Home / ರಾಷ್ಟ್ರೀಯ (page 52)

ರಾಷ್ಟ್ರೀಯ

ಸಿದ್ದರಾಮಯ್ಯ ಬಗ್ಗೆ ಅನಂತ್​ಕುಮಾರ್​ ಹೆಗಡೆ ವ್ಯಂಗ್ಯ; ಸಚಿವ ಎಚ್​.ಕೆ. ಪಾಟೀಲ್​ ತಿರುಗೇಟು!

ಬಾಗಲಕೋಟೆ: ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳಿಗೆ, ಶಾಸಕರಿಗೆ ಪಗಾರ ಕೊಡಲು ಹಣವಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಮಾಡಿದ ಟೀಕಾಪ್ರಹಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ. ಪಾಟೀಲ್, ಯಾವ ಶಾಸಕ ಪಗಾರ ಇಲ್ಲದೇ ಇದ್ದಾರೆ? ಹೇಳಿ ನೋಡೋಣ ಎಂದು ಹೇಳಿದ್ದಾರೆ.   ಬಾಗಲಕೋಟೆಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್, ಯಾವ ಶಾಸಕ ಪಗಾರ ಇಲ್ಲದೆ ಇದ್ದಾರೆ ಹೇಳಿ? ನಾನು ಮಂತ್ರಿ ಇದ್ದೇನೆ, ಇಲ್ಲೇ ಶಾಸಕರು ಸಹ ಇದ್ದಾರೆ. ನಮ್ಮ …

Read More »

ಬೆಳಗಾವಿ: ಖ್ಯಾತ ವೈದ್ಯ ಡಾ.ಕೊಡಕಣಿ ನಿಧನ

ಬೆಳಗಾವಿ: ಇಲ್ಲಿನ ಖ್ಯಾತ ಪ್ರಸ್ತೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾಗಿದ್ದ ಡಾ.ಬಿ.ಎಸ್. ಕೊಡಕಣಿ (89) ಅವರು ಗುರುವಾರ ನಿಧನರಾದರು. 1959ರಲ್ಲಿ ಬರೋಡಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಅವರು 1962ರಲ್ಲಿ ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಡಿ. ಪದವೀಧರರಾಗಿ, ಮುಂಬೈ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳ ರಿಜಿಸ್ಟ್ರಾರ್‌ ಆಗಿ ಸೇವೆಸಲ್ಲಿಸಿದ್ದರು. 1966ರಲ್ಲಿ ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. ಇಂಗ್ಲೆಂಡ್, ಯೂರೋಪ, ಕೆನಡಾ, ಅಮೆರಿಕಾಗಳಲ್ಲಿ ಉಪನ್ಯಾಸಕರಾಗಿ, …

Read More »

ಉಧೋ ಉಧೋ ಯಲ್ಲಮ್ಮಹಿಂದೆ ‘ಬಳೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ‘ಬಳೆಪೇಟೆ’ ಆಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ನಡೆಯುವ ಜಾತ್ರೆಯಲ್ಲಿ ಯಲ್ಲಮ್ಮ ದೇವಸ್ಥಾನದಿಂದ ಪಶ್ಚಿಮ ದಿಕ್ಕಿಗೆ ಕಣ್ಣು ಹಾಯಿಸಿದರೆ ವೈವಿಧ್ಯಮಯ ಬಣ್ಣ ಬಣ್ಣದ ಬಳೆಗಳ ಮಾರಾಟ ಕಂಡುಬರುತ್ತದೆ. ಹಿಂದೆ ‘ಬಳೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ‘ಬಳೆಪೇಟೆ’ ಆಗಿದೆ. ನೂರಾರು ಕುಟುಂಬಗಳು ದಶಕಗಳಿಂದ ಬಳೆ ಮಾರಾಟ ಮಾಡುತ್ತ ಬಂದಿವೆ. ಈಗೀಗ ಮಾರುಕಟ್ಟೆಯಲ್ಲಿ ಜಾಗ ಸಾಲದ್ದಕ್ಕೆ ಗುಡ್ಡದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಳೆಗಳ ಮಾರಾಟ ನಡೆಯುತ್ತದೆ. ಹುಣ್ಣಿಮೆ ಸಮೀಪಿಸುತ್ತಲೇ ಎಲ್ಲ ಅಂಗಡಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ. ಬಳೆಗಳನ್ನು ಒಪ್ಪ-ಓರಣವಾಗಿ …

Read More »

ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಬೆಳಗಾವಿ- ಚೋರ್ಲಾ -ಗೋವಾ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದರು. ಗೋವಾದಿಂದ ರಣಕುಂಡಿ ಕ್ರಾಸ್‌ ವರೆಗಿನ ಈ ರಸ್ತೆ 43.ಕಿ.ಮೀಟರ್‌ ಉದ್ದವಾಗಿದ್ದು, 58.90 ಕೋಟಿ ರೂಪಾಯಿ ವೆಚ್ಚದಲ್ಲಿ ಸುಧಾರಣೆ ಕಾರ್ಯ ಕೈಗೊಳ್ಳುತ್ತಿದ್ದು, 11 ತಿಂಗಳ ಅವಧಿಯಲ್ಲೇ ರಸ್ತೆ ದುರಸ್ತಿ ಕಾರ್ಯ ಮುಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

Read More »

ಹೆಬ್ಬಾಳಕರ್ ಅವರು ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ತೋರಿಸಿದರೆ ಅವರ ಪುತ್ರನಿಗೆ ಟಿಕೆಟ್

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಹಾಗೂ ಚಿಕ್ಕೋಡಿ ಕ್ಷೇತ್ರಕ್ಕೆ ಮೂವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡಿಗೆ ಕಳುಹಿಸಲಾಗಿದೆ’ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಖಾನಾಪುರ ತಾಲೂಕಿನ ಕಣಕುಂಬಿ ಯಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿ ‘ಅಭ್ಯರ್ಥಿಗಳ ಆಯ್ಕೆ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಕುಟುಂಬದ ಯಾವ ಸದಸ್ಯರೂ ಚುನಾವಣೆಗೆ ಸ್ಪರ್ಧೆ ಮಾಡುವದಿಲ್ಲ ಎಂದು ಪುನರುಚ್ಚರಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ …

Read More »

ಬಿಜೆಪಿ-ಜೆಡಿಎಸ್ ಟಿಕೆಟ್ ಹಂಚಿಕೆ ಇನ್ನೂ ಅಂತಿಮವಾಗಿಲ್ಲ:ಜೋಶಿ

ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಕರ್ನಾಟಕದಿಂದ ಬಿಜೆಪಿ-ಜೆಡಿಎಸ್ ಮಧ್ಯೆ ಟಿಕೆಟ್ ಹಂಚಿಕೆ ಕುರಿತು ಮಾತುಕತೆ ಇನ್ನೂ ಅಂತಿಮವಾಗಿಲ್ಲ, ಸೀಟು ಹಂಚಿಕೆ ಸರಿಯಾಗಿಯೇ ಆಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಆದರೆ, ಯಾವುದೇ ಟಿಕೆಟ್ ಹಂಚಿಕೆ ಬಗ್ಗೆ ತೀರ್ಮಾನ ಆಗಿಲ್ಲ, ಮಂಡ್ಯ ಸಂಸದೆ ಸುಮಲತಾ ಬಿಜೆಪಿಯಲ್ಲಿಯೇ ಇರುತ್ತಾರೆ ಎಂದರು.

Read More »

ಗೂಂಡಾಗಿರಿ ಮಾಡುವ ಜೊತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್ ಹಂಚುವ ಪ್ರಮೇಯ ಬರುತ್ತಿರಲಿಲ್ಲಾ: ಬಿಜೆಪಿ

ಬೆಂಗಳೂರು: ಲೋಕಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ವಿರುದ್ಧ ಮತದಾರರಿಗೆ ಕುಕ್ಕರ್ ಆಮಿಷದ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಿಜೆಪಿ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್ ಗಳ ಬ್ರದರ್ ರಿಂದ ಕುಕ್ಕರ್ ಹಂಚಲಾಗುತ್ತಿದೆ. ದೇಶ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ …

Read More »

ಲೋಕಸಭೆ ಚುನಾವಣೆಗೆ ಮುನ್ನ ‘ಹಿಂದಿನ ತಪ್ಪುಗಳನ್ನು’ ಸರಿಪಡಿಸಿಕೊಳ್ಳಲು ರಾಜ್ಯ ಬಿಜೆಪಿ ಮುಂದು!

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ನಾಯಕರು ಶುಕ್ರವಾರ ಚಿಂತನ-ಮಂಥನ ನಡೆಸಿದ್ದು, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಾಡಿದ ತಪ್ಪುಗಳು ಮರುಕಳಿಸದಂತೆ ನಿರ್ಧರಿಸಿದ್ದಾರೆ, ವಿಶೇಷವಾಗಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಕೋಟಾದ ಸೂಕ್ಷ್ಮ ವಿಷಯದ ಬಗ್ಗೆ ಕಾಳಜಿ ವಹಿಸಲು ನಿರ್ಧರಿಸಿದ್ದಾರೆ.   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಈ ಸಮುದಾಯಗಳ ಕೋಟಾವನ್ನು ವರ್ಗೀಕರಿಸಿತ್ತು, ಆದರೆ ಕೇಸರಿ ಪಕ್ಷವು ಕೇವಲ 66 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಜೆಡಿಎಸ್ …

Read More »

ದೆಹಲಿಯಲ್ಲಿ ಜಂಟಿಯಾಗಿ ಕಣಕ್ಕೆ ಇಳಿಯಲಿದೆ ಆಪ್, ಕಾಂಗ್ರೆಸ್

ಹೊಸದಿಲ್ಲಿ: ಇಂಡಿಯಾ ಒಕ್ಕೂಟದ (INDIA bloc) ಆಮ್ ಆದ್ಮಿ ಪಕ್ಷ (AAP) ಮತ್ತು ಕಾಂಗ್ರೆಸ್ (congress) ನಡುವೆ ದೆಹಲಿಯ (delhi) ಲೋಕಸಭಾ (loksabha) ಸ್ಥಾನಗಳ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಳಿಸಲಾಗಿದೆ. ಆಪ್ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈ ಬಗ್ಗೆ ಎರಡೂ ಪಕ್ಷಗಳು ಜಂಟಿಯಾಗಿ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿವೆ. ಎಎಪಿ ಅಭ್ಯರ್ಥಿಗಳು ಹೊಸದಿಲ್ಲಿ (New Delhi), ದಕ್ಷಿಣ ದೆಹಲಿ (South Delhi), ಪಶ್ಚಿಮ …

Read More »

ಇಂಡಿಯಾ ಮೈತ್ರಿಕೂಟ ಹೊಸ ಬಾಟಲಿಯಲ್ಲಿನ ಹಳೆಯ ವೈನ್: ಮೋದಿ ವ್ಯಂಗ್ಯ

ಇಂಡಿಯಾ ಮೈತ್ರಿಕೂಟ ಹೊಸ ಬಾಟಲಿಯಲ್ಲಿನ ಹಳೆಯ ವೈನ್: ಮೋದಿ ವ್ಯಂಗ್ಯ ಲಕ್ನೋ : ತಮ್ಮ ವಿರುದ್ಧ ಒಗ್ಗೂಡುತ್ತಿರುವ ಇಂಡಿಯಾ ಮೈತ್ರಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಅದೊಂದು ಹೊಸ ಬಾಟಲಿಯಲ್ಲಿರುವ ಹಳೆಯ ವೈನ್ ಎಂದು ವ್ಯಂಗ್ಯವಾಡಿದ್ದಾರೆ. ಶುಕ್ರವಾರ ವಾರಣಾಸಿಯಲ್ಲಿ ಮಾತನಾಡಿರುವ ಮೋದಿ, ಅವರು ಪ್ರತಿ ಚುನಾವಣೆಗೂ ಮುನ್ನ ಒಗ್ಗೂಡುತ್ತಾರೆ ಮತ್ತು ಗೆಲುವು ಪಡೆಯುವಲ್ಲಿ ವಿಫಲವಾದಾಗ ಪರಸ್ಪರ ನಿಂದಿಸಿಕೊಳ್ಳುತ್ತಾರೆ. ಅವರು ಒಂದು ರೀತಿ ಹೊಸ ಬಾಟಲಿಯಲ್ಲಿರುವ ಹಳೆಯ ವೈನ್ʼನಂತೆ …

Read More »