Breaking News
Home / ರಾಷ್ಟ್ರೀಯ (page 520)

ರಾಷ್ಟ್ರೀಯ

ಗೋವಾ ಪ್ರವಾಸಕ್ಕೆಂದು ತೆರಳಿದ್ದ ಮಹಾರಾಷ್ಟ್ರದ 11 ಯುವಕರಿಗೆ ವಂಚನೆ ,ಹುಡುಗಿಯರೊಂದಿಗೆ 11 ಯುವಕರನ್ನು ನಿಲ್ಲಿಸಿ, ಅರೆಬೆತ್ತಲೆ ವಿಡಿಯೋ ಮಾಡಿ ಬ್ಲಾಕ್​ ಮೇಲ್

ಕೊಲ್ಹಾಪುರ(ಮಹಾರಾಷ್ಟ್ರ): ಗೋವಾ ಪ್ರವಾಸಕ್ಕೆಂದು ತೆರಳಿದ್ದ ಮಹಾರಾಷ್ಟ್ರದ 11 ಯುವಕರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅವರನ್ನೆಲ್ಲ ಬೆದರಿಸಿ, ಕೊಠಡಿವೊಂದರಲ್ಲಿ ಕೂಡಿ ಹಾಕಲಾಗಿದ್ದು, ಹುಡುಗಿಯರೊಂದಿಗೆ ಅರೆಬೆತ್ತಲೆ ವಿಡಿಯೋ ಸೆರೆ ಹಿಡಿದು, ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ಗೋವಾಕ್ಕೆ ತೆರಳಿದ್ದ ಯುವಕರನ್ನ ಬೊಂಡಗೇಶ್ವರ ದೇವಸ್ಥಾನದ ಬಳಿ ಕೆಲವು ಅಪರಿಚಿತ ವ್ಯಕ್ತಿಗಳು ತಡೆದು ನಿಲ್ಲಿಸಿದ್ದಾರೆ. ಈ ವೇಳೆ, ನಮ್ಮ ಹೋಟೆಲ್​​​​ನಲ್ಲಿ ಒಳ್ಳೆಯ ಊಟ …

Read More »

ಗಾಂಜಾ ಮಾರಾಟ: ಬೆಳಗಾವಿಯಲ್ಲಿ ಮತ್ತೆ ಮೂವರ ಬಂಧನ

ಬೆಳಗಾವಿ – ಇಲ್ಲಿಯ ಮಾಳಮಾರುತಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಗಾಂಜಾ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.   ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ ಪಾಟೀಲ ನೇತೃತ್ವದ ತಂಡ ಅಶೋಕನಗರ ಇಎಸ್‌ಐ ಆಸ್ಪತ್ರೆಯ ಸಮೀಪ ದಾಳಿ ಮಾಡಿ, ಗಾಂಜಾ ಮಾರಾಟ ಮಾಡುತ್ತಿದ್ದ, ೧) ಸರ್ಫರಾಜ ಸಜರ ಮುಲ್ಲಾ, (೩೫) ಸಾ: ನ್ಯೂ ಗಾಂಧಿನಗರ ಬೆಳಗಾವಿ. ೨) ಜಾಫರ ಹುಸೇನಸಾಬ ಸೊಲ್ಲಾಪೂರ, (೨೪) ಸಾ: ವಡ್ಡರವಾಡಿ ಬೆಳಗಾವಿ, ೩) ನರೇಶ …

Read More »

ಹುಕ್ಕೇರಿ: ಯುವಕರು ವಿದ್ಯಾಭ್ಯಾಸ ಹಾಗೂ ಕ್ರೀಡೆ ಜೊತೆಗೆ ಸಮಾಜಸೇವೆ ಮಾಡಲು ಮುಂದಾಗಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ತಿಳಿ ಹೇಳಿದರು.

  ಹುಕ್ಕೇರಿ: ಯುವಕರು ವಿದ್ಯಾಭ್ಯಾಸ ಹಾಗೂ ಕ್ರೀಡೆ ಜೊತೆಗೆ ಸಮಾಜಸೇವೆ ಮಾಡಲು ಮುಂದಾಗಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ತಿಳಿ ಹೇಳಿದರು. ಹುಕ್ಕೇರಿ ತಾಲೂಕಿನ ಗುಮಚಿನಮರಡಿ ಗ್ರಾಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ,ಪಾಶ್ಚಾಪುರ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಗುಮಚನಮರಡಿ ಗ್ರಾಮದ ಕಮಲಾದೇವಿ ದೇವಾಲಯದ ಅವರಣದಲ್ಲಿ ನಡೆದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಎಸ್.ಎಸ್. …

Read More »

ಬೆಳಗಾವಿಯ ಈ ಏರಿಯಾ ಗಳಲ್ಲಿ ನಾಲ್ಕು ದಿನ ಬೆಳಿಗ್ಗೆ 10ರಿಂದ 5ಗಂಟೆ ವರೆಗೂ ಕರೆಂಟ್ ಇರಲ್ಲ

ಬೆಳಗಾವಿ :ಆಯ್.ಎಸ್ ಶ್ರೀನಗರದ ೩೩ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಹಣೆ ಕಾರ್ಯವನ್ನು ಏಜೆನ್ಸಿ ಎಬಿಬಿ ಮತ್ತು ಕ್ಲಾಸಿಕ್ ಕಂಡಕ್ರ‍್ಸ ಪ್ರೈವೆಟ್ ಲಿಮಿಟೆಡ್ ಬೆಂಗಳೂರವರು ಕೈಗೊಳ್ಳುತ್ತಿರುವುದರಿಂದ ಜೂನ್ 1ರಿಂದ ೪ರವರೆಗೆ 33ಕೆವ್ಹಿ ಜಿ.ಆಯ್.ಎಸ್.ಶ್ರಿನಗರ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ಕೆಲ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ 10ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್ ಆಗಲಿದೆ. ಚನ್ನಮ್ಮಾ ಸೋಸೈಟಿ, ಶ್ರೀನಗರ ಏರಿಯಾ, ಆಂಜನೆಯ ನಗರ ಏರಿಯಾ, ಮಹಾಂತೇಶ ನಗರ, …

Read More »

ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕ ವಿರುದ್ಧ ಜಾಮೀನು ರಹಿತ ವಾರೆಂಟ್

ಬೆಂಗಳೂರು: 5 ಬಾರಿ ವಾರೆಂಟ್ ಜಾರಿಗೊಳಿಸ್ದದರೂ ಕೋರ್ಟ್ ಗೆ ಹಾಜರಾಗದಂತ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕ ( MLA Anil Benake ) ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ನ್ಯಾಯಾಲಯವು ಜಾರಿಗೊಳಿಸಿದೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಲಯದ ನ್ಯಾಯಮೂರ್ತಿ ಜೆ ಪ್ರೀತ್ ಅವರು, ಶಾಸಕರಾಗಿ 5 ಬಾರಿ ವಾರೆಂಟ್ ಜಾರಿಗೊಳಿಸಿದ್ದರು ಅವರನ್ನು, ಕೋರ್ಟ್ ಗೆ ಹಾಜರುವಡಿಸಲು ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ವಿಫಲವಾಗಿದ್ದರು. ಈ ಹಿನ್ನಲೆಯಲ್ಲಿ ಸಿಟ್ಟಾದಂತ …

Read More »

ಕಿಯಾ ಕ್ಯಾರೆನ್ಸ್ ಕಾರನ್ನು ಖರೀದಿಸಬೇಡಿ! ಗ್ರಾಹಕನಿಂದಲೇ ಗ್ರಾಹಕರಿಗೆ ಎಚ್ಚರಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ತನ್ನದೇ ಆದ ಗ್ರಾಹಕರನ್ನು ಸೆಳೆದುಕೊಳ್ಳುತ್ತಿದೆ.ಕಿಯಾ ಕಾರು ವಿಶೇಷ ಫೀಚರ್ಸ್ ಹೊಂದಿದ್ದು, ಇದೇ ಕಾರಕ್ಕೆ ಗ್ರಾಹಕರು ಈ ಕಾರನ್ನು ಖರೀದಿಸುತ್ತಿದ್ದಾರೆ. ಕಾರು ಅಂದ ಮೇಲೆ ಕೆಲವರು ಅದರ ಫೀಚರ್ಸ್ಗೆ ಮಾರು ಹೋಗಿ ಖರೀದಿಸುತ್ತಾರೆ. ಆದರೆ ಕೆಲವರು ಇದರಿಂದ ಸಮಾಧಾನಗೊಂಡರೆ. ಇನ್ನು ಕೆಲವರು ಅಸಮಾಧಾನಗೊಳ್ಳುತ್ತಾರೆ. ಅದರಂತೆಯೇ ಗ್ರಾಹಕರೊಬ್ಬರು ಕಿಯಾ ಕ್ಯಾರೆನ್ಸ್ ಕಾರೊಂದನ್ನು ಖರೀದಿಸಿ ಅದರಿಂದ ಅಸಮಧಾನಗೊಂಡು. ಇದೀಗ ಆ ಕಾರನ್ನು ಬಳಸಿಕೊಂಡು ಕಸ ಹೆಕ್ಕಲು ಉಪಯೋಗಿಸುತ್ತಿದ್ದಾರೆ. ಅದರೊಂದಿಗೆ ಈ …

Read More »

ಸಂಘದ ಪದಾಧಿಕಾರಿಗಳು, ರಾಜ್ಯ ಸಮಿತಿ ಪದಾಧಿಕಾರಿಗಳು ಸಭೆ ಸೇರಿ ಸಮಾಲೋಚನೆ ನಡೆಸಿದರು. ಈ ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾಗೊಳಿಸುವಂತ ತೀರ್ಮಾನ

ಶಿವಮೊಗ್ಗ : ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ( Kodihalli Chandrashekhar ) ಅವರನ್ನು ವಜಾಗೊಳಿಸಲಾಗಿದೆ. ಅಲ್ಲದೇ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಹೆಚ್.ಆರ್. ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಈ ಸಂಬಂಧ ರಾಜ್ಯ ರೈತ ಸಂಘದಿಂದ ಶಿವಮೊಗ್ಗದಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು. ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಇಂದು 18 ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳು, …

Read More »

ನೂರಾರು ಕೋಟಿ ಕರ್ಚು ಮಾಡಿ ಕಟ್ಟಿರುವ ಬೆಳಗಾವಿಯ ಸುವರ್ಣ ಸೌಧ ಹಪ್ಪಳ ಶಾವಿಗೆ ಒಣಗಿಸಲು…

ನೂರಾರು ಕೋಟಿ ಕರ್ಚು ಮಾಡಿ ಕಟ್ಟಿರುವ ಬೆಳಗಾವಿಯ ಸುವರ್ಣ ಸೌಧ ಹಪ್ಪಳ ಶಾವಿಗೆ ಒಣಗಿಸಲು…. ಬೆಳಗಾವಿಯ ಸುವರ್ಣ ಸೌಧ ಹಪ್ಪಳ ಶಾವಿಗೆ ಸಂಡಿಗೆ ಒಣಗಿಸಲು ಸೀಮಿತ ವಾಯ್ತ ಅಂತ ಸೋಶಿಯಲ್ ಮೀಡಿಯಾದಲ್ಲಿ ಪಿಕ್ಚರ್ ಗಳು ವೈರಲ್ ಆಗಿವೆ .   ನೂರಾರು ಕೋಟಿ ಕರ್ಚು ಮಾಡಿ ಕಟ್ಟಿರುವ ಸುವರ್ಣ ಸೌಧ ಇದಕ್ಕಾದರು ಉಪಯೋಗಕ್ಕೆ ಬರುತ್ತಿದೆ ಎಂದು ಸೋಶಿಯಲ್ ಮೀಡಿಯಾ ದಲ್ಲೀ ಟ್ರೊಲ್ ಮಾಡುತ್ತಿದ್ದಾರೆ ಬರಿ ಅಧಿವೇಶನಕ್ಕೆ ಸೀಮಿತ ವಾಗಿರುವ ಬೆಳಗಾವಿಯ …

Read More »

ಬೇನಾಮಿ ವಹಿವಾಟು: ಡಿ.ಕೆ ಶಿವಕುಮಾರ್ ದೆಹಲಿ ಕೋರ್ಟ್‌ನಿಂದ ಸಮನ್ಸ್ ಜಾರಿ

ಬೆಂಗಳೂರು, ಮೇ 31: ಡಿ.ಕೆ. ಶಿವಕುಮಾರ್ ವಿರುದ್ಧ 8.5 ಕೋಟಿ ರೂ. ಬೇನಾಮಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ( ಇಡಿ ) ದಾಖಲಿಸಿರುವ ಪ್ರಕರಣದ ವಿಚಾರಣೆ ಆರಂಭವಾಗಿದೆ. ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ದೆಹಲಿಯ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಡಿ.ಕೆ. ಶಿವಕುಮಾರ್ ಮತ್ತು ಐವರಿಗೆ ಸಮನ್ಸ್ ಜಾರಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಜನ ಪ್ರತಿನಿಧಿಗಳ …

Read More »

ರಾಜ್ಯದಲ್ಲೂ ಶುರುವಾಯ್ತು ಡೀಸೆಲ್‌ ಅಭಾವ , ಡೀಸೆಲ್ ಸಿಗದೆ ಗ್ರಾಹಕರ ಪರದಾಟ

ಬೇಸಿಗೆಯಲ್ಲಿ ನೀರಿಗೆ ಅಭಾವ ಆಗೋದು ಸಹಜ, ಆದರೀಗ ರಾಜ್ಯದಲ್ಲಿ ಡೀಸೆಲ್ ಅಭಾವ ಶುರುವಾಗಿದೆ. ರಾಜ್ಯದ ಬಹುತೇಕ ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಡೀಸೆಲ್ ಕೊರತೆ ಎದುರಾಗಿದೆ. ಕಳೆದ 1 ವಾರದಿಂದ ಸಮಸ್ಯೆ ಉಂಟಾಗುತ್ತಿದ್ದು,ಬಿಪಿಸಿಎಲ್ ಬಂಕ್‌ನಲ್ಲಿ ಡೀಸೆಲ್ ನೋ ಸ್ಟಾಕ್ ಬೋರ್ಡ್ ಕಾಣುತ್ತಿವೆ. ಬಹುತೇಕ ಬಿಪಿಸಿಎಲ್ ಬಂಕ್‌ಗಳಲ್ಲಿ ಇದೇ ಸಮಸ್ಯೆ ಎದುರಾಗಿದೆ. ಇದ್ರಿಂದ ಅಕ್ಕ ಪಕ್ಕದ ಇಂಡಿಯನ್ ಆಯಿಲ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ಖಾಸಗಿ ಬಂಕ್‌ಗಳತ್ತ ಗ್ರಾಹಕರು ಮುಖ ಮಾಡಿದ್ದಾರೆ.  ಬಿಪಿಸಿಎಲ್ …

Read More »