಾಸಾದ ಮಹತ್ವಾಕಾಂಕ್ಷಿ ಯೋಜನೆಯ ಬೆನ್ನೆಲುಬಾಗಿ ನಿಂತಿರುವವರು ಬೇರ್ಯಾರೂ ಅಲ್ಲ, ಭಾರತೀಯ ಮೂಲದ ಎಂಜಿನಿಯರ್‌ ಸುಭಾಷಿಣಿ ಅಯ್ಯರ್‌. ಒರಿಯನ್‌ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಹೊತ್ತೂಯ್ಯಲಿರುವ ಆರ್ಟೆಮಿಸ್‌ 1 ಯೋಜನೆಯ ಬಿಡಿ ಭಾಗಗಳ ನಿರ್ಮಾಣ ಹಾಗೂ ಆರಂಭಿಕ ಹಂತದ ನಿರ್ವಹಣೆಯನ್ನು ನೋಡಿಕೊಳ್ಳುವ ತಂಡದಲ್ಲಿ ಸುಭಾಷಿಣಿ ಕೂಡ ಒಬ್ಬರು. ರಾಕೆಟ್‌ನ ಕೋರ್‌ ಸ್ಟೇಜ್‌ ನಿರ್ಮಾಣ ಪೂರ್ಣಗೊಂಡು, ಅದನ್ನು ಹಸ್ತಾಂತರಿಸುವವರೆಗೆ ನಾಸಾಗೆ ಎಲ್ಲ ರೀತಿಯ ಸಹಾಯ ಮಾಡುವ ಜವಾಬ್ದಾರಿಯೂ …

Read More »