Home / ರಾಷ್ಟ್ರೀಯ (page 418)

ರಾಷ್ಟ್ರೀಯ

ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಎಲ್ಲದಕ್ಕೂ ಉತ್ತರ ನೀಡವ ಅವಶ್ಯಕತೆ ಇಲ್ಲ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ 

  ಗೋಕಾಕ: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತ ಪಡೆಯುವುದು ಖಚಿತ. ಹೀಗಾಗಿ ಕಾಂಗ್ರೆಸ್‌ ಪಕ್ಷ ಕಳೆದ ಒಂದು ವರ್ಷದಿಂದಲೇ ಚುನಾವಣೆ ತಯಾರಿ ನಡೆಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.   ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಿಂದ ಕಳೆದ ಒಂದು ವರ್ಷದಲ್ಲಿ ಭಾರತ ಜೋಡೋ ಯಾತ್ರೆ, ಪ್ರಜಾಧ್ವನಿ ಯಾತ್ರೆ ಸೇರಿದಂತೆ 3ರಿಂದ 5 ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು, ಈಗ ಮತ್ತೆ ವಿಧಾನಸಭಾ …

Read More »

ರಸ್ತೆ ಕಾಮಗಾರಿ ವೇಳೆ ಹೊಂಡಕ್ಕೆ ಉರುಳಿದ ಟ್ರಕ್: ನಾಲ್ವರು ಕಾರ್ಮಿಕರಿಗೆ ಗಂಭೀರ ಗಾಯ

ಪಣಜಿ: ರಸ್ತೆಯ ಪಕ್ಕದ ಹೊಂಡದಲ್ಲಿ ಚಕ್ರ ಸಿಲುಕಿ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿರುವ ಘಟಕೆ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಕುಲೋ ಮಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ 4 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.   ಕಳೆದ ಐದಾರು ತಿಂಗಳಿಂದ ಈ ರಸ್ತೆಯ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಎರಡೂ ಬದಿಗಳನ್ನು ಅಗೆಯಲಾಗಿದೆ. ಇಟ್ಟಿಗೆಗಳನ್ನು ಹೇರಿಕೊಂಡು ಬಂದ ಟಿಪ್ಪರ್ ರಸ್ತೆಯಲ್ಲಿ ಅಗೆದ ಹೊಂಡಕ್ಕೆ ಬಿದ್ದಿದೆ …

Read More »

ಬ್ರಾಹ್ಮಣರು ಮುಖ್ಯಮಂತ್ರಿಯಾಗಬಾರದೆ?: ಪೇಜಾವರ ಶ್ರೀ

ಮದ್ದೂರು: ಬ್ರಾಹ್ಮಣರು ಯಾಕೆ ಮುಖ್ಯಮಂತ್ರಿಯಾಗಬಾರದು? ಅವರು ಭಾರತದ ಪ್ರಜೆಗಳಲ್ಲವೇ? ಸಂಖ್ಯಾ ಬಲ ಇಲ್ಲ. ಅಲ್ಪಸಂಖ್ಯಾಕರಾಗಿದ್ದಾರೆ. ಆದ್ದರಿಂದ ಈ ರೀತಿಯಾಗಿ ಮಾತನಾಡುತ್ತಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.   ಪಟ್ಟಣದ ಐತಿಹಾಸಿಕ ಶ್ರೀಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದಲೂ ಬ್ರಾಹ್ಮಣರ ವಿರುದ್ಧ ಹೇಳಿಕೆಗಳು ಕೇಳಿ ಬರುತ್ತಿದೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಹೆಚ್ಚಾಗಿ ಕೇಳಿ ಬರುತ್ತಿದ್ದು, ಬ್ರಾಹ್ಮಣರು …

Read More »

ಕನ್ನಡಿಗರ ಮೇಲೇಕೆ ಅಷ್ಟು ದ್ವೇಷ? ಸಿದ್ದರಾಮಯ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಈ ನಡುವೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ #ಆನ್ಸರ್‌ಮಾಡಿಮೋದಿ ಎಂಬ ಹ್ಯಾಷ್ ಟ್ಯಾಗ್ ನೀಡಿ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.   ಇದು ಚುನಾವಣಾ ಸಂದರ್ಭ ಆಗಿರುವುದರಿಂದ ನರೇಂದ್ರ ಮೋದಿ, ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬರಗಾಲದ ಸಂದರ್ಭ ಮೋದಿ ರಾಜ್ಯದ ನೆರವಿಗೆ ಬರಲಿಲ್ಲ. ಆದರೆ, ಈಗ ಮತ ಕೇಳಲು ಬರುತ್ತಿದ್ದಾರೆ. ಈ ಬಾರಿಯ …

Read More »

ಅಲ ಮಹದಿ ಟ್ರೋಫಿ ವಿಜೇತರಾದ ಗೋಕಾಕ ಫುಟ್ಬಾಲ್ ಕ್ಲಬ್

ಗೋಕಾಕ: ಬೆಳಗಾವಿಯ ಅನಗೊಳ ಪ್ರದೇಶದಲ್ಲಿ ಅಲ ಮಹದಿ ಟ್ರೋಫಿ ಎಂಬ ಫುಟ್ ಬಾಲ್ ಪಂದ್ಯ ದವರು ಆಯೋಜನೆ ಮಾಡಿದ್ದ ಟೂರ್ನಮೆಂಟ್ ನಲ್ಲಿ ಗೋಕಾಕ ತಂಡ ವಿಜೇತರಾ ಗಿದ್ದಾರೆ U22 ಫೂಟ ಬಾಲ ಟೂರ್ನಮೆಂಟ್ ನಲ್ಲಿ ಗೋಕಾಕ ತಂಡ ವಿಜೇತರಾಗಿ ಮೊದಲನೆಯ ಬಾರಿಗೆ ಈ ಒಂದು ಟ್ರೋಫಿ ತನ್ನ ಮಡಿಲಿಗೆ ಗೋಕಾಕ ತಂಡ ಸೇರ್ಪಡೆ ಮಾಡಿಕೊಂಡಿದೆ . ಇದರ ನಾಯಕತ್ವ ವಹಿಸಿದಿ ಅರ್ಯನ ಸಾಯ ನ್ನವರ ಅವರು ತಮ್ಮ ತಂಡದ ಬಗ್ಗೆ …

Read More »

ನೀರಾವರಿ: ₹22,200 ಕೋಟಿ ಟೆಂಡರ್ ಅಕ್ರಮ -ಬಿಜೆಪಿ ಶಾಸಕ ಗೂಳಿಹಟ್ಟಿ ಆರೋಪ

ಬೆಂಗಳೂರು: ವಿವಿಧ ನೀರಾವರಿ ನಿಗಮಗಳಲ್ಲಿ ₹22,200 ಕೋಟಿ ಮೊತ್ತದ ಟೆಂಡರ್ ಅಕ್ರಮ ನಡೆದಿದ್ದು, ಟೆಂಡರ್‌ಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.   ಅಕ್ರಮದ ಕುರಿತು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಫೆ.3ರಂದು ದೂರು ನೀಡಿರುವ ಅವರು, ಕಾಮ ಗಾರಿಗಳ ಕಾರ್ಯಾದೇಶ ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಗೂಳಿಹಟ್ಟಿ ಸಲ್ಲಿಸಿರುವ ಪತ್ರ ‘ಲಭ್ಯವಾಗಿದೆ. …

Read More »

ಬಿಜೆಪಿ ನಾಯಕನಿಗೆ ಜೆಡಿಎಸ್ ಟಿಕೆಟ್ ಎಲ್ಲಿ ಗೊತ್ತಾ?

ಹಾಸನ ಜಿಲ್ಲೆಯ ಅರಕಲಹೊಳೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಮಾಜಿ ಸಚಿವ ಎ ಮಂಜು ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ. ಹಾಲಿ ಶಾಸಕ, ಪಕ್ಷದ ಮುಖಂಡ ಎಟಿ ರಾಮಸ್ವಾಮಿ ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದೆ.   ಇಷ್ಟು ವರ್ಷ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬದ ಪಿತಾಮಹ ಎಂದು ಪರಿಗಣಿಸಲ್ಪಟ್ಟಿರುವ ಜೆಡಿಎಸ್ ನಡೆ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ. ಇದೇ ವೇಳೆ ರಾಮಸ್ವಾಮಿ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಅವರು ಕಾಂಗ್ರೆಸ್‌ಗೆ …

Read More »

ರೀಲ್ಸ್‌ನಲ್ಲಿ ಪರಿಚಯವಾದವನ ಜತೆ ಪತ್ನಿ ಪರಾರಿ

ಬೆಂಗಳೂರು: ಇತ್ತೀಚೆಗೆ ಚಿಕ್ಕಮಕ್ಕಳಿಂದ ವೃದ್ಧವರೆಗಿನ ಎಲ್ಲ ವಯಸ್ಸಿನವರು ರೀಲ್ಸ್‌ (ಮನರಂಜನೆ ಮೊಬೈಲ್‌ ಆಯಪ್‌)ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಮಹಿಳೆ ಪತಿಯನ್ನು ತೊರೆದು ರೀಲ್ಸ್‌ನಲ್ಲಿ ಪರಿಚಯವಾದ ವ್ಯಕ್ತಿ ಜತೆ ನಾಪತ್ತೆಯಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.   ಈ ಘಟನೆಯಿಂದ ವಿಚಲಿತಗೊಂಡಿರುವ ಪತಿ, ಸುಬೇದಾರಪಾಳ್ಯ ನಿವಾಸಿ ಜೋಸೆಫ್ ಆಂಟೋನಿ ಎಂಬುವರು ಪತ್ನಿ ನಮಿತಾ ಕುಮಾರಿ ಮತ್ತು ನಾಲ್ಕು ವರ್ಷದ ಮಗನನ್ನು ಹುಡುಕಿಕೊಡುವಂತೆ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಸಿ ಕ್ಯಾಮೆರಾ …

Read More »

ಐಗಳಿ: ಭೈರವನಾಥ ಜಾತ್ರೆ ಇಂದಿನಿಂದ

ಐಗಳಿ : ಇಲ್ಲಿಯ ಭೈರವನಾಥ ದೇವರ ಜಾತ್ರೆ ಫೆ. 5 ಹಾಗೂ 6ರಂದು ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಲಿವೆ. ಫೆ.5ರಂದು ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ, ನಂತರ ಹಂದರ ಹಾಕುವುದು. ಮಧ್ಯಾಹ್ನ ದೇವರಿಗೆ ಮಹಾ ನೈವೇದ್ಯ ಅರ್ಪಿಸುವುದು, ಸಂಜೆಯಲ್ಲಿ ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ನಂತರ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯಗಳ ಮೂಲಕ ನಡೆಯಲಿದೆ. ರಾತ್ರಿ ಇಂಗಳಿ ಹಾಗೂ ಸತ್ತಿ …

Read More »

ಬಿಜೆಪಿಗೆ 130 ಸ್ಥಾನ ಖಚಿತ, ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಎಸ್‌ವೈ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 130ರಿಂದ 140 ಸ್ಥಾನಗಳನ್ನು ಪಡೆಯಲಿದೆ. ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ (ಬಿಜೆಪಿ) 130ರಿಂದ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ …

Read More »