Breaking News
Home / ರಾಷ್ಟ್ರೀಯ (page 681)

ರಾಷ್ಟ್ರೀಯ

ಬೈಕ್ ಅಪಘಾತ : ಸ್ಥಳದಲ್ಲಿಯೇ ಇಬ್ಬರ ಸಾವು.

ಚಿಕ್ಕೋಡಿ : ಬೈಕ್ ಸವಾರರಿಬ್ಬರು ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ನಾಗರಮುನ್ನೊಳ್ಳಿ ಟೋಲ್ ಗೆಟ್ ಹತ್ತಿರ ನಡೆದಿದೆ.   ಮೃತರನ್ನು ಸಿದ್ದಾರ್ಥ ಅಶೋಕ ಖೇಮಲಾಪೊರೆ(24) ಮತ್ತು ಪ್ರಮೋದ ಕರೇಪ್ಪ ನಾಯ್ಕ(24) ಅಂತಾ ತಿಳಿದು ಬಂದಿದೆ.         ನಿಪ್ಪಾಣಿ ಸಮೀಪದ ಸ್ತವನಿಧಿಗೆ ದೇವರಿಗೆಂದು ಹೋಗಿ ವಾಪಸ್ಸು ತಮ್ಮೂರಾದ ಬೆಲ್ಲದ-ಬಾಗೇವಾಡಿಗೆ ಬರುವಾಗ ನಾಗರಮುನ್ನೊಳ್ಳಿ ಟೋಲ್ ಗೇಟ್ ಹತ್ತಿರ ಮಳೆಯಾದ ಕಾರಣ …

Read More »

ಎಚ್ಡಿಕೆ-ಸುಮಲತಾ ವಾಕ್ ಸಮರ ತಮಾಷೆಯಾಗಿದೆ ,ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಸವದಿ

ವಿಜಯಪುರ: ಮಂಡ್ಯ ಅಕ್ರಮ ಗಣಿಗಾರಿಕೆ ಹಾಗೂ ಕೆ ಆರ್ ಎಸ್ ಜಲಾಶಯದ ವಿಷಯದಲ್ಲಿ ಮಾಜಿ ಸಿ.ಎಂ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ಮಧ್ತೆ ನಡೆಯುತ್ತಿರುವ ವಾಕ್ಸಮರ ಜೋರಾಗಿದೆ. ಇಬ್ಬರ ಹೇಳಿಕಗಳು ಜನರಿಗೆ ನೋಡಲು, ಕೇಳಲು ತಮಾಷೆಯಾಗಿದ್ದರೂ ಕೇಳಲು ನಮಗೆ ಸಮಯವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಇಬ್ಬರನ್ನೂ ಕುಟುಕಿದ್ದಾರೆ. ಶುಕ್ರವಾರ ಸಂಜೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೃಷ್ಣರಾಜ ಸಾಗರ ಜಲಾಶಯದ ಕುರಿತು ಮುಖ್ಯ ಅಭಿಯಂತರರಿಂದ ಸರ್ಕಾರ ಸ್ಪಷ್ಟಿಕರಣ …

Read More »

ಹಿಂದಿ ಸಿನಿಮಾರಂಗಕ್ಕೆ ನಾಗಚೈತನ್ಯ ಎಂಟ್ರಿ; ಆಮೀರ್ ಖಾನ್ ಜೊತೆ ನಟನೆ

ತೆಲುಗು ಸಿನಿಮಾರಂಗದ ಖ್ಯಾತ ನಟ ನಾಗ ಚೈತನ್ಯ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಗ ಚೈತನ್ಯ ಹಿಂದಿ ಸಿನಿಮಾದ ಬಗ್ಗೆ ಅನೇಕ ತಿಂಗಳಿಂದ ಚರ್ಚೆ ನಡೆಯುತ್ತಿತ್ತು. ಇದೀಗ ನಾಗ ಚೈತನ್ಯ ಅಧಿಕೃತವಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅಂದಹಾಗೆ ನಾಗಚೈತನ್ಯ ನಟಿಸುತ್ತಿರುವುದು ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಸಿನಿಮಾದಲ್ಲಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿಗಳಿಸಿರುವ ನಟ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾದ …

Read More »

ನಟ ರಕ್ಷಿತ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಮಾತು ಖಂಡಿಸಿ ಕಾಪು ಬಂಟರ ಸಂಘದ ವತಿಯಿಂದ ದೂರು

ಕಾಪು : ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ, ತುಳುನಾಡಿನ ಹೆಮ್ಮೆಯ ಕಲಾವಿದ ರಕ್ಷಿತ್ ಶೆಟ್ಟಿ ಅಲೆವೂರು ಅವರ ಕುರಿತಾಗಿ ಖಾಸಗಿ ಟಿವಿ ಮಾಧ್ಯಮದಲ್ಲಿ ಅವಹೇಳನಕಾರಿ ಮತ್ತು ಹೀನಾಯವಾಗಿ ನಿಂದಿಸಿರುವ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಾಪು ಬಂಟರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ತಳುನಾಡಿನ ಅದ್ಭುತ ಪ್ರತಿಭೆಯಾಗಿರುವ …

Read More »

ಯೋಗೇಶ್ವರ್ ಜಗದ್ಗುರುಗಳಿದ್ದ ಹಾಗೆ,3ನೇ ಕಣ್ಣು ಬಿಟ್ಟರೆ ಭಸ್ಮವಾಗುತ್ತೇವೆ:ರೇಣುಕಾಚಾರ್ಯ ಟೀಕೆ

ಬೆಂಗಳೂರು: ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ, 7 ಮಿನಿಸ್ಟರ್ ಮನೆ ಪಡೆಯಲು ಮತ್ತು ಕಾರಿನಲ್ಲಿ ಒಡಾಡಲು ನನ್ನ ಕೊಡುಗೆಯಿದೆ ಎಂದು ರೇಣುಕಾಚಾರ್ಯ ವಿರುದ್ಧ ಹೇಳಿಕೆ ನೀಡಿದ್ದ ಯೋಗೇಶ್ವರ್ ಗೆ ವ್ಯಂಗ್ಯವಾಗಿ ರೇಣುಕಾಚಾರ್ಯ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ನಮಗೆ ಜಗದ್ಗುರುಗಳಿದ್ದ ಹಾಗೇ. ನಮ್ಮ ಕ್ಷೇತ್ರದ ಅಭಿವೃದ್ಧಿಯಾಗಿದೆ ಅಂದರೆ, ನಾನು ಶಾಸಕನಾಗಿದ್ದೇನೆ ಅಂದರೆ, ಹಿಂದೆ ಅಬಕಾರಿ ಸಚಿವನಾಗಿದ್ದೇನೆ ಅಂದ್ರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಅಂದ್ರೆ ಅದಕ್ಕೆಲ್ಲ ಆ ಜಗದ್ಗುರುಗಳೇ …

Read More »

ಗ್ರಾಮೀಣ ಪ್ರದೇಶದ ಜನತೆಗೆ ರಾಜ್ಯ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

ಗ್ರಾಮೀಣ ಪ್ರದೇಶದ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಕುರಿತು ಈಗಾಗಲೇ ಆದೇಶ ಹೊರಬಿದ್ದಿದೆ. ಆಧಾರ್ ಇಂದು ಬಹುತೇಕ ಎಲ್ಲ ಸೇವೆಗಳಿಗೆ ಅನಿವಾರ್ಯವಾಗಿದ್ದು, ಕೊರೊನಾ ಲಸಿಕೆ ಪಡೆಯಲು ಸಹ ಆಧಾರ್ ಸಂಖ್ಯೆ ಬೇಕಾಗುತ್ತದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಕೆಲವರು ಇನ್ನೂ ಸಹ ಆಧಾರ್ ನೋಂದಣಿ ಮಾಡದ ಕಾರಣ ಅನಾನುಕೂಲವಾಗಿದೆ. ಆಧಾರ್ ನೋಂದಣಿ ಮಾಡಿಸಲು ಅಥವಾ …

Read More »

ಬೀದರ್, ಕಲಬುರ್ಗಿಯಲ್ಲಿ ಮಳೆ; ಕಬ್ಬಿಗೆ ಹಾನಿ

ಕಲಬುರ್ಗಿ: ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಮಳೆಯ ರಭಸಕ್ಕೆ ಹಲವು ಕಡೆ ಕಬ್ಬಿನ ಬೆಳೆಗೆ ಹಾನಿಯಾಗಿದೆ. ಬೀದರ್ ತಾಲ್ಲೂಕಿನ ಶ್ರೀಕಟನಳ್ಳಿ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಹೊಲದಲ್ಲಿನ ಕಬ್ಬು ನೆಲಕ್ಕೆ ಉರುಳಿದೆ. ಭಾಲ್ಕಿ ಹಾಗೂ ಔರಾದ್‌ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮಳೆಯಾಯಿತು. ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ಚಿಂಚೋಳಿ, ಆಳಂದ, ಕಮಲಾಪುರ …

Read More »

ಯೋಗೇಶಗೌಡ ಹತ್ಯೆ: ಸಿಬಿಐಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಿ ಹೊರಡಿಸಲಾದ ಆದೇಶದ ಸಿಂಧುತ್ವ ಪ್ರಶ್ನಿಸಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಗುರುವಾರ ಸಿಬಿಐಗೆ ನೋಟಿಸ್‌ ಜಾರಿ ಮಾಡಿದೆ. ಪ್ರಕರಣ ಕುರಿತು ಎರಡನೇ ಎಫ್‌ಐಆರ್‌ ದಾಖಲಿಸಿರುವ ಸಿಬಿಐ ಕ್ರಮವನ್ನು ಪ್ರಶ್ನಿಸಿ ಚಂದ್ರಶೇಖರ ಇಂಡಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ಜುಲೈ 24ರೊಳಗೆ ಪ್ರತಿಕ್ರಿಯೆ ನೀಡಬೇಕು …

Read More »

ಬೆಂಬಲ ಬೆಲೆ ಬಾಕಿ ಹಣ ಬಿಡುಗಡೆ

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆ ಯಡಿ ರೈತರಿಂದ ಆಹಾರ ಧಾನ್ಯ ಖರೀದಿಸಿದ ಬಾಕಿ ಇರುವ 721 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಗುರುವಾರ ನಡೆದ ಸಂಪುಟ ಉಪ ಸಮಿತಿ ತೀರ್ಮಾನಿಸಿದ್ದು, 2-3 ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆಯಾಗಲಿದೆ ಎಂದು ಸಮಿತಿ ಅಧ್ಯಕ್ಷರೂ ಆಗಿರುವ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ. ಸಭೆಯ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಲ್ಕೈದು ತಿಂಗಳ ಹಿಂದೆಯೇ ರಾಗಿ, ಭತ್ತ, ಗೋಧಿಯನ್ನು ಕನಿಷ್ಠ ಬೆಂಬಲ …

Read More »

ಇನ್ನು 10 ದಿನಗಳ ನಂತರ ಮತ್ತೊಮ್ಮೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಮಾಡುವ ಅನಿವಾರ್ಯತೆ ಬರಬಹುದೇ?

ಬೆಂಗಳೂರು – ರಾಜ್ಯದಲ್ಲಿ ಜುಲೈ 19ರಿಂದ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಾ? ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಲಾಕ್ ಡೌನ್ ಆತಂಕವನ್ನು ತಂದಿಟ್ಟಿದೆ. ಕರ್ನಾಟಕದಲ್ಲಿ 1500ಕ್ಕಿಳಿದಿದ್ದ ನಿತ್ಯದ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ 2500 – 3000ಕ್ಕೇರಿದೆ. ಕೇರಳದಲ್ಲಿ ಪ್ರತಿ ದಿನ 8 ಸಾವಿರಕ್ಕಿಳಿದಿದ್ದ ಸೋಂಕಿತರ ಸಂಖ್ಯ ಈಗ 15 ಸಾವಿರಕ್ಕೇರಿದೆ. ಮಹಾರಾಷ್ಟ್ರದಲ್ಲಿ …

Read More »