Breaking News
Home / ರಾಷ್ಟ್ರೀಯ (page 494)

ರಾಷ್ಟ್ರೀಯ

ಅನುಕಂಪದ ಉದ್ಯೋಗ’ ಹಕ್ಕಲ್ಲ – ‘ಸುಪ್ರೀಂ ಕೋರ್ಟ್’ ಮಹತ್ವದ ಅಭಿಪ್ರಾಯ

ನವದೆಹಲಿ: ಉದ್ಯೋಗಿ ಮರಣ ಹೊಂದಿದ ನಂತ್ರ ಅವರ ಕುಟುಂಬದ ಓರ್ವ ಸದಸ್ಯನಿಗೆ ಅನುಕಂಪದ ಆಧಾರದಲ್ಲಿ ( Compassionate employment ) ನೀಡುವ ಉದ್ಯೋಗ ಸ್ಥಾಪಿತವಾದ ಹಕ್ಕಲ್ಲ. ಈ ರೀತಿಯ ಉದ್ಯೋಗ ಪಡೆದವರಿಂದ ಕರ್ತವ್ಯ ಲೋಪಗಳಾದರೇ, ಅವರಿಗೆ ನೀಡಲಾದ ಹುದ್ದೆಯ ಅರ್ಹತೆಯನ್ನು ಹೊಂದುವಲ್ಲಿ ವಿಫಲವಾದರೇ, ಅಂತಹವರನ್ನು ಕೆಲಸದಿಂದ ತೆಗೆಯ ಬಹುದು ಎಂದು ಸುಪ್ರೀಂ ಕೋರ್ಟ್ ( Supreme Court ) ಮಹತ್ವದ ಅಭಿಪ್ರಾಯ ಪಟ್ಟಿದೆ.   ಈ ಸಂಬಂಧ ಪ್ರಕರಣವೊಂದರ ವಿಚಾರಣೆ …

Read More »

ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.

ಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ ಹಳ್ಳಿಯೊಂದು ಈ ಹಬ್ಬವನ್ನು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.   ಬೆಳಗಾವಿಯ ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಮೊಹರಂ, ರಂಜಾನ್ ನಂತರ ಎರಡನೇ ಪವಿತ್ರ ಹಬ್ಬವಾಗಿದೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಬರುತ್ತದೆ. ಈ ವರ್ಷ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ …

Read More »

ಅರಣ್ಯ ಅಧಿಕಾರಿಗಳು ಅಳವಡಿಸಿದ್ದ ಕ್ಯಾಮೆರಾ ಕಣ್ಣಿಗೆ ಬಿದ್ದ ಚಿರತೆ

ಬೆಳಗಾವಿ: ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ. ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ.   ಬೆಳಗಾವಿಯ 11 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಡಿಡಿಪಿಐ ಮೌಖಿಕ ಸೂಚನೆಯಂತೆ ಬೆಳಗಾಗಿವೆ ನಗರದ ಬಿಇಒ ಆದೇಶ ಹೊರಡಿಸಿದ್ದಾರೆ. ಜಾಧವ ನಗರ, ಹನುಮಾನ್ ನಗರ, ಕುವೆಂಪು ನಗರ, ಸಹ್ಯಾದ್ರಿನಗರ, ಕ್ಲಬ್ ರಸ್ತೆ, ಕ್ಯಾಂಪ್ ಪ್ರದೇಶದಲ್ಲಿರುವ ಶಾಲೆಗಳಿಗೆ ರಜೆ ನೀಡಲಾಗಿದೆ. ಆಗಸ್ಟ್ 5 …

Read More »

ನಾನು ಹಾಕಿದ್ದು ಬಟ್ಟೆ ಶೂ, ಮಳೆ ಆಗಿದ್ದರಿಂದ ಶೂ ಬಿಚ್ಚಲಿಲ್ಲ : ಕತ್ತಿ ಪ್ರತಿಕ್ರಿಯೆ

ಹನೂರು: ಇಂದು ಮೈಸೂರಿನ ವೀರನಹೊಸಹಳ್ಳಿಯಲ್ಲಿ ಶೂ ಹಾಕಿಕೊಂಡು ಗಜಪಡೆಗೆ ಪೂಜೆ ಸಲ್ಲಿಸಿ ಸಾಕಷ್ಟು ಟೀಕೆಗೆ ಗುರಿಯಾದ ಕುರಿತು ಅರಣ್ಯ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹನೂರು ತಾಲೂಕಿನ ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಉಮೇಶ್ ಕತ್ತಿ ತಾನು ಹಾಕಿರುವುದು ಬಟ್ಟೆ ಶೂ ಆಗಿದ್ದು, ಮಳೆ ಆಗಿದ್ದರಿಂದ ಶೂ ಬಿಚ್ಚಲಿಲ್ಲ, ಪೂಜೆ ಮಾಡುವ ಮುನ್ನ ಬಿಚ್ಚಿದ್ದೆ ಬಳಿಕ‌ ಆನೆಗಳಿಗೆ ಸ್ವಾಗತ ಕೋರುವಾಗ ಹಾಕಿಕೊಂಡಿದ್ದೆ, …

Read More »

ಈ ಕಲಾವಿದನ ಜೀವನಗಾಥೆ ಕೇಳಿದ್ರೆ ಕಲ್ಲು ಮನಸ್ಸಿನವರ ಕಣ್ಣಲ್ಲಿಯೂ ನೀರು ಬರುತ್ತದೆ

BIG ಬಾಸ್ ಕನ್ನಡ ಒಟಿಟಿಯ ಬಹು ನಿರೀಕ್ಷಿತ ಗ್ರ್ಯಾಂಡ್ ಪ್ರೀಮಿಯರ್ ನಿನ್ನೆ ರಾತ್ರಿ ನಡೆಯಿತು. ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್‌ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಬರುವ ಹಲವು ಕಂಟೆಸ್ಟಂಟ್‌ಗಳ ಹಿಂದೆ ನೋವಿನ ಕಥೆ ಇರುತ್ತದೆ. ಜೀವನದಲ್ಲಿ ಹತ್ತಾರು ಕಷ್ಟಗಳನ್ನು ಎದುರಿಸಿ, ನೋವನ್ನು ನುಂಗಿ ಬದುಕಿನಲ್ಲಿ ಸಾಧನೆಗೈದಿರುತ್ತಾರೆ. ಅದೇ …

Read More »

ಕಾಸು ಕೊಟ್ಟರೆ ಪ್ರಾಯೋಗಿಕ ಪರೀಕ್ಷೆ ಪಾಸ್..

ದಾವಣಗೆರೆ: ಪಿಎಸ್​ಐ ನೇಮಕಾತಿ ಹಗರಣದ ನಂತರ ಭ್ರಷ್ಟಾಚಾರದ ವಾಸನೆ ಇದೀಗ ಐಟಿಐ ಪರೀಕ್ಷೆಗಳತ್ತಲೂ ಹರಡಿದೆ. ಮೂರು ಸಾವಿರ ರೂ. ಕೈಗಿಟ್ಟರೆ ಸಲೀಸಾಗಿ ನಕಲು ಮಾಡಬಹುದು! ಪ್ರಯೋಗಾಲಯದಲ್ಲಿ ಪರೀಕ್ಷಾ ಮೇಲ್ವಿಚಾರಕರ ಎದುರು ಯಂತ್ರಗಳ ದುರಸ್ತಿ ಹಾಗೂ ಜೋಡಣೆ ಮಾಡುವುದು ನಿಯಮ. ಆದರೆ, ಹೊರಗಿನಿಂದ ರೆಡಿ ಮಾಡಿಸಿಕೊಂಡು ಬಂದವರಿಗೂ ಅಂಕಗಳು ಗ್ಯಾರಂಟಿ! ದಾವಣಗೆರೆ ಜಿಲ್ಲೆಯ ಮಾಯಕೊಂಡದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪರೀಕ್ಷಾ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಐಟಿಐ ಫಿಟ್ಟರ್ ವಿಭಾಗದ ಎರಡನೇ ವರ್ಷದ …

Read More »

ಪುನೀತ್‌ ರಾಜ್‌ ಕುಮಾರ್ ನೆನಪಿಗಾಗಿ ಆಂಬುಲೆನ್ಸ್ ದೇಣಿಗೆ ನೀಡಿದ ನಟ ಪ್ರಕಾಶ್‌ ರಾಜ್

ಮೈಸೂರು, ಆಗಸ್ಟ್‌ 6: ದಿವಂಗತ ನಟ ಪುನೀತ್‌ ರಾಜ್‌ ಕುಮಾರ್ ನೆನಪಿಗಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ‘ಅಪ್ಪು ಎಕ್ಸ್‌ಪ್ರೆಸ್’ ಆಂಬುಲೆನ್ಸ್ ಅನ್ನು ಮಿಷನ್‌ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ಪುನೀತ್ ರಾಜ್ ಕುಮಾರ್ ಕನ್ನಡ ನಾಡಿನ ಕಣ್ಮಣಿ. ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವದಾದ್ಯಂತ ತನ್ನ ಸಜ್ಜನಿಕೆ, ಸಮಾಜಸೇವೆ, ಒಳ್ಳೆಯತನ ಮತ್ತು ಅಭಿನಯದಿಂದ ಹೆಸರು ಮಾಡಿದ್ದಾರೆ. ಎಲ್ಲರ ಮನದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ. ಕರ್ನಾಟಕದಾದ್ಯಂತ …

Read More »

ಮುಸ್ಲಿಂ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ

ಕೊಪ್ಪಳ ಜಿಲ್ಲೆ): ಜಿಲ್ಲೆಯ ಅಳವಂಡಿಯ ಮುಸ್ಲಿಂ ಕುಟುಂಬವೊಂದು ಹಿಂದೂ ಸಂಸ್ಕೃತಿಯ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿತು. ನಜುರುದ್ದೀನ್ ಬಿಸರಳ್ಳಿ‌ ಹಾಗೂ ರಜಿಯಾಬೇಗಂ ದಂಪತಿ ಮೂರು ವರ್ಷಗಳಿಂದ ಈ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಈ ಸಲವೂ ಎಲ್ಲ ಹಿಂದೂ ಧಾರ್ಮಿಕ ಸಂಪ್ರದಾಯ ಪಾಲಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಸಲುವಾಗಿ ಮನೆಗೆ ದೀಪಾಲಂಕಾರ ಮಾಡಿದ್ದರು. ಹೋಳಿಗೆ ನೈವೇದ್ಯ ಮಾಡಿ ಹಾಗೂ ವಿವಿಧ ತರಹದ ಹಣ್ಣುಗಳು ಸಮರ್ಪಿಸಿ ಭಾವೈಕ್ಯ ಮೆರೆದರು.   …

Read More »

ವಿದ್ಯುತ್​​ ಬಿಲ್​ ಹೆಚ್ಚು ಬರೋದಕ್ಕೆ ಮನೆಯಲ್ಲಿರುವ ಈ ಸಾಧನೆಗಳೇ ಕಾರಣ! ತಕ್ಷಣವೇ ಆಫ್​ ಮಾಡಿ

ಅಧಿಕ ವಿದ್ಯುತ್ ಬಿಲ್ ಜನತೆಗೆ ತಲೆನೋವಿನಂತಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯ ವಿದ್ಯುತ್ ಬಿಲ್ ಕಡಿಮೆ ಬರಬೇಕೆಂದು ಬಯಸುತ್ತಾನೆ. ಆದರೆ ಮನೆಯಲ್ಲಿ ಹಲವಾರು ಸಾಧನಗಳ ನಿರಂತರ ಬಳಕೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ವಿದ್ಯುತ್ ಬಿಲ್ ಅನ್ನು ನೀವು ಕಡಿತಗೊಳಿಸಬಹುದು. ನೀವು ಸಹ ವಿದ್ಯುತ್ ಬಿಲ್ನಿಂದ ತೊಂದರೆಗೀಡಾಗಿದ್ದರೆ ಮತ್ತು ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಬಯಸಿದರೆ, ನಿಮ್ಮ ಮನೆಯಲ್ಲಿ ಹೆಚ್ಚು ವಿದ್ಯುತ್ ಬಳಸುವ …

Read More »

ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ ಅಂಬೇಡ್ಕರ್ ನಗರದಲ್ಲಿ ಘಟನೆ

    ಗೋಕಾಕ ಅ 5 : ಮನೆಯಿಂದ ಶೌಚಾಲಯಕ್ಕೆ ತೆರಳುತ್ತಿರುವ ಮಹಿಳೆಯ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಗರದ 21 ನೇ ವಾರ್ಡ್‍ನ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಬೇದಾ ಮುಸ್ತಫಾ ಕಲ್ಲೋಳಿ ಎಂಬ ಮಹಿಳೆ ಮಧ್ಯಾಹ್ನ ಶೌಚಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬೀದಿ ನಾಯಿಯು ಮಹಿಳೆಯ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೋಳಿಸಿದ್ದು, ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಂಬೇಡ್ಕರ್ …

Read More »